Slide
Slide
Slide
previous arrow
next arrow

ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಮನೆ

300x250 AD

ದಾಂಡೇಲಿ : ನಗರದ ಲಕ್ಷ್ಮಿಗುಡಿ ಕಾಲೋನಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮನೆ ಹೊತ್ತಿ ಉರಿದ ಘಟನೆ ನಡೆದಿದೆ. ಶಾಹಿನ ಖಾನ್ ಎಂಬುವವರಿಗೆ ಸೇರಿದ ಮನೆಯಾಗಿದ್ದು ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದಿದೆ ಎನ್ನಲಾಗಿದೆ.

ಒಂದು ಮನೆಗೆ ಅಂಟಿದ ಬೆಂಕಿ ಕೆನ್ನಾಲಿಗೆ ಪಕ್ಕದ ನಾಲ್ಕು ಮನೆಗೆ ವ್ಯಾಪಿಸಿದ್ದು ಅಲ್ಲಿಯೂ ಬೆಂಕಿ ಕಾಣಿಸಿಕೊಂಡಿದ್ದು , ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಮನೆಯಲ್ಲಿದ್ದ ಜನರು ಹೋರ ಓಡಿ ಬಂದು ಜೀವ ರಕ್ಷಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು , ಅಗ್ನಿಶಾಮಕ ದಳ ಸಿಬ್ಬಂದಿ, ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿದ್ದು ,ಘಟನೆಯಲ್ಲಿ ಅಂದಾಜು ಐದು ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಿದೆ.

300x250 AD
Share This
300x250 AD
300x250 AD
300x250 AD
Back to top