ಸಿದ್ದಾಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ, ಸುಮಾರು 85 ವರ್ಷ ದಾಟಿದ ಹಿರಿಯ ನಾಗರಿಕರಾದ ಸೀತಾರಾಮ ಲಕ್ಷ್ಮೀ ನಾರಾಯಣ ಹೆಗಡೆ ಶಿಂಗು ತ್ಯಾಗಲಿ,ಮತ್ತು ಸುಬ್ರಾಯ ವೀರಪ್ಪ ಹೆಗಡೆ ತೆರಗಡ್ಡೆ ತ್ಯಾಗಲಿ ಇವರನ್ನು ಗೌರವಾನ್ವಿತ ಅತಿಥಿಗಳಾಗಿ ಕರೆಸಿ ಗೌರವಿಸುವ ಅಭಿನಂದಿಸುವ.ಕಾರ್ಯಕ್ರಮವು ತಾಲೂಕಿನ ಕಿರಿಯ ಪ್ರಾಥಮಿಕ ವನಶ್ರೀ ನಗರ ತ್ಯಾಗಲಿ ಶಾಲೆಯಲ್ಲಿ ಬೆಳಿಗ್ಗೆ 10-00 ಗೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು, ಶಾಲೆಯ SDMC ಅಧ್ಯಕ್ಷರಾದ ಗಣಪತಿ ನಾ ನಾಯ್ಕ ತ್ಯಾಗಲಿ ವಹಿಸಿದ್ದರು,ಮುಖ್ಯ ಅತಿಥಿಗಳಾಗಿ ತ್ಯಾಗಲಿ ಗ್ರಾಮ ಪಂಚಾಯತದ ಸದಸ್ಯರಾದ ಗಣಪತಿ ಅಣ್ಣಪ್ಪ ಹೆಗಡೆ ತ್ಯಾಗಲಿ ಹಾಜರಿದ್ದರು, ಹಿರಿಯರಾದ ನಿವೃತ್ತ ಶಿಕ್ಷಕಿ ಸುಮಿತ್ರಾ ಭಟ್ಟ ಅವರು, ನಾಗಪತಿ ಹೆಗಡೆ ಬುಳ್ಳಿ,ಮುಖ್ಯ ಶಿಕ್ಷಕಿ ಶ್ರೀಮತಿ ಪದ್ಮಾ ಎಸ್ ಅವರು,ವಕೀಲರಾದ ಎಸ್.ಆರ್. ಹೆಗಡೆ ತ್ಯಾಗಲಿ, ತ್ಯಾಗಲಿ ಸೇವಾ ಸಹಕಾರಿ ಸಂಘದ ನಿರ್ದೇಶಕ ಶಂಕರ ನಾ ಆದಿದ್ರಾವಿಡ,ಜಿಕ್ನಮನೆ, ವಿ ಎಮ್ ಹೆಗಡೆ ಶಿಂಗು ತ್ಯಾಗಲಿ, ಉಪೇಂದ್ರ ಪೈ ಸೇವಾ ಟ್ರಸ್ಟ್ ನ ಸದಸ್ಯರಾದ ರಮೇಶ ಟಿ ನಾಯ್ಕ ಹಂಗಾರಖಂಡ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ವಸಂತ ಕೃ ಹೆಗಡೆ ತ್ಯಾಗಲಿ,ಹಾಗೂ ಶಾಲೆಯ SDMC ಯ ಪದಾಧಿಕಾರಿಗಳು, ಶಿಕ್ಷಕ ವೃಂದ, ಪಾಲಕರು, ಪೋಷಕರು,ಮುದ್ದು ಮಕ್ಕಳು ಉಪಸ್ಥಿತರಿದ್ದರು. ಸ್ವಾಗತ ಗೀತೆಯನ್ನು ಶ್ರೀಮತಿ ಶ್ರೀಮತಿ ಮಂಜುನಾಥ ಹೆಗಡೆ ಹಂಗಾರಖಂಡ ಅವರೇ ಸ್ವಂತ ರಚಿಸಿ ಸುಂದರವಾಗಿ ಹಾಡಿದರೆ, ಸ್ವಾಗತ ಮತ್ತು ನಿರೂಪಣೆಯನ್ನು ಶಾಲೆಯ ಶಿಕ್ಷಕಿ ಶ್ರೀಮತಿ ಮೈನಾವತಿ ನಡೆಸಿದರೆ,ವನಶ್ರೀ ಅಂಗನವಾಡಿ ಶಿಕ್ಷಕಿ ಶ್ರೀಮತಿ ರೇಖಾ ಭಟ್ಟ ಸರ್ವರಿಗೂ ವಂದಿಸಿದರು.