• Slide
    Slide
    Slide
    previous arrow
    next arrow
  • ಔಡಾಳ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ

    300x250 AD

    ಶಿರಸಿ; ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಔಡಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಶಿರಸಿ ವತಿಯಿಂದ ಆಗಸ್ಟ್ 12ರಂದು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಒಂದು ವಾರದ ಮೊದಲೇ ಏರ್ಪಡಿಸಿದ್ದ ‘ನನ್ನ ಮೆಚ್ಚಿನ ಸ್ವಾತಂತ್ರ್ಯ ಹೋರಾಟಗಾರ’ ಮತ್ತು ‘ರಾಷ್ಟ್ರೀಯ ಚಿನ್ಹೆಗಳು’ ಎನ್ನುವ ವಿಷಯದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ. ರಮಾ ಪಟವರ್ಧನರು ಮಕ್ಕಳಿಗೆ ಸ್ವಾತಂತ್ರಕ್ಕಾಗಿ ಹೋರಾಡಿದ ಮಹಾಪುರುಷರ ಬಗ್ಗೆ ತಿಳಿಸಿ ಸ್ವಾತಂತ್ರದ ಮಹತ್ವವನ್ನು ವಿವರಿಸಿದರು. ಲ.ಪ್ರತಿಭಾ ಹೆಗಡೆಯವರು ಲಯನ್ಸ ಸೇವಾ ಸಂಸ್ಥೆಯ ಬಗ್ಗೆ ಮಾತನಾಡಿದರು. ಲ.ಜ್ಯೋತಿ ಅಶ್ವತ್ಥ ಹೆಗಡೆಯವರು ಅಕ್ಷರಗಳಿಂದ ಚಿತ್ರಗಳನ್ನು ಬಿಡಿಸುವುದನ್ನು ಹೇಳಿ ಕೊಟ್ಟರು ಮತ್ತು ಲ.ಶರಾವತಿ ಭಟ್ಟರು ಗಣಿತವನ್ನು ಸುಲಭವಾಗಿ ಮಾಡುವುದನ್ನು ತಿಳಿಸಿ ಕೊಟ್ಟರು. ಲ.ಸುಮಂಗಲಾ ಹೆಗಡೆ ಮಕ್ಕಳಿಗೆ ಆಟವನ್ನು ಆಡಿಸಿದರು. ಶಾಲೆಯ ಮುಖ್ಯಾಧ್ಯಾಪಕರಾದ ಜಿ.ಕೆ.ಭಟ್ಟ ಮತ್ತು ಶಿಕ್ಷಕವೃಂದದವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top