ಶಿರಸಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮರಾಠಿಕೊಪ್ಪ ಒಕ್ಕೂಟ 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ಮತ್ತು ಸಭಾ ಕಾರ್ಯಕ್ರಮವನ್ನು ಆ.15 ರಂದು ನೆರವೇರಿಸಲಾಯಿತು. ಸಹಾಯ ಟ್ರಸ್ಟ ಅಧ್ಯಕ್ಷ ಸತೀಶ ಶೆಟ್ಟಿ, ಮರಾಠಿಕೊಪ್ಪ ಇವರನ್ನು ಸನ್ಮಾನಿಸಲಾಯಿತು. ಹಾಗೂ ಸಂಘದ 5 ಜನ ಹಿರಿಯ ಸದಸ್ಯರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷರಾದ ನಂದನ್ ಸಾಗರ ಅವರು ಉಪಸ್ಥಿತರಿದ್ದರು. ಹಾಗೂ ಶಿರಸಿ ತಾಲೂಕಿನ ಯೋಜನಾಧಿಕಾರಿಯವರಾದ ರಾಘವೇಂದ್ರ ನಾಯ್ಕ ಮತ್ತು ಮೇಲ್ವಿಚಾರಕರಾದ ಮಾದೇವ, ಸೇವಾ ಪ್ರತಿನಿಧಿ ಇಂದಿರಾ ಹಾಗೂ ವಾರ್ಡಿನ ಶರ್ಮಿಳಾ ಮಾದನಗೇರಿ ಇವರು ಹಾಗೂ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.