Slide
Slide
Slide
previous arrow
next arrow

ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ವಿಧಿವಶ

300x250 AD

ಬೆಂಗಳೂರು: ಕನ್ನಡ ಸಿನೆಮಾಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ (83) ಗುರುವಾರ ರಾತ್ರಿ ನಿಧನರಾಗಿದ್ದಾರೆ.
ಅವರನ್ನು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ. ಮಗಳು ‘ದಿ ಹಿಂದೂ’ ದಿನ ಪತ್ರಿಕೆಯ ಸ್ಥಾನಿಕ ಸಂಪಾದಕಿ ಭಾಗೇಶ್ರಿ, ಮಗ ಶ್ರೀರಂಗ, ಸೊಸೆ ಖ್ಯಾತ  ಸುಗಮ ಸಂಗೀತ ಗಾಯಕಿ ಅರ್ಚನಾ ಉಡುಪ ಮತ್ತು ಅಪಾರ ಅಭಿಮಾನಿಗಳನ್ನು  ಅಗಲಿದ್ದಾರೆ.
ಕಾಡು ಕುದುರೆ ಓಡಿ ಬಂದಿತ್ತಾ ಎಂಬ ಹಾಡಿನ ಮೂಲಕ ನಾಡಿನ ಮನೆಮಾತಾಗಿದ್ದ ಶಿವಮೊಗ್ಗ ಸುಬ್ಬಣ್ಣ ಆ ಹಾಡಿಗೆ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದರು. ಅದು ಹಾಡಿಗೆ ಕನ್ನಡಕ್ಕೆ ಸಿಕ್ಕ ಮೊದಲ ರಾಷ್ಟ್ರಪ್ರಶಸ್ತಿಯಾಗಿದೆ.
ಶಿವಮೊಗ್ಗ ಸುಬ್ಬಣ್ಣ ಎಂದೇ ಖ್ಯಾತರಾಗಿದ್ದ ಅವರು ಸುಬ್ಬಣ್ಣ ಅವರು ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ 1938ರಲ್ಲಿ ಜನಿಸಿದರು. ಅವರ ನಿಜ ನಾಮಧೇಯ “ಜಿ.ಸುಬ್ರಹ್ಮಣ್ಯ”. ಗಣೇಶ್ ರಾವ್ ಹಾಗೂ ರಂಗನಾಯಕಮ್ಮನವರ ಮಗನಾದ ಸುಬ್ಬಣ್ಣನವರ ತಾತ ಶಾಮಣ್ಣನವರು ಸಂಗೀತ ವಿದ್ವಾಂಸರು.ಆರಂಭದಲ್ಲಿ ಅವರ ಬಳಿಯಲ್ಲಿಯೇ ತಮ್ಮ ಸಂಗೀತಾಭ್ಯಾಸ ಮಾಡಿದ್ದರು. ನಂತರ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಎಂ. ಪ್ರಭಾಕರ್ ಅವರಿಂದ ಅಭ್ಯಾಸ ಮಾಡಿದರು.
ಅವರು ಬಿ.ಎ.,ಬಿ.ಕಾಂ.,ಎಲ್.ಎಲ್.ಬಿ.,ಪದವೀದರರು. ವಕೀಲರಾದ ನಂತರ ನೋಟರಿಯಾಗಿ ನೇಮಕಗೊಂಡಿದ್ದರು. ಕಾಲೇಜು ದಿನಗಳಲ್ಲಿ ಹೆಚ್ಚಾಗಿ ಹಿಂದಿ ಚಿತ್ರಗೀತೆಗಳನ್ನೇ ಹಾಡುತ್ತಿದ್ದರು. ಗಾಯನ ಸ್ಪರ್ಧೆಯಲ್ಲಿ ಅಡಿಗರ ‘ಮೋಹನ ಮುರಳಿ’ ಹಾಡಿಗೆ ಬಹುಮಾನ ಸಿಕ್ಕಿದ್ದು ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ 1963ರಲ್ಲಿ ಆಕಾಶವಾಣಿಯ ಗಾಯಕರಾಗಿಯೂ ಆಯ್ಕೆಯಾದರು. ಸಿನಿಮಾ ರಂಗಕ್ಕೆ ಸುಬ್ಬಣ್ಣ ಹಿನ್ನೆಲೆ ಗಾಯಕರಾಗಿ ಚಿತ್ರರಂಗ ಪ್ರವೇಶಿಸಿದ್ದು ನಾಟಕಕಾರ, ಚಿತ್ರ ನಿರ್ದೇಶಕ ಕವಿ ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಮೂಲಕ ಹಿನ್ನೆಲೆ ಗಾಯಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. 1974ರಲ್ಲಿ ಪ್ರಥಮ ಬಾರಿಗೆ ಕನ್ನಡ ಸಿನೆಮಾದ ಹಿನ್ನೆಲೆ ಗಾಯನಕ್ಕೆ “ರಜತಕಮಲ್”ಪುರಸ್ಕಾರವನ್ನು ಪಡೆದ ಹೆಗ್ಗಳಿಕೆ ಇವರದು. ಕಾಡು ಕುದುರೆ ಚಿತ್ರದ ಕಾಡು ಕುದುರೆ ಓಡಿ ಬಂದಿತ್ತಾ ಹಾಡಿಗೆ ರಾಷ್ಟ್ರಪ್ರಶಸ್ತಿ ಪಡೆದರು.
ಅವರ ಅಳುವಾಗ ಅತ್ತು, ನುಗುವಾಗ ನಕ್ಕು, ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ., ಆನಂದಮಯ ಈ ಜಗ ಹೃದಯ ಏತಕೆ ಭಯ ಮಾಣೋ……‘ಅಳಬೇಡಾ ತಂಗಿ ಅಳಬೇಡ…ಮೊದಲಾದ ಭಾವಗೀತೆಗಳು, ‘ಕೋಡಗನ ಕೋಳಿ ನುಂಗಿತ್ತಾ..’, ‘ಬಿದ್ದೀಯಬ್ಬೇ ಮುದುಕಿ..’ ಮೊದಲಾದ ಶಿಶುನಾಳ ಷರೀಫರ ಗೀತೆಗಳನ್ನು ಹಾಡಿದ ಸುಬ್ಬಣ್ಣ ಮನೆ ಮಾತಾದರು. ಕುವೆಂಪು, ದರಾ ಬೇಂದ್ರೆ, ಕೆ.ಎಸ್.ನಿಸಾರ್ ಅಹಮದ್, ಕೆ.ಎಸ್.ನರಸಿಂಹಸ್ವಾಮಿ, ಜಿ.ಎಸ್.ಶಿವರುದ್ರಪ್ಪ, ಲಕ್ಷ್ಮೀನಾರಾಯಣ ಭಟ್ಟರು ಸೇರಿದಂತೆ ಹಲವು ಪ್ರಮುಖ ಕವಿಗಳ ಕವನಗಳಿಗೆ ಧ್ವನಿಯಾದರು.

300x250 AD
Share This
300x250 AD
300x250 AD
300x250 AD
Back to top