• Slide
    Slide
    Slide
    previous arrow
    next arrow
  • ಅಡಿಕೆ ಎಳೆಮಿಳ್ಳೆಗೆ ಮಂಗನ ಕಾಟ: ಮುಂದುವರೆದಿದೆ ರೈತನ ಗೋಳಾಟ

    300x250 AD

    ಶಿರಸಿ: ತಾಲೂಕಿನಲ್ಲಿ ಗಾಳಿ- ಮಳೆಗೆ ಅಡಿಕೆ ಮರಗಳು ಸಾಲಾಗಿ ಮುರಿದುಬೀಳುತ್ತಿವೆ. ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿಯ ಮರ್ಲಮನೆಯಲ್ಲಿ ಮಂಗಗಳು ಇದಾವುದನ್ನೂ ಲೆಕ್ಕಿಸದೇ ತೋಟದಲ್ಲಿ ದಾಳಿ ನಡೆಸಿ ಅಡಿಕೆ ಎಳೆಮಿಳ್ಳೆಗಳನ್ನು ತಿನ್ನತೊಡಗಿದ್ದು, ರೈತರನ್ನು ಕಂಗಾಲಾಗಿಸಿದೆ.

    ಇತ್ತೀಚಿನ ವರ್ಷಗಳಲ್ಲಿ ಕೆಂಪು ಮೂತಿಯ ಮಂಗಗಳ ಹಾವಳಿ ಈ ಭಾಗದಲ್ಲಿ ತೀವ್ರಗೊಂಡಿದೆ. ಆರಂಭದಲ್ಲಿ ಬಾಳೆ ಗೊನೆಗಳನ್ನು ತಿನ್ನುತ್ತಿದ್ದ ಈ ಮಂಗಗಳ ಸಂತತಿಯೂ ಈಗ ಜಾಸ್ತಿ ಆಗಿವೆ. ಕಳೆದ ಒಂದು ವರ್ಷದಿಂದ ಇನ್ನೂ ಬಲಿತಿರದ ಎಳೆ ಅಡಿಕೆ ಮಿಳ್ಳೆಗಳನ್ನು ತಿನ್ನಲಾರಂಭಿಸಿವೆ. ಈ ಮಂಗಗಳ ಕಾವಲಿಗೇ ನಮ್ಮ ಸಂಪೂರ್ಣ ದಿನ ವ್ಯಯವಾಗುತ್ತಿವೆ. ನಾವು ತೋಟಕ್ಕೆ ಬರುತ್ತಿರುವುದನ್ನು ಕಂಡೊಡನೆಯೇ ಅಡಿಕೆ ಮರದ ಎಲೆಗಳ ಮಧ್ಯೆ ಅಡಗಿ ಕುಳಿತುಕೊಳ್ಳುತ್ತವೆ. ಅಡಿಕೆ ಗೊನೆ ಪೂರ್ಣ ಖಾಲಿಯೇ ಮಾಡುತ್ತಿವೆ ಎಂದು ಅಳಲು ತೋಡಿಕೊಂಡಿದ್ದಾರೆ ಇಲ್ಲಿಯ ರೈತ ವಿನಾಯಕ ಹೆಗಡೆ.

    ಮರಲಮನೆ ಗ್ರಾಮದಲ್ಲಿ 7 ಮನೆಗಳಿದ್ದು, ಬಹುತೇಕ ಎಲ್ಲರ ಮನೆ ಅಡಿಕೆ ತೋಟದಲ್ಲಿಯೂ ಮಂಗಗಳು ತಿಂದು ಹಾಕಿದ ಅಡಿಕೆ ರಾಶಿ ರಾಶಿ ಬಿದ್ದಿದೆ. ಒಂದೆಡೆ ಮಳೆಯಿಂದಾಗಿ ಕೊಳೆ ರೋಗದಿಂದ ಅಡಿಕೆ ಉದುರುತ್ತಿದೆ. ಇನ್ನೊಂದೆಡೆ ಮಂಗಗಳ ಕಾಟದಿಂದ ಅಡಿಕೆ ಮರವೇ ಬರಿದಾಗುತ್ತಿದೆ. ಮುಂದೆ ಜೀವನ ಹೇಗೆ ಎಂಬ ಚಿಂತೆ ಕಾಡುತ್ತಿದೆ ಎನ್ನುತ್ತಾರೆ ರೈತ ಜಿ.ಜಿ.ಹೆಗಡೆ.

    300x250 AD

    ಹಂದಿಗಳ ಕಾಟದಿಂದ ಅಡಿಕೆ ಗಿಡಗಳು ಸತ್ತರೆ ಅರಣ್ಯ ಇಲಾಖೆ ಪರಿಹಾರ ನೀಡುವುದಾಗಿ ತಿಳಿಸುತ್ತದೆ. ಆದರೆ, ಮಂಗಗಳಿಂದಾದ ಹಾನಿಗೆ ಪರಿಹಾರ ನೀಡುವವರಿಲ್ಲ. ಅರಣ್ಯ ಇಲಾಖೆ ಈ ಮಂಗಗಳನ್ನು ಹಿಡಿಸಿ ಬೇರೆಡೆ ಸಾಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top