Slide
Slide
Slide
previous arrow
next arrow

ವಲಯ ಮಟ್ಟದ ಚೆಸ್, ಯೋಗಾಸನ ಸ್ಪರ್ಧೆ

300x250 AD

ಯಲ್ಲಾಪುರ: ಯಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಮೊರಾರ್ಜಿ ವಸತಿ ಶಾಲೆ ಸಹಯೋಗದಲ್ಲಿ ವಲಯ ಮಟ್ಟದ ಚೆಸ್ ಮತ್ತು ಯೋಗಾಸನ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ವಿವಿಧ ಪ್ರೌಢಶಾಲೆಗಳ 40ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ವಸತಿ ಶಾಲೆಯ ಪ್ರಾಂಶುಪಾಲ ಸಂಜಯ ನಾಯಕ ಮಾರ್ಗದರ್ಶನ ನೀಡಿದರು. ಶಿಕ್ಷಕರಾದ ಮಂಜುನಾಥ ನಾಯ್ಕ, ಗುರು ಬಂಟ್, ಮಹೇಶ ನಾಯ್ಕ, ಶ್ರೀದೇವಿ ಗೌಡ, ನಾಗರತ್ನಾ ನಾಯಕ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ನಾರಾಯಣ ನಾಯಕ, ನಂದೊಳ್ಳಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವಿ.ಪಿ.ಭಟ್ ಇದ್ದರು. ನಿಲಯಪಾಲಕರಾದ ಪ್ರವೀಣಕುಮಾರ ಸ್ವಾಗತಿಸಿದರು. ಶಿವರಾಮ ಭಾಗ್ವತ್ ವಂದಿಸಿದರು. ಯೋಗಿತಾ ನಾಯ್ಕ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top