Slide
Slide
Slide
previous arrow
next arrow

ಪುಣ್ಯದ ಫಲವೇ ಸುಖ: ಸ್ವರ್ಣವಲ್ಲೀ ಶ್ರೀ

300x250 AD

ಶಿರಸಿ: ಪುಣ್ಯದ ಫಲ ಸುಖ. ಎಲ್ಲರಿಗೂ ಸುಖ ಬೇಕು. ಆದರೆ, ಪುಣ್ಯ ಗಳಿಸುವದು ಯಾರಿಗೂ ಬೇಡ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹೇಳಿದರು.

ಅವರು ಸ್ವರ್ಣವಲ್ಲೀಯಲ್ಲಿ ಅವರ 32ನೇ ಚಾತುರ್ಮಾಸ್ಯದ ವ್ರತದ ಅಂಗವಾಗಿ ಶ್ರೀಮಠದಲ್ಲಿ ನಡೆದ ಶಿವಳ್ಳಿ ಸೀಮಾ ಭಿಕ್ಷ, ಪಾದಪೂಜೆ, ಇತರ ಸೇವೆ ಸ್ವೀಕರಿಸಿ ಆಶೀರ್ವಚನ ನುಡಿದರು.

ಯಾವತ್ತೂ ಎಲ್ಲರಿಗೂ ಪುಣ್ಯದ ಕೆಲಸ ಬೇಡ, ಆದರೆ ಫಲ ಬೇಕು. ಅದರಂತೆ ಪಾಪದ ಫಲ ಬೇಡ. ಆದರೆ, ಪಾಪ ಮಾಡಬೇಕು ಎಂಬಂತಾಗಿದೆ ಎಂದರು. ಪುಣ್ಯ ಎಂದರೆ ಸತ್ಕರ್ಮ, ಪುಣ್ಯದ ಫಲ ಸುಖ. ಶಾಸ್ತ್ರ ಹೇಳಿದ ಸತ್ಕರ್ಮ ಮಾಡಬೇಕು. ಅದರಿಂದ ಸುಖ ಸಿಗುತ್ತದೆ ಎಂದ ಶ್ರೀಗಳು, ದುಃಖಕ್ಕೆ ಕಾರಣವಾಗದ ಪುಣ್ಯಗಳಿಸುವ ಬಗ್ಗೆ ಲಕ್ಷ್ಯ ಇಲ್ಲ ಎಂದೂ ಆತಂಕಿಸಿದರು.

ಪಾಪ ಎಂದರೆ  ಅದು ಶಾಸ್ತ್ರ ಮಾಡ ಬೇಡ ಎಂದಿದ್ದು. ಯಾರಿಗೂ ಸುಳ್ಳು ಹೇಳಬೇಡ, ಹಿಂಸೆ ಮಾಡಬೇಡ ಎಂಬುದು ಪಾಪ ಕರ್ಮಗಳು. ಅದರ ಫಲಗಳು ದುಃಖ ಹಾಗೂ ಕಷ್ಟ. ಅದು ಯಾರಿಗೂ ಬೇಡ. ಆದರೆ ಎಲ್ಲರೂ ಪಾಪ‌ ಮಾಡುತ್ತಾ‌ ಇರುತ್ತಾರೆ ಎಂದೂ ಉದಾಹರಣೆ ಸಹಿತ ವಿವರಿಸಿದರು. ಪಾಪ ಕಡಿಮೆ‌ ಮಾಡಿದರೆ ಅದರ ಫಲವೂ ಕಡಿಮೆಯೇ ಎಂದ ಶ್ರೀಗಳು ಸಮಾಜದಲ್ಲಿ ಸತ್ಕರ್ಮ ಹೆಚ್ಚಬೇಕು. ಅದು ನಮ್ಮ ಆಶಯ ಎಂದರು.

ಎಲ್ಲರೂ ಧರ್ಮ ಪ್ರಜೆಯಾಗಬೇಕು . ಅಧರ್ಮ ಪ್ರಜೆಯಾದರೆ ಸಮಾಜಕ್ಕೆ ಕೆಡುಕೇ ಆಗಲಿವೆ ಎಂದ ಶ್ರೀಗಳು, ಪುಣ್ಯ ಎಂದರೆ‌ ಠೇವಣಿ ಇಟ್ಟಂತೆ‌‌. ಪಾಪ ಎಂದರೆ ಸಾಲ ಮಾಡಿದಂತೆ. ಎರಡಕ್ಕೂ ಬಡ್ಡಿ ಇದೆ. ಠೇವಣಿಗೆ ನಮಗೆ ಬರುತ್ತದೆ. ಸಾಲ ಮಾಡಿದರೆ ಬಡ್ಡಿ ಕೊಡಬೇಕು ಎಂದೂ ಮಾರ್ಮಿಕವಾಗಿ ಮಾತನಾಡಿದರು. ಅತಿಯಾದ ಆಸೆ, ದ್ವೇಷಗಳೇ‌ ಪಾಪಗಳಿಗೆ ಕಾರಣ. ಅದಕ್ಕೆ ನಾವು‌ ಸ್ವತಃ ಕಡಿವಾಣ ಹಾಕಿ ಕೊಳ್ಳಬೇಕು. ಜಪ ಮಾಡಿದರೆ, ನಿತ್ಯ ಅನುಷ್ಟಾನ ಮಾಡಿದರೆ ಪಾಪ‌ ಕ್ಷಯ ಆಗುತ್ತದೆ ಎಂದು ಹೇಳಿದರು.

300x250 AD

ಈ ವೇಳೆ ಜಿ.ವಿ.ಹೆಗಡೆ ಗೊಡವೆಮನೆ,  ಗುರುಪಾದ ಹೆಗಡೆ ಅಮಚಿಮನೆ,  ಪ್ರಸನ್ನ ಭಟ್ಟ ಒಣಿಕೈ, ಎಂ.ವಿ.ಹೆಗಡೆ, ಎಂ. ಆರ್.ಹೆಗಡೆ ಹೊನ್ನೆಕಟ್ಟ, ಪ್ರಮೀಳಾ ಭಟ್ಟ ಇತರರು ಇದ್ದರು. ಪುರುಷರು ಗಾಯತ್ರೀ ಮಂತ್ರ ಪಠಿಸಿದರೆ ಮಾತೆಯರು ಕುಂಕುಮಾರ್ಚನೆ ಮಾಡಿದರು.

ಜೀವನ ಪುಣ್ಯಗಳಿಸುವ ನಡೆ ಇರಬೇಕು. ಧರ್ಮನಿಷ್ಠ ಸಮುದಾಯ‌ ನಮ್ಮದಾಗಲಿ.::ಸ್ವರ್ಣವಲ್ಲೀ ಶ್ರೀ

Share This
300x250 AD
300x250 AD
300x250 AD
Back to top