ಶಿರಸಿ : ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹಾಗೂ ವಕೀಲರ ಸಂಘ ಆಶ್ರಯದಲ್ಲಿ “ಸ್ವರ್ಣಿಮ ಭಾರತದ ಸ್ಥಾಪನೆ ರಕ್ಷಾ ಬಂಧನ” ಎಂಬ ಶೀರ್ಷಿಕೆಯಲ್ಲಿ ಆ.13 ರಂದು ರಕ್ಷಾ ಬಂಧನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
1ನೇ ಹೆಚ್ಚುವರಿ ಡಿಸ್ಟ್ರಿಕ್ಟ್ ಮತ್ತು ಸೆಶನ್ಸ್ ಜಡ್ಜ, ವಿ. ಜಗದೀಶ ಇವರು ತಮ್ಮ ಅಧ್ಯಕ್ಷತೆಯ ಭಾಷಣದಲ್ಲಿ ರಕ್ಷಾಬಂಧನ ಸಹೋದರ ಸಹೋದರಿಯರ ಪವಿತ್ರ ಬಂಧನದ ಸಂಕೇತ. ವರ್ತಮಾನ ಸಮಯದಲ್ಲಿ ಇಂಥ ಕಾರ್ಯಕ್ರಮಗಳನ್ನು ಮಾಡಿ ಸಮಾಜದಲ್ಲಿ ಪ್ರೇಮ, ಶಾಂತಿ, ಸೌಹಾರ್ಧತೆಯ ಅವಶ್ಯಕತೆ ಇದೆ. ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ವೇದಿಕೆಯಲ್ಲಿ ಸೀನಿಯರ್ ಸಿವಿಲ್ ಜಡ್ಜ, ಮತ್ತು ಜೆ.ಎಂ. ಎಫ್.ಸಿ. ಕಮಲಾಕ್ಷ ಡಿ., . ಮತ್ತು ಪ್ರಿನ್ಸಿಪಲ್ ಸಿವಿಲ್ ಜಡ್ಜ್ , ಮತ್ತು 1ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ರಾಜು ಕೆ. ಶೆಡಬಾಳಕರ, ಮತ್ತು1ನೇ ಹೆಚ್ಚುವರಿ ಸಿವಿಲ್ ಜಡ್ಜ ಮತ್ತು 2ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ಅಭಿಷೇಕ ಕೆ. ಜೋಶಿ, ಮತ್ತು 2ನೇ ಹೆಚ್ಚುವರಿ ಸಿವಿಲ್ ಜಡ್ಜ ಮತ್ತು ಜೆ.ಎಂ.ಎಫ್.ಸಿ. ಶ್ರೀಮತಿ ಶೃತಿ ವಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ರಹ್ಮಕುಮಾರಿ ಗಾಯತ್ರಿ ದೇವಿ ಬ್ರಹ್ಮಕುಮಾರಿ ಸಂಸ್ಥೆಯ ಬಗ್ಗೆ ಪರಿಚಯ ನೀಡಿ ರಾಜಯೋಗದಿಂದ ಆತ್ಮಾನಂದದ ಅನುಭವ ಮೂಡಿಸಿದರು. ಆರ್.ಆರ್.ರೇವಣಕರ, ವಕೀಲರು ಸ್ವಾಗತಿಸಿದರು ಬಿ.ಕೆ. ಬಲವಂತರಾವ ಇವರು ಪುಷ್ಪಗುಚ್ಚ ನೀಡುವ ಮೂಲಕ ಸ್ವಾಗತಿಸಿದರು. ಸಿ.ಎಫ್. ಈರೇಶ ಇವರು ವಂದಿಸಿದರು.