ಸಿದ್ದಾಪುರ: ಸ್ವಾತಂತ್ರ‍್ಯ ಹತ್ತಿರ ಬಂದಾಗ ಮಾತ್ರ ರಾಷ್ಟ್ರ ಧ್ವಜದ ಬಗ್ಗೆ ಪ್ರೀತಿ ಮತ್ತು ಕಾಳಜಿ ಇದ್ದರೆ ಸಾಕಾಗಲ್ಲ. ಯಾವಾಗಲೂ ನಮ್ಮಲ್ಲಿ ಈ ಮನೋಭಾವ ಇರಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಚೈತನ್ಯಕುಮಾರ ಕೆ.ಎಂ. ಹೇಳಿದರು.
ಅವರು ಆಜಾದಿಕಾ ಅಮೃತ ಮಹೋತ್ಸವ ಪ್ರಯುಕ್ತ ಭಾರತ ಸೇವಾದಳದ ಜಿಲ್ಲಾ ಹಾಗೂ ತಾಲೂಕು ಸಮಿತಿಯ ವತಿಯಿಂದ ಪಟ್ಟಣದ ಸಿದ್ದಿವಿನಾಯಕ ಪ್ರೌಢಶಾಲೆಯಲ್ಲಿ ಆಯೋಜಿಸಿದ ರಾಷ್ಟçಧ್ವಜ ನಿರ್ವಹಣೆ ತರಬೇತಿ ಕಾರ್ಯಗಾರ ಹಾಗೂ ತಾಲೂಕಿನ ಸ್ವಾತಂತ್ರ‍್ಯ ಸಂಗ್ರಾಮದ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಿದ್ದಿವಿನಾಯಕ ಇಂಗ್ಲೀಷ ಮಾಧ್ಯಮ ಪ್ರೌಢಶಾಲಾ ಪ್ರಾಚಾರ್ಯರಾದ ಎನ್.ವಿ.ಹೆಗಡೆ ಮಾತನಾಡಿ, ತಾಯಿಯನ್ನು ಪ್ರೀತಿಸಿದಂತೆ ದೇಶವನ್ನು ಪ್ರೀತಿ ಮಾಡಬೇಕು. ಅದು ನಮ್ಮೆಲ್ಲರ ಆದ್ಯತೆ ಕರ್ತವ್ಯ. ನಮ್ಮಲ್ಲಿ ನಮ್ಮ ದೇಶದ ಕುರಿತು ಅಭಿಮಾನ ಇದ್ದಾಗ ಮಾತ್ರ ಈ ಭಾವನೆ ಬರುತ್ತದೆ ಎಂದರು.
ದೈಹಿಕ ಶಿಕ್ಷಣ ಪರರೀವಿಕ್ಷಕರು ರಾಜು ನಾಯ್ಕ ಮಾತನಾಡಿ, ನಮ್ಮ ನಿಮ್ಮೇಲ್ಲರಲ್ಲಿ ರಾಷ್ಟ್ರ ಧ್ವಜದ ಬಗ್ಗೆ ಪ್ರೀತಿ, ಕಾಳಜಿ, ಮನೋಭಾವ ಇರಬೇಕು: ಚೈತನ್ಯಕುಮಾರ ಧ್ವಜದ ಬಗ್ಗೆ ಗೌರವ ಭಾವನೆ ಇರಬೇಕು. ಧ್ವಜವನ್ನು ಬಳಸುವುದು ಹೇಗೆ ಎನ್ನುವುದರ ಕುರಿತು ನಮಗೆ ಮಾಹಿತಿ ಇರಬೇಕು. ಅಂದಾಗ ನಾವು ಧ್ವಜಕ್ಕೆ ಸರಿಯಾದ ರೀತಿಯಲ್ಲಿ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳ ತಾಲೂಕು ಅಧ್ಯಕ್ಷ ನಾಗರಾಜ ಭಟ್ಟ, ತಾಲೂಕಿನ ಸ್ವಾತಂತ್ರ‍್ಯ ಹೋರಾಟದ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ನವ್ಯಶ್ರೀ ಸ್ವಾಗತಿಸಿದರು. ಶಿಕ್ಷಕಿ ಸುಧಾರಾಣಿ ನಾಯ್ಕ ನಿರೂಪಿಸಿದರು. ಸೇವಾದಳದ ಪ್ರಧಾನ ಕಾರ್ಯದರ್ಶಿ ಎಂ.ವಿ.ನಾಯ್ಕ ವಂದಿಸಿದರು. ಸೇವಾದಳದ ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ, ಉಪಾಧ್ಯಕ್ಷ ಶ್ರೀಕಾಂತ ಭಟ್, ತಾಲೂಕು ಸಂಘಟಕರಾದ ಶಿಕ್ಷಕ ಬಾಬು ನಾಯ್ಕ, ಸದಸ್ಯ ಗಜಾನನ ಹೆಗಡೆ ಉಪಸ್ಥಿತರಿದ್ದರು.