• Slide
    Slide
    Slide
    previous arrow
    next arrow
  • ಲಯನ್ಸ ಶಾಲೆಯಲ್ಲಿ ಕೋಟಕ್ ಮಹಿಂದ್ರ ಬ್ಯಾಂಕ್ ಪ್ರಾಯೋಜಿತ ಚಿತ್ರಕಲಾ ಸ್ಫರ್ಧೆ

    300x250 AD

    ಶಿರಸಿ: ನಗರದ ಲಯನ್ಸ್ ಶಾಲೆಯ ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಆ.10 ರಂದುಕೋಟಕ್ ಮಹೀಂದ್ರ ಬ್ಯಾಂಕ್ ಪ್ರಾಯೋಜಿತ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಒಟ್ಟೂ 400 ಮಕ್ಕಳು ಈ ಸ್ಫರ್ಧೆಯಲ್ಲಿ ಭಾಗವಹಿಸಿ ತಮ್ಮ ಚಿತ್ರಕಲಾ ಪ್ರತಿಭೆ ಮೆರೆದರು.
    ಕುಮಾರಿ ಸಹನಾ ಶೆಟ್ಟಿ ಹಾಗೂ ಸಿಂಚನಾ ಶೆಟ್ಟಿ ಸಹೋದರಿಯರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
    ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪತ್ರಕರ್ತರಾದ ಕೃಷ್ಣಮೂರ್ತಿ ಕೆರೆಗದ್ದೆ ಮಾತನಾಡಿ, ಕೊಟಕ್ ಮಹೀಂದ್ರ ಬ್ಯಾಂಕ್ ಕೇವಲ ಹಣಕಾಸಿನ ವ್ಯವಹಾರ ಮಾತ್ರವಲ್ಲದೆ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸಂತಸದ ವಿಷಯ ಎಂದರು. ಕೋಟಕ್ ಮಹೀಂದ್ರ ಬ್ಯಾಂಕ್ ಬ್ರಾಂಚ್ ಮ್ಯಾನೇಜರ್ ಸಂದೀಪ್ ಮಳಗಿ ಸ್ಪರ್ಧೆಯಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆಯನ್ನು ಕಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ಸ್ಪರ್ಧೆಗಳನ್ನು ಆಯೋಜಿಸುವುದಾಗಿ ಭರವಸೆ ನೀಡಿದರು.

    ಲಿಯೋ ಕ್ಲಬ್ ಶಿರಸಿಯ ಮಾರ್ಗದರ್ಶಕರಾದ ಲಯನ್ ಅಶ್ವಥ್ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಲ್ಲ ಮಕ್ಕಳಿಗೆ ಶುಭಹಾರೈಸಿದರು. ಕೋಟಾಕ್ ಮಹೀಂದ್ರ ಬ್ಯಾಂಕ್ ನ ಡೆಪ್ಯುಟಿ ಮ್ಯಾನೇಜರ್ ದಾಸರ್ ಸ್ವಾಗತಿಸಿದರು. ಲಯನ್ಸ್ ಶಾಲೆಯ ಮುಖ್ಯಾಧ್ಯಾಪಕರಾದ ಶಶಾಂಕ್ ಹೆಗಡೆ ವಂದನಾರ್ಪಣೆ ಗೈದರು. ಕೋಟಕ್ ಮಹಿಂದ್ರ ಬ್ಯಾಂಕ್ ಸಿಬ್ಬಂದಿಗಳು ಲಯನ್ಸ ಶಾಲಾ ಶಿಕ್ಷಕ ವೃಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿದರು. ಲಯನ್ಸ ಶಾಲೆಯ ಸ್ಟೂಡೆಂಟ್ಸ್ ಯೂನಿಯನ್ನ ಕ್ರೀಡಾ ಪ್ರತಿನಿಧಿ ಕುಮಾರಿ ಸೃಷ್ಟಿ ಗೌಳಿ ಹಾಗೂ ಮಾಹಿತಿ ತಂತ್ರಜ್ಞಾನದ ಪ್ರತಿನಿಧಿ ಕುಮಾರ್ ಧೀರಜ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು .

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top