• Slide
    Slide
    Slide
    previous arrow
    next arrow
  • ಇತಿಹಾಸದ ಅಪೂರ್ವ ಕ್ಷಣ ಅದು; ಚಂದ್ರು ಎಸಳೆ

    300x250 AD

    eUKವಿಶೇಷ: ದೆಹಲಿಯ ಕೆಂಪುಕೋಟೆ ಮೇಲಿಂದ ಬ್ರಿಟಿಷ್ ಸಾರ್ವಭೌಮತೆಯ ಸಂಕೇತವಾದ ಯುನಿಯನ್ ಜಾಕ್ ಕೆಳಗಿಳಿಯುತ್ತಾ ಇತ್ತು. ಸ್ವತಂತ್ರ ಭಾರತದ ಹೆಮ್ಮೆಯ ತಿರಂಗಾ ಬಾನೆತ್ತರದಲ್ಲಿ ಬಿಚ್ಚಿಕೊಳ್ಳುತ್ತಾ ಇತ್ತು. ಸುಧೀರ್ಘ ಸ್ವಾತಂತ್ರ್ಯ ಹೋರಾಟದಲ್ಲಿ ಅಂತಿಮ ಜಯ ನಮ್ಮದಾಗಿತ್ತು, ದೇಶ ಸ್ವತಂತ್ರವಾಗಿತ್ತು ಆದರೇ ಅಖಂಡವಾಗಿ ಅಲ್ಲ. ತ್ರಿಖಂಡವಾಗಿ ಪೂರ್ವದಲ್ಲಿ ಪೂರ್ವ ಪಾಕಿಸ್ತಾನ, (ಈಗಿನ ಬಾಂಗ್ಲಾದೇಶ) ಪಶ್ಚಿಮದಲ್ಲಿ ಪಶ್ಚಿಮ ಪಾಕಿಸ್ತಾನ. ಸ್ವಾತಂತ್ರ್ಯ ಸೇನಾನಿಗಳು ತಮ್ಮ ರಕ್ತದಲ್ಲಿ ಬರೆದ ಸ್ವಾತಂತ್ರ್ಯ ಸಂಘರ್ಷದ ಇತಿಹಾಸ ರಾಜಕೀಯದ ಹುಚ್ಚು ಹೊಳೆಯಲ್ಲಿ ಕೊಚ್ಚಿಯೊಗಿತ್ತು ದೇಶ ಸ್ವತಂತ್ರವಾಗಿತ್ತು. ದೇಶ ಅಷ್ಟೆ ವಿಭಜನೆಯಾಗಿಲ್ಲ. ಪ್ರತಿ ಮನೆ ಮತ್ತು ಮನಸುಗಳು ಭಗ್ನಗೊಂಡವು. ಬೆಳಗಾಗುವುದರೊಳಗೆ ತಾಯಿ ಮಗನಿಂದ ದೂರ ಆದಳು, ಅಣ್ಣ ತಮ್ಮನಿಂದ ದೂರಾದ. ಆ ಹಿಟ್ಲರನನ್ನೇ ನಾಚಿಸುವಂತ ಮಾರಣಹೋಮ ವಿಭಜಿತ ಭಾರತದಲ್ಲಿ ನಡೆಯಿತು.

    ಅತ್ತ ದೆಹಲಿಯಲ್ಲಿ ಸ್ವಾತಂತ್ರ ಮಹೋತ್ಸವದ ಕುಶಾಲ ತೋಪುಗಳ ಘರ್ಜನೆ ಒಂದು ಕಡೆ. ಇತ್ತ ತಾಯಂದಿರ – ಅಕ್ಕ ತಂಗಿಯರ ಮೇಲಾದ ಅತ್ಯಾಚಾರದ ಭಯಾನಕತೆ. ಅತ್ತ ಅಧಿಕಾರಕ್ಕೇರುವ ಸಂಭ್ರವಾದರೆ ಇತ್ತ ಪಾಕಿಸ್ತಾನದಿಂದ ಬಂದಂತ ನಿರಾಶ್ರಿತರ ಗೋಳು ಇವೆಲ್ಲವುಗಳು ವಿಭಜಿತ ಭಾರತದಲ್ಲಿ ನಡೆಯಿತು. ಆ ಹಿನ್ನಲೆಯಲ್ಲಿ “ವಿಭಜನ್ ವಿಭಿಷಿಕ್ ಸ್ಮೃತಿ ದಿವಸ್’’ ದ ಆಚರಣೆ ಮಾಡಲು ಸಂಘಟನೆ ತೀರ್ಮಾನಿಸಿದೆ.

    ದೇಶ ಸ್ವಾತಂತ್ರ್ಯೋತ್ಸವದ ಅಮೃತ ಘಳಿಗೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದೆ. ಒಂದು ರಾಷ್ಟ್ರದ ಇತಿಹಾಸದಲ್ಲಿ 75 ವರ್ಷಗಳು ಕಡಿಮೆ ಎನಿಸಿದರೂ, ನಾವುಗಳು ಈ ದೇಶದ ಜನತೆ ಸ್ವಾತಂತ್ರ್ಯಕ್ಕಾಗಿ ಪಟ್ಟ ಶ್ರಮ, ಮಾಡಿದ ಹೋರಾಟ, ಅದಕ್ಕಾಗಿ ನೀಡಿದ ಬಲಿದಾನಗಳನ್ನು ಇಂದು ನಾವೆಲ್ಲ ಸ್ಮರಿಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವು ಹೌದು. ಆದ್ದರಿಂದ ಭಾರತೀಯ ಜನತಾ ಪಾರ್ಟಿ ನೇತ್ರತ್ವದ ಕೇಂದ್ರ ಸರಕಾರವು ಆಜಾದಿಕಾ ಅಮೃತ ಮಹೋತ್ಸವದ ಜೊತೆ ಜೊತೆಯಲ್ಲಿ 1947 ರ ಅಗಸ್ಟ 14 ರ ಮಧ್ಯರಾತ್ರಿ ದೇಶದಲ್ಲಿ ಏನು ಸಂಭವಿಸಿತು, ಎಂಬುದನ್ನು ಜನರ ಗಮನಕ್ಕೆ ತರಬೇಕೆಂಬುದರ ಕುರಿತು 14 ರಂದು (ಅಂದರೆ 14/8/2022) “ವಿಭಜನ ವಿಭಾಷಿಕ ಸ್ಮೃತಿದಿವಸ” ಆಚರಿಸಬೇಕೆಂದು ಕರೆಕೊಟ್ಟಿದೆ.

    ಭಾರತದ ಸ್ವಾತಂತ್ರ್ಯದ ಹೋರಾಟ ಕೇವಲ ಬ್ರಿಟಿಷರ ವಿರುದ್ಧ ಮಾತ್ರವಲ್ಲ ಅದಕ್ಕೂ ಹಿಂದೆ ಸುಮಾರು 800 ವರ್ಷಗಳ ಕಾಲ ಮೊಗಲರ ವಿರುದ್ಧ ನಿರಂತರ ಸ್ವಾತಂತ್ರ್ಯ ಹೋರಾಟ ದೇಶದ ಒಂದಲ್ಲ ಒಂದು ಕಡೆ ನಿರಂತರ ನಡೆಯುತ್ತಿತ್ತು. ಬ್ರಿಟಿಷರ ಒಡೆದು ಆಳುವ ನೀತಿಯಿಂದ ಮತ್ತು ಅಂದಿನ ಭಾರತದ ರಾಜಕೀಯ ನೇತಾರರು ತಮ್ಮ ಈ ಜೀವನದಲ್ಲಿ ಅಧಿಕಾರವನ್ನು ಅನುಭವಿಸಬೇಕೆಂಬ ದುರಾಸೆಯಿಂದ ವಿಭಜನೆಗೆ ಒತ್ತು ಕೊಟ್ಟರು. ಮುಸ್ಲಿಂಲೀಗನ ಒಡೆದು ಆಳುವ, ಕೋಮವಾದಿ ನೀತಿಗೆ ಅಂದಿನ ಕಾಂಗ್ರೇಸ್ ಶರಣಾಗಿತ್ತು. ಮುಂದೆ ಆಗುವ ಬಹುದೊಡ್ಡ ಹಾನಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳುವುದಕ್ಕೂ ಕಾಂಗ್ರೇಸ್ ಸೋತಿತ್ತು.

    300x250 AD

    ಬ್ರಿಟಿಷರ ವೈಸರಾಯ ಲಾರ್ಡ ಮೌಂಟ್ ಬ್ಯಾಟನ್ ಜೂನ 4, 1947 ರಂದು ಪತ್ರಿಕಾಗೋಷ್ಠಿಯಲ್ಲಿ ಸ್ವಾತಂತ್ರ್ಯದ ದಿನಾಂಕವನ್ನು ಅಗಸ್ಟ 14/15 ಎಂದು ಘೋಷಿಸಿದರು. ಯಾವುದೇ ಮುಂಜಾಗ್ರತೆ ತೆಗೆದುಕೊಳ್ಳದೇ ದೇಶ ವಿಭಜನೆಯೊಂದಿಗೆ ಸ್ವಾತಂತ್ರ್ಯದ ದಿನಾಂಕವನ್ನು ಬ್ರಿಟಿಷರು ಘೋಷಿಸಿದರು. ಅಂದಿನ ಭಾರತದ ರಾಜಕೀಯ ನಾಯಕತ್ವ ತನ್ನ ಅಧಿಕಾರ ಲಾಲಸೆಯಿಂದ ಅದನ್ನು ಒಪ್ಪಿಕೊಂಡಿತ್ತು. ಭಾರತದ ವಿಭಜನೆ ಮನುಕುಲದ ಇತಿಹಾಸದಲ್ಲೇ ಎಂದೂ ಕೇಳರಿಯದ ಬಲವಂತದ ಮಹಾಮಾನವ ವಲಸೆಯ ವ್ಯಾಕುಲದ ಕಥೆ. ಇದು ಲಕ್ಷಾಂತರ ಜನ ಅಪರಿಚಿತ ಜಾಗದಲ್ಲಿ ತಮ್ಮ ಜೀವನ ಕಟ್ಟಿಕೊಳ್ಳಬೇಕಾದ ಹೊಸ ಬದುಕು ಅರಸಿ ಹೊರಟವರ ಕಥೆ. ಇದು ಕೇವಲ ಹಿಂಸಾತ್ಮಕ ವಿಭಜನೆ ಮತ್ತು ಮತೀಯ ಕಲಹದ ಕಥೆ ಮಾತ್ರವಲ್ಲ ಇದು ಶತಮಾನಗಳಿಂದ ಸಹಬಾಳ್ವೆ ಮಾಡುತ್ತಿದ್ದ ಸಮಾಜವೊಂದು ಕ್ಷೀಪ್ರವಾಗಿ ಮತ್ತು ನಾಟಕೀಯವಾಗಿ ಅಂತ್ಯ ಕಂಡ ಕಥೆ ಕೂಡ ಹೌದು.

    ಈ ಆಜಾದಿಕಾ ಅಮೃತ ಮಹೋತ್ಸವದ ವರ್ಷದಲ್ಲಿ ನಾವೆಲ್ಲರೂ ಸತ್ಯ ಇತಿಹಾಸವನ್ನು ಓದಬೇಕು. ಅಂದಿನ ದೇಶ ವಿಭಜನೆಯ ದುರಂತ ಘಟನೆಗಳನ್ನು ಮೆಲುಕು ಹಾಕಬೇಕು. ಇತಿಹಾಸದಿಂದ ನಾವು ಪಾಠ ಕಲಿಯಬೇಕು. ಅದಕ್ಕಾಗಿ ಪಕ್ಷ ದಿನಾಂಕ 14/8/2022 ರಂದು ಪ್ರತಿ ಮಂಡಲ ಕೇಂದ್ರಗಳಲ್ಲಿ ಮೌನ ಮೆರವಣಿಗೆಯ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಗೈದವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ತನ್ಮೂಲಕ ನಾವುಗಳು ಸ್ವಾತಂತ್ರ್ಯವನ್ನು ಅರ್ಥ ಪೂರ್ಣವಾಗಿ ಆಚರಿಸುತ್ತಿದ್ದೇವೆ.

    ಮಾಹಿತಿ: ಚಂದ್ರು ದೇವಾಡಿಗ ಎಸಳೆ
    ಜಿಲ್ಲಾ ಪ್ರಧಾನ ಕಾರ್ಯದರ್ಶಿ
    ಭಾರತೀಯ ಜನತಾ ಪಾರ್ಟಿ ಉತ್ತರಕನ್ನಡ

    Share This
    300x250 AD
    300x250 AD
    300x250 AD
    Leaderboard Ad
    Back to top