ಶಿರಸಿ: ಶಿರಸಿ ಲಯನ್ಸ್ ಕ್ಲಬ್ನ ನೂತನ ಪದಾಧಿಕಾರಿಗಳು ನೇತ್ರದಾನ ಜಾಗೃತಿ ಸಂದೇಶವುಳ್ಳ ವಿನೂತನ ಮಾದರಿಯ ಫಲಕದೊಂದಿಗೆ ಗೋಡೆ ಗಡಿಯಾರವನ್ನು ಶಿರಸಿ ಕೇಂದ್ರ ಬಸ್ ನಿಲ್ದಾಣದಲ್ಲಿ ಲಯನ್ಸ್ ಬಂಧು-ಬಗಿನಿಯರು, ಲಯನ್ಸ್ ನಯನ ನೇತ್ರ ಭಂಡಾರದ ಮುಖ್ಯಸ್ಥ ವೈದ್ಯರುಗಳು ಹಾಗೂ ಕೆ.ಎಸ್.ಆರ್.ಟಿ.ಸಿ ಡಿಸಿ ಸಮೇತ ಸಿಬ್ಬಂದಿಗಳ ಜೊತೆಗೂಡಿ ಬಸ್ ನಿಲ್ದಾಣದಲ್ಲಿ ಅಳವಡಿಸಲಾಯಿತು.
ಪ್ರಾರಂಭದಲ್ಲಿ ನೂತನ ಅಧ್ಯಕ್ಷರಾದ ಲಯನ್ ಗುರುರಾಜ ಹೊನ್ನಾವರ ಎಲ್ಲರನ್ನು ಸ್ವಾಗತಿಸುತ್ತಾ ಪ್ರಾಸ್ತಾವಿಕವಾಗಿ ಲಯನ್ಸ್ ಕ್ಲಬ್ನ ಧ್ಯೇಯ-ಧೋರಣೆಗಳನ್ನು ಹಾಗೂ ನೇತ್ರದಾನದ ಮಹತ್ವದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕರ್ನಾಟಕ ಕೆ.ಎಸ್.ಆರ್.ಟಿ.ಸಿ. ಡಿಸಿಯವರಾದ ಬಸವರಾಜ ಅಮ್ಮನವರ ಲಯನ್ಸ್ ಕ್ಲಬ್ ಶಿರಸಿಯವರ ಜನೋಪಯೋಗಿ ಕೆಲಸದ ಕುರಿತು ಅಭಿಮಾನ ಪೂರಕವಾಗಿ ಹೊಗಳಿದರು.
ಲಯನ್ಸ್ ನಯನ ನೇತ್ರ ಭಂಡಾರದ ಮುಖ್ಯಸ್ಥರಾದ ಡಾ. ಶಿವರಾಮ ಕೆ. ಹಾಗೂ ಲಯನ್ ಡಾ.ಅಂಕದ್ರವರು ಲಯನ್ ನೇತ್ರ ಭಂಡಾರ ಸಾರ್ವಜನಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಕುರಿತು ಸಭೆಗೆ ವಿಶ್ಲೇಷಿಸಿದರು. ಅಂಧರ ಬಾಳಿನಲ್ಲಿ ಬೆಳಕು ಚೆಲ್ಲುವ ನಯನ ನೇತ್ರ ಭಂಡಾರಕ್ಕೆ ಸಾರ್ವಜನಿಕರು ತಮ್ಮ ನಿಧನದ ನಂತರ ನೇತ್ರದಾನ ಮಹಾದಾನವೆಂಬ ಸಂದೇಶಕ್ಕೆ ಪೂರಕವಾಗಿ ಸಹಕರಿಸಲು ವಿನಂತಿಸಿದರು.
ಸಮಾರಂಭದಲ್ಲಿ ಲಯನ್ ಉದಯ ಸ್ವಾದಿ, ಲಯನ್ ಲೋಕೇಶ ಹೆಗಡೆ, ಲಯನ್ ಶ್ರೀಕಾಂತ ಹೆಗಡೆ, ಲಯನ್ ವಿ.ಎಮ್. ಭಟ್ಟ, ಲಯನ್ ಶಂಕರ ಹೆಗಡೆ, ಲಯನ್ ಪ್ರತಿಭಾ, ಲಯನ್ ಜ್ಯೋತಿ ಭಟ್ಟ, ಲಯನ್ ಶೀತಲ ಸ್ವಾದಿ, ಲಯನ್ ಅರ್ಚನಾ ಹೆಗಡೆ ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಲಯನ್ ಅಶ್ವಥ ಹೆಗಡೆ ಮತ್ತು ಕಾರ್ಯದರ್ಶಿಯಾದ ಲಯನ್ ವಿನಾಯಕ ಭಾಗ್ವತ ಹಾಗೂ ನೂತನ ಖಜಾಂಜಿಗಳಾದ ಲಯನ್ ಪ್ರಕಾಶ ಹೆಗಡೆ, ಲಯನ್ ಪ್ರವೀಣ ಶೇಟ್ ಮುಂತಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ನೂತನ ಕಾರ್ಯದರ್ಶಿಯವರಾದ ಲಯನ್ ಮನೋಹರ ಜಿ.ಮಲ್ಮನೆ ವಂದರ್ನಾಪಣೆ ನೇರವೇರಿಸಿದರು.