• Slide
    Slide
    Slide
    previous arrow
    next arrow
  • ಮನೆಗಳಿಗೆ ನೀರು ನುಗ್ಗಲು ಐಆರ್‌ಬಿ, ಎನ್‌ಎಚ್‌ಎ ನೇರ ಕಾರಣ: ಶಾಸಕ ಸುನೀಲ ಆರೋಪ

    300x250 AD

    ಭಟ್ಕಳ: ಪುರಸಭೆ ವ್ಯಾಪ್ತಿಯ ಮಣ್ಕುಳಿ, ಮೂಢಭಟ್ಕಳ ಭಾಗದಲ್ಲಿ ಹೆದ್ದಾರಿ ಪ್ರಾಧಿಕಾರದವರು ಸಮರ್ಪಕ ಚರಂಡಿ ನಿರ್ಮಾಣ ಮಾಡದ ಕಾರಣ ಮಳೆಯಿಂದ ಪಟ್ಟಣದ 800 ಮನೆಗಳಿಗೆ ನೀರು ನುಗ್ಗಲು ಐಆರ್‌ಬಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೇ (ಎನ್‌ಎಚ್‌ಎಐ) ನೇರ ಹೊಣೆಗಾರರಾಗಿದ್ದಾರೆ ಎಂದು ಶಾಸಕ ಸುನೀಲ ನಾಯ್ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಲ್ಲಿ ದೂರಿದರು.

    ಅವರು ಇಲ್ಲಿನ ಮಣ್ಕುಳಿಯಲ್ಲಿ ಹೆದ್ದಾರಿಯಿಂದ ಮನೆಗೆ ನೀರು ನುಗ್ಗಿದ ಪ್ರದೇಶಕ್ಕೆ ಸಚಿವರೊಂದಿಗೆ ಭೇಟಿ ನೀಡಿದ ವೇಳೆ ವಸ್ತುಸ್ಥಿತಿ ವಿವರಿಸಿದ ಅವರು, ಮುಖ್ಯವಾಗಿ ವೆಂಕಟಾಪುರ ಭಾಗದಲ್ಲಿ ಮಾಡಿರುವ ಚರಂಡಿ ಕಾಮಗಾರಿಯನ್ನು ಈ ಭಾಗದಲ್ಲಿ ಮಾಡಬೇಕು. ಪ್ರತಿ ವರ್ಷ ಇಲ್ಲಿ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತದೆ. ಆ.2ರ ನೆರೆ ಬಂದ ವೇಳೆ ಇಲ್ಲಿ ಆಳೆತ್ತರದ ನೀರು ನಿಂತಿರುವುದನ್ನು ನಾನು ಕೂಡ ನೋಡಿದ್ದೇನೆ ಮತ್ತು ಅನುಭವಿಸಿದ್ದೇನೆ. ಕೂಡಲೇ ಈ ಭಾಗದಲ್ಲಿ ಸಮರ್ಪಕ ಚರಂಡಿ ಮಾಡುವಂತೆ ಹೆದ್ದಾರಿ ಪ್ರಾಧಿಕಾರದವರಿಗೆ ಸೂಚಿಸುವಂತೆ ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಥಳೀಯರಾದ ರಾಮನಾಥ ಬಳೆಗಾರ ಹಾಗೂ ಸತೀಶಕುಮಾರ ನಾಯ್ಕ ಸಚಿವರಿಗೆ ಇಲ್ಲಿನ ಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.

    ಸ್ಥಳದಲ್ಲಿ ಹಾಜರಿದ್ದ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಲಿಂಗೇಗೌಡ ಮಾತನಾಡಿ, ಚರಂಡಿ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ. ಆದರೆ ಇಲ್ಲಿ ರಸ್ತೆ ನಿರ್ಮಿಸಲು ಮಾಲ್ಕಿ ಜಮೀನಿನವರು ಸ್ಥಳ ಬಿಟ್ಟುಕೊಡದ ಕಾರಣ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಇದಕ್ಕೆ ಶಾಸಕ ಸುನೀಲ ನಾಯ್ಕ, ನನ್ನ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಮಾಡಿ, ಸ್ಥಳೀಯರ ಮನವೊಲಿಸಿ ಜಾಗ ಬಿಟ್ಟುಕೊಡಲಾಗುವುದು. ಕಾಮಗಾರಿಗೆ ಯಾವುದೇ ಸ್ಥಳೀಯ ತಕರಾರು ಬರದಂತೆ ನೋಡಿಕೊಳ್ಳುವುದು ಶಾಸಕನಾಗಿ ನನ್ನ ಜವಾಬ್ದಾರಿ ಎಂದ ಅವರು, ಐಆರ್‌ಬಿಯವರು ಶೀಘ್ರದಲ್ಲಿ ಚರಂಡಿ ನಿರ್ಮಿಸುವಂತೆ ಸೂಚಿಸಬೇಕೆಂದು ನಿವೇದಿಸಿದರು.

    300x250 AD

    ಇದಕ್ಕೆ ಒಪ್ಪಿಗೆ ಯೋಜನಾಧಿಕಾರಿ ಲಿಂಗೇಗೌಡ, ಐಆರ್‌ಬಿ ಅಧಿಕಾರಿ ಶ್ರೀನಿವಾಸ ಅವರಿಗೆ ಮಳೆ ಮುಗಿದ ಮೇಲೆ ಮಣ್ಕುಳಿಯಿಂದ ಮೂಢಭಟ್ಕಳ ನದಿಯ ತನಕ ಚರಂಡಿ ನಿರ್ಮಿಸುವಂತೆ ಸೂಚಿಸಿದರು. ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕೂಡ ಅವರಿಗೆ ಆದೇಶ ನೀಡಿ ಕೂಡಲೇ ಈ ಕೆಲಸ ಮಾಡಿ ಮುಗಿಸುವಂತೆ ಸೂಚಿಸಿದರು.

    ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಮತಾದೇವಿ, ತಹಶೀಲ್ದಾರ ಬಿ.ಸುಮಂತ, ಮುಖ್ಯಾಧಿಕಾರಿ ಎಂ.ಕೆ.ಸುರೇಶ ಹಾಗೂ ಸ್ಥಳೀಯರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top