ಶಿರಸಿ: ತಾಲೂಕಿನ ಕೋರ್ಲಕಟ್ಟಾದಲ್ಲಿನ ಬೇಕರಿಯೊಂದಕ್ಕೆ ಬೆಂಕಿ ತಗುಲಿ ಹಾನಿಯಾದ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಮಹಾಂತೇಶ್ ನಾಯ್ಕ್ ಮಾಳಂಜಿ ಎಂಬುವವರಿಗೆ ಸೇರಿದ ಬೇಕರಿ ಇದಾಗಿದ್ದು ಶಾರ್ಟ್ ಸರ್ಕ್ಯೂಟ್’ನಿಂದ ಬೆಂಕಿ ಅನಾಹುತ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಬೇಕರಿ ಒಳಗಿದ್ದ ಸಿಲಿಂಡರ್ ಸ್ಫೋಟದಿಂದ ಮತ್ತಷ್ಟು ತೀವ್ರತರದಲ್ಲಿ ಬೆಂಕಿ ಕೆನ್ನಾಲಿಗೆ ಚಾಚಿದ್ದು ಸುಮಾರು 5 ಲಕ್ಷಕ್ಕೂ ಅಧಿಕ ಮೌಲ್ಯದ ಉಪಕರಣಗಳು ಆಹುತಿಯಾಗಿವೆ. ಲಂಬೋದರ ನಾಯ್ಕ್ ನೇತೃತ್ವದ ಅಗ್ನಿಶಾಮಕ ದಳದ ತಂಡವು ಕಾರ್ಯಾಚರಣೆ ನಡೆಸಿ ಇನ್ನೂ ಹೆಚ್ಚಿನ ಅನಾಹುತವನ್ನು ತಡೆದಿದ್ದಾರೆ.