ಶಿರಸಿ: ವಿವೇಕಾನಂದ ನಗರದ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಆ. 20 ಶನಿವಾರ ಸಂಜೆ 4-30 ರಿಂದ ಶ್ರಾವಣ ಸಂಭ್ರಮದ ಅಂಗವಾಗಿ ತಾಳಮದ್ದಲೆ ಕಾರ್ಯಕ್ರಮ ನಡೆಯಲಿದೆ. ಯಕ್ಷಗಾನ ವಿದ್ವಾಂಸ ಪ್ರೊ. ಡಾ|| ಜಿ.ಎ. ಹೆಗಡೆ ಸೋಂದಾ ವಿರಚಿತ ಕೃತಿ “ಸಂಕಷ್ಟಿವೃತ ಮಹಾತ್ಮೆ”ಯ ತಾಳಮದ್ದಲೆಯು ಶಿರಸಿಯ ಯಕ್ಷಶುಭೋದಯದಿಂದ ನಡೆಯಲಿದೆ.
ಹಿಮ್ಮೆಳದಲ್ಲಿ ಹೊನ್ನಾವರದ ಗೋಪಾಲಕೃಷ್ಣ ಭಾಗ್ವತ ಕಡತೋಕ (ಸಂಪಾದಕರು ಯಕ್ಷರಂಗ ಪತ್ರಿಕೆ), ಪಿ.ಕೆ. ಹೆಗಡೆ ಹರಿಕೇರಿ, ಕುಮಾರ ಮಯೂರ ಹೆಗಡೆ ಹರಿಕೇರಿ, ಭಾಗವಹಿಸಲಿದ್ದಾರೆ.
ಪ್ರಧಾನ ಅರ್ಥದಾರಿಗಳಾಗಿ ಡಾ|| ಜಿ.ಎ. ಹೆಗಡೆ, ಸೋಂದಾ (ವಿಶಾಲನಗರ), ಡಾ|| ಎಸ್.ಡಿ. ಹೆಗಡೆ ಹೊನ್ನಾವರ, ಎಮ್. ಆಯ್. ಹೆಗಡೆ ಮಾಳಕೋಡ, (ಪ್ರಗತಿ ನಗರ) ಬಾಲಚಂದ್ರ ಭಟ್ಟ ಕರಸೊಳ್ಳಿ, ಆರ್. ಟಿ. ಭಟ್ಟ ಕಂಬಗಾಲ, ಜ್ಯೋತಿ ಅಶ್ವತ ಹೆಗಡೆ, ಚಿಂತಕರ ಛಾವಡಿಯ ಎಸ್.ಎಸ್. ಭಟ್ಟ ಭಾಗವಹಿಸಲಿದ್ದಾರೆ. ಎಂದು ಯಕ್ಷಶುಭೋದಯದ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿ ಯಕ್ಷಗಾನಾಸಕ್ತ ಅಭಿಮಾನಿಗಳನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದಾರೆ.