Slide
Slide
Slide
previous arrow
next arrow

ಗೋಳಿ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

300x250 AD

ಶಿರಸಿ: ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ಆ.15 ರಂದು ಮುಂಜಾನೆ 8.30 ಗಂಟೆಗೆ ಧ್ವಜಾಹೋಹಣ ಕಾರ್ಯಕ್ರಮವನ್ನು ಶ್ರೀ ಸಿದ್ಧಿವಿನಾಯಕ ವಿದ್ಯಾ ಪ್ರಸಾರ ಸಮಿತಿ ಗೋಳಿ ಇದರ ಅಧ್ಯಕ್ಷರಾದ ಎಮ್‌.ಎಲ್. ಹೆಗಡೆ ಹಲಸಿಗೆ ಇವರು ನೆರವೇರಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ 2021: 22 ನೇ ಸಾಲಿನ ಎಸ್‌ಎಸ್‌ಎಲ್ ಸಿ ಹಾಗೂ ಶಾಲಾ ವಾರ್ಷಿಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ದಾನಿಗಳು ಇಟ್ಟ ದತ್ತಿನಿಧಿ ಬಹುಮಾನಗಳನ್ನು ವಿತರಿಸಲಾಯಿತು. ಸಮಿತಿಯ ಉಪಾಧ್ಯಕ್ಷ ದಿವಾಕರ ಗ. ಹೆಗಡೆ ಟೊಣ್ಣೆಮನೆ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ರಮೇಶ ಭಟ್ಟಅಬ್ಬಿಹದ್ದ, ಶ್ರೀಮತಿ ಸರಸ್ವತಿ ಹೆಗಡೆ ಮುಳಕನಹಳ್ಳಿ, ಗಜಾನನ ಹೆಗಡೆ ದೊಡ್ಮನೆ, ನೆಗ್ಗು ಪಂಚಾಯತ ಸದಸ್ಯರಾದ ಶ್ರೀಮತಿ ನೇತ್ರಾವತಿ ಹೆಗಡೆ, ದಾನಿಗಳಾದ ಶಂಕರ ಎಸ್ ಹೆಗಡೆ ಹುಣಸೆಕೊಪ್ಪ ಇವರುಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top