• Slide
  Slide
  Slide
  previous arrow
  next arrow
 • ಹರೀಶ ಗೌಡರ್ ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ: ಶಶಿಭೂಷಣ ಹೆಗಡೆ

  300x250 AD

  ಸಿದ್ದಾಪುರ: ಸಮಾಜಕ್ಕೆ ನಮ್ಮಿಂದಾದ ಕಿಂಚಿತ್ತೂ ಕೊಡುಗೆ ನೀಡಬೇಕು ಎನ್ನುವದನ್ನು ಯುವಕರು ಮರೆತಂತಿದೆ. ಆದರೆ ಹರೀಶ ಗೌಡರ್ ತಮ್ಮ ಜನ್ಮದಿನದ ಆಚರಣೆಯನ್ನು ಇಂದಿನ ಯುವಕರಿಗೆ ಮಾದರಿಯಾಗುವಂತೆ ಆಚರಿಸಿದ್ದಾರೆ ಎಂದು ಶಿಕ್ಷಣ ಪ್ರಸಾರಕ ಸಮಿತಿಯ ಕಾರ್ಯಾಧ್ಯಕ್ಷ ಶಶಿಭೂಷಣ ಹೆಗಡೆ ಹೇಳಿದರು.

  ಅವರು ಪಟ್ಟಣದ ಬಾಲಭವನದಲ್ಲಿ ನಡೆದ ಹರೀಶ ಎಸ್.ಗೌಡರ್ ಹರಳಿಕೊಪ್ಪರವರ ಸ್ನೇಹಿತರ ಬಳಗದ ವತಿಯಿಂದ ಹರೀಶ್ ಗೌಡರರವರ ಜನ್ಮ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

  ಇಂದು ನಾಲ್ಕೈದು ಜನರು ಸೇರಿ ಜನ್ಮದಿನಾಚರಣೆಯಲ್ಲಿ ಬೇಡವಾದುದಕ್ಕೆ ಹಣ ಖರ್ಚು ಮಾಡುವ ಇಂದಿನ ದಿನದಲ್ಲಿ ಸಾಧಕರಿಗೆ ಸನ್ಮಾನ ಮಾಡಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದು ಅರ್ಥಪೂರ್ಣವಾಗಿದೆ. ಹರೀಶ್ ಗೌಡರ್ ಜೀವನದಲ್ಲಿ ಪರಿಪಕ್ವವಾಗಿದ್ದಾರೆ. ಹಿಂದೆ ಆದ ಕಹಿ ಘಟನೆಗಳು ನಿಮ್ಮನ್ನು ಎತ್ತರದ ಮಟ್ಟಕ್ಕೆ ಒಯ್ಯುತ್ತವೆ ಶುಭ ಕೋರಿದರು.

  300x250 AD

  ಉದ್ಯಮಿ ಉಪೇಂದ್ರ ಪೈ ಶಿರಸಿ ಮಾತನಾಡಿ, ಇದು ಮನ ಮುಟ್ಟುವ, ಮನ ತಟ್ಟುವ ಕಾರ್ಯಕ್ರಮ. ಜನಪರ ಹೋರಾಟ ಮತ್ತು ಸಮಾಜದ ಸೇವೆ ಮಾಡುವುದರಲ್ಲಿ ಕಹಿ ಘಟಕಗಳು ಸಾಮಾನ್ಯ. ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ, ಚರಿತ್ರೆಗಿಂತ ಚಾರಿತ್ರ‍್ಯ ದೊಡ್ಡದು. ನಿಮ್ಮ ನೋವು ಮುಂದಿನ ಜೀವನದ ಪಾಠ. ದ್ವೇಷ ಮಾಡಲಿಕ್ಕೆ ನಾವು ಶಾಶ್ವತವಲ್ಲ. ನಿಮ್ಮಿಂದ ಜನಪರ ಕಾರ್ಯಕ್ರಮಗಳು ಆಗಲಿ ಎಂದು ಹಾರೈಸಿದರು.

  ರೈತ ಮಖಂಡ ವೀರಭದ್ರ ನಾಯ್ಕ ಮಳವಳ್ಳಿ, ಸಮಾಜಮುಖಿ ಸಂಪಾದಕ ಕನ್ನೇಶ ಕೋಲಶಿರ್ಸಿ, ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಆಕಾಶ ಎಸ್.ಕೊಂಡ್ಲಿ, ಸತೀಶ್ ಹೆಗಡೆ, ಹರೀಶ ಎಸ್.ಗೌಡರ್ ವೇದಿಕೆಯಲ್ಲಿ ಇದ್ದರು. ಜಾನಪದ ಕಲಾವಿದೆ ಲೀಲಾವತಿ ಎಸ್.ಕೊಂಡ್ಲಿ, ಯೋಗಪಟು ಮಂಜುನಾಥ ನಾಯ್ಕ, ಕರಾಟೆಪಟುಗಳಾದ ಆನಂದ ನಾಯ್ಕ, ಅಜೀತ್ ಕೊಡಿಯಾ, ಜಯಂತ ನಾಯ್ಕ, ಚೆಸ್ ಚಾಂಪಿಯನ್ ಭರತ ಹೆಗಡೆ ದೊಡ್ಮನೆ, ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಗೀತಾ ನಾಯ್ಕ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

  Share This
  300x250 AD
  300x250 AD
  300x250 AD
  Leaderboard Ad
  Back to top