• Slide
    Slide
    Slide
    previous arrow
    next arrow
  • ನಾವು ಮಾಧ್ಯಮಗಳಿಗೆ ದಾಸರಾಗಿದ್ದೇವೆ: ಡಾ.ಮೈತ್ರೇಯಿಣಿ

    300x250 AD

    ಸಿದ್ದಾಪುರ: ಸತ್ಯವನ್ನು ಕಟ್ಟಿಕೊಡುವ ಗಟ್ಟಿತನ ಕೃತಿಕಾರರಲ್ಲಿರಬೇಕು. ನಾವು ಇಂದು ಮಾಧ್ಯಮಗಳಿಗೆ ದಾಸರಾಗಿದ್ದೇವೆ. ನಮಗೆ ಕೃತಿ ಬರವಣಿಗೆ ಮಾತ್ರ ಮುಖ್ಯವಾಗುತ್ತದೆ. ಅಧ್ಯಯನ ಇಲ್ಲದಾಗಿದೆ ಎಂದು ಸಾಹಿತಿಗಳು, ವಿಮರ್ಶಕ ಡಾ.ಮೈತ್ರೇಯಿಣಿ ಗೌಡರ್ ಹೇಳಿದರು.

    ಅವರು ಪಟ್ಟಣದ ಲಯನ್ಸ್ ಬಾಲಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪ್ರಯಾಗ ಸೇವಾ ಸಂಸ್ಥೆ, ಆದ್ಯೋತ ವೆಬ್‌ನ್ಯೂಸ್‌ಗಳ ಸಹಯೋಗದಲ್ಲಿ ಗಂಗಾಧರ ಕೊಳಗಿಯವರ ಮಾಸದ ನೆನಪುಗಳು ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

    ನನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಬೇಕಾದಂತಹ ಅಗ್ರಗಣ್ಯ ವ್ಯಕ್ತಿಗಳ ಪರಿಚಯ ಈ ಲೇಖನದಲ್ಲಿ ವಿಸ್ತೃತವಾಗಿ ಬರೆದಿದ್ದಾರೆ. ಈ ತಲೆಮಾರಿನ ಓದುಗರಿಗೆ ಬೇಕಾದ ಬರಹಗಳು ಸರಳವಾಗಿ, ಸಂಕ್ಷಿಪ್ತವಾಗಿ, ಸುಂದರವಾಗಿರಬೇಕು. ಅದು ಈ ಕೃತಿಯಲ್ಲಿದೆ. ಆತ್ಮಚರಿತ್ರೆಯಂತೆ ಕೃತಿ ಮೂಡಿಬಂದಿದೆ ಎಂದರು.

    300x250 AD

    ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ಬದುಕಿದ್ದ ಹಾಗೆ ಬದುಕುವವರು ಬಹಳ ಕಡಿಮೆ. ಲೇಖನ ಬರೆಯುವುದು ಬಹಳ ಕಷ್ಟ. ಅದಕ್ಕೆ ಓದು, ತಾಳ್ಮೆ ಇರಬೇಕು. ಇಂದಿನ ದಿನದಲ್ಲಿ ಯಾರನ್ನೋ ಮೆಚ್ಚಿಸುವ ಉದ್ದೇಶ ದಿಂದ ನಮ್ಮೋಳಗಿನ ತನವನ್ನು ಮರೆಯುತ್ತಿದೇವೆ. ವಚನಾದಿ ಶರಣರು ಹೇಳಿದ ಹಾಗೆ ಎಲ್ಲರೂ ಒಂದಾಗಿ ಬಾಳೋಣ ಎಂದರು.

    ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಕೃತಿ ಪರಿಚಯಿಸಿ ಮಾತನಾಡಿದರು.ಅದ್ಯೋತ ನ್ಯೂಸ್ ನ ಗಣೇಶ ಭಟ್ಟ್, ಸಾಹಿತಿ ಗಂಗಾಧರ ಕೊಳಗಿ, ಕಸಾಪದ ತಾಲೂಕಾಧ್ಯಕ್ಷ ಗೋಪಾಲ ಭಾಶಿ ವೇದಿಕೆಯಲ್ಲಿದ್ದರು. ಶಿಕ್ಷಕಿ ಸುಮಿತ್ರಾ ಶೇಟ್ ಭಾವಗೀತೆ ಹಾಡಿದರು. ಎಂ.ಆರ್.ಭಟ ಕಾರ್ಯಕ್ರಮ ನಿರ್ವಹಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top