ಅಂಕೋಲಾ: ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಆಪ್ತ ಕಾರ್ಯದರ್ಶಿಯಾಗಿ ಪಿಡಿಓ ಮಂಜುನಾಥ ಟಿ.ಸಿ. ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಕ್ರಿಯಾಶೀಲ ವ್ಯಕ್ತಿತ್ವದ ಮಂಜುನಾಥ ಅವರು ಅಚವೆ ಹಾಗೂ ಡೊಂಗ್ರಿ ಗ್ರಾಮ ಪಂಚಾಯತದ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪಿಡಿಓ ಆಗಿ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಂಜುನಾಥ, ಪಿಡಿಓ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿ ಮತ್ತು ನೌಕರರ ಸಂಘದ ತಾಲೂಕಾ ಕ್ರೀಡಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಚವೆಯಲ್ಲಿ ನಡೆದ ಕಂದಾಯ ಸಚಿವ ಅಶೋಕ ಅವರ ಗ್ರಾಮ ವಾಸ್ತವ್ಯ ಯಶಸ್ವಿಯಾಗಿ ನಿರ್ವಹಿಸಿದ್ದ ಇವರು, ಅಚವೆ ಗ್ರಾಮ ಪಂಚಾಯತಕ್ಕೆ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಸ್ವಚ್ಛತಾ ಪ್ರಶಸ್ತಿ ಮತ್ತು ಅಮೃತ ಗ್ರಾಮ ಪಂಚಾಯತ ಪುರಸ್ಕಾರಕ್ಕೆ ಪಾತ್ರವಾಗುವಲ್ಲಿ ವಿಶೇಷವಾಗಿ ಪಾತ್ರ ನಿರ್ವಹಿಸಿದ್ದರು. ಗ್ರಾಮಾಭಿವೃದ್ಧಿಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಮಂಜುನಾಥ ಅವರನ್ನು ಆಪ್ತ ಕಾರ್ಯದರ್ಶಿಯಾಗಿ ಸಚಿವರ ಕಚೇರಿಗೆ ನಿಯೋಜಿಸಲಾಗಿದೆ.