ದಾಂಡೇಲಿ: ಮುಸ್ಲಿಂ ಧರ್ಮಿಯರ ವಿಶೇಷ ಹಬ್ಬಗಳಲ್ಲಿ ಒಂದಾಗಿರುವ ಮೊಹರಂ ಹಬ್ಬವನ್ನು ನಗರದ ಗಲ್ಲಿ ಗಲ್ಲಿಗಳಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ನಗರದ ಒಟ್ಟು 37 ಕಡೆಗಳಲ್ಲಿ ಆಯಾಯ ಸ್ಥಳೀಯ ಮಟ್ಟದ ಮೊಹರಂ ಉತ್ಸವ ಸಮಿತಿಗಳು ಪಂಜಾಗಳನ್ನು ಪ್ರತಿಷ್ಟಾಪಿಸಿ ಪ್ರತಿದಿನ ವಿಶೇಷ ಪ್ರಾರ್ಥನೆ ಹಾಗೂ ಆರಾಧನೆಯಲ್ಲಿ ತೊಡಗಿಕೊಂಡಿದ್ದರು. ಸೋಮವಾರ ತಡರಾತ್ರಿಯವರೆಗೆ ಎಲ್ಲ ಪಂಜಾಗಳ ಮುಂಭಾಗದ ವಿಶೇಷ ಪ್ರಾರ್ಥನೆಯನ್ನು ಹಮ್ಮಿಕೊಂಡು ಆ ಬಳಿಕ ಪಂಜಾದ ಮುಂಭಾಗದಲ್ಲಿ ಅಗ್ನಿಕುಂಡಕ್ಕೆ ಅಗ್ನಿಸ್ಪರ್ಷ ಮಾಡಲಾಯ್ತು. ಮಂಗಳವಾರ ಬೆಳ್ಳಂಬೆಳಗ್ಗೆ ಪಂಜಾಗಳನ್ನು ಹೊತ್ತುಕೊಂಡು ಅಗ್ನಿಪ್ರವೇಶ ಮುಗಿಸಿ, ಆನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು.
ಮೊಹರಂ ಹಬ್ಬದ ಈ ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮ ಬಾಂಧವರು ಮಾತ್ರವಲ್ಲದೇ ಹಿಂದೂ ಹೀಗೆ ಇನ್ನಿತರ ಧರ್ಮ ಬಾಂಧವರು ಭಾಗವಹಿಸಿ ಭಾವೈಕ್ಯತೆಯನ್ನು ಮರೆದರು. ಮೊಹರಂ ಹಬ್ಬದ ಶಾಂತಿಯುತ ಆಚರಣೆಗೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.