ಶಿರಸಿ:ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಗ್ರಂಥಾಲಯ ಹಾಗೂ ಭೂಮಿಕಾ ವಿಭಾಗಗಳ ಆಶ್ರಯದಲ್ಲಿ ಬಿ ಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ತಿಂಗಳ ಗಣಕಯಂತ್ರ ಕೌಶಲ್ಯ ಮತ್ತು ಗಣಕೀಕೃತ ಗ್ರಂಥಾಲಯ ತರಬೇತಿ ಶಿಬಿರ ಮುಕ್ತಾಯಗೊಂಡಿತು. ತರಬೇತುದಾರರಾದ ಸಂಜನಾ ಕಂಪ್ಯೂಟರ್ ನ ಸರಸ್ವತಿ ಕಂಬಾರ್ ಅವರಿಗೆ ಪ್ರಾಚಾರ್ಯ ಡಾ ಟಿ.ಎಸ್ ಹಳೆಮನೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಐಕ್ಯುಎಸಿ ಸಂಚಾಲಕ ಡಾ ಎಸ್.ಎಸ್ ಭಟ್, ಭೂಮಿಕಾ ಸಂಚಾಲಕಿ ಪ್ರೊ ಶೈಲಜಾ ಭಟ್,ತರಬೇತಿ ಸಂಯೋಜಕಿ ಪ್ರೊ ಪರಿಮಳಾ ದೇಶಪಾಂಡೆ, ಗ್ರಂಥಪಾಲಕಿ ಶಾರದಾ ಭಟ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಗಣಕಯಂತ್ರ ಕೌಶಲ್ಯ ಮತ್ತು ಗಣಕೀಕೃತ ಗ್ರಂಥಾಲಯ ತರಬೇತಿ ಶಿಬಿರ ಮುಕ್ತಾಯ
