Slide
Slide
Slide
previous arrow
next arrow

ಗಿರಿಧರ ಕಜೆಯವರ ಔನ್ನತ್ಯ ಕೃತಿ ಬಿಡುಗಡೆ

300x250 AD

ಶಿರಸಿ: ಆಯುರ್ವೇದ ಕ್ಷೇತ್ರದಲ್ಲಿ ಓದುವವರು ಹೆಚ್ಚಬೇಕು. ಸಿಲೇಬಸ್ ಜ್ಞಾನಕ್ಕೆ ಸೀಮಿತ ಆದರೆ ಮೇಲ್ಪಂಕ್ತಿ ಆದವರ ಸಾಲಿನಲ್ಲಿ ಎತ್ತರದ ಸ್ಥಾನಕ್ಕೆ‌ ನಾವೂ ಹೋಗಲಾಗದು ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.
ರವಿವಾರ ನಗರದ ವಿನಾಯಕ ಸಭಾಂಗಣದಲ್ಲಿ ನಾಡಿನ ಹೆಸರಾಂತ ವೈದ್ಯ ಡಾ. ಗಿರಿಧರ ಕಜೆ ಅವರ ಆಯುರ್ವೇದ ಜ್ಞಾನದ ಭಾಗವಾಗಿ ಔನ್ನತ್ಯ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಆಯುರ್ವೇದ ಶಕ್ತಿ ಜನ ಸಾಮಾನ್ಯರ ಭಾವನೆಯಲ್ಲಿ ಇದೆ. ಅದಕ್ಕೆ ಆಯುರ್ವೇದ ಕ್ಷೇತ್ರದಲ್ಲಿ ಹಲವಡೆ ಹಣತೆಯಾಗಿ ಕೆಲಸ ನಡೆಯುತ್ತಿದೆ. ಡಾ. ಗಿರಿಧರ ಕಜೆ ಅವರು ಇದಕ್ಕೆ ಒಂದು ಹೊಸ ಶಕ್ತಿ ನೀಡಿದ್ದಾರೆ ಎಂದ ಅವರು ಕಜೆ ಅವರು ಆಯುರ್ವೇದ ಜ್ಞಾನ ಯಾನದ ಅಭಿಯಾನವ ಭಾಗವಾಗಿ ಬಿಡುಗಡೆ ಆಗಲಿರುವ 16 ಪುಸ್ತಕಗಳ ಸಂಗತಿಗಳೂ ಜನರಿಗೆ ತಲುಪಲಿ ಎಂದರು.
ನಮ್ಮ ಆರೋಗ್ಯ ರಕ್ಷಣೆಗೆ ನಾವೇ ಜವಬ್ದಾರರು ಆಗಬೇಕು. ನಮ್ಮ ಆರೋಗ್ಯ, ಆಹಾರ ಪದ್ಧತಿಯಿಂದ ನಮ್ಮ ಆರೋಗ್ಯವಂತ ಶರೀರ, ಸಮಾಜ, ನಿರ್ಮಾಣ ಆಗಬೇಕು ಎಂದ ಅವರು, ಶಿರಸಿ ಆಯುರ್ವೇದಕ್ಕೆ ಪ್ರಸಿದ್ಧವಾದ ಊರು. ಹಳ್ಳಿ ಹಳ್ಳಿಯಲ್ಲಿ ಔಷಧ ಕೊಡುವವರು ಇದ್ದಾರೆ. ಈ ವಿದ್ಯೆ ‌ಓದಿ ಅನೇಕ ರೋಗಕ್ಕೆ ಔಷಧ ಕೊಟ್ಟಿ ಗುಣ ಪಡೆದಿದ್ದಾರೆ. ಇಂತಹ ಶಿರಸಿಯಲ್ಲಿ ಔನ್ನತ್ಯ ಎಂಬ ಕೃತಿ ಬಿಡುಗಡೆ ಗರಿ ಸಿಕ್ಕಿದಂತೆ ಆಗಿದೆ. ಕಜೆ ಅವರು ಆಯುರ್ವೇದಕ್ಕೆ ವಿಶ್ವಾಸ ಮೂಡಿಸಿದ್ದಾರೆ. ಉಳಿದ ಔಷಧಗಳ ಜೊತೆ ಆಯುರ್ವೇದವೂ ಸಿದ್ಧ ಎಂಬುದನ್ನು ತಿಳಿಸಿದವರು ಅವರು. ಲಾಬಿಯನ್ನೂ ಮಣಸಿ ಗೆದ್ಧವರು ಕಜೆ ಅವರು ಎಂದರು.
ಕೃತಿ ಕುರಿತು ಮಾತನಾಡಿದ ವಿದ್ಯಾ ವಾಚಸ್ಪತಿ ವಿ. ಉಮಾಕಾಂತ ಭಟ್ಟ ಮಾತನಾಡಿ, ಆಯುರ್ವೇದದ ಬಗ್ಗೆ ಅವಜ್ಞೆ ಇದ್ದಾಗಲೇ ಆಯುರ್ವೇದ ಓದಿದವರು‌. ಶ್ವಾಸ ತೆಗೆದುಕೊಳ್ಳುವಲ್ಲಿ ಆಗದ ಇದ್ದ ಕಾಲದಲ್ಲಿ ಕಜೆ ಅವರು ಜನರ ಪರ ನಿಂತರು. ಆಯುರ್ವೇದದ‌ ಮೂಲಕ ಜಾಗೃತಿ ಮೂಡಿಸಿದರು ಎಂದು ಬಣ್ಣಿಸಿದರು.
ಕೃತಿಕಾರ ಡಾ. ಗಿರಿಧರ ಕಜೆ ಮಾತನಾಡಿ, ಹೆಲ್ತ ಫಾರ್ ಆಲ್ ಡಿಸಿಸ್ ಫಾರ್ ಆಲ್ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆ ಎಡವಿದ್ದು ಎಲ್ಲಿದೆ? . ಔಷಧ ತಲುಪಿಸಿ ಆರೋಗ್ಯ ಸಾಧನೆ ಮಾಡಲು ಸಾಧ್ಯವಿಲ್ಲ. ಆಯುರ್ವೇದ ಜ್ಞಾನ ತಲುಪಿಸಿ ಸಾಧಿಸಬೇಕು ಎಂದರು.

ಅತಿಥಿಯಾಗಿ ಪಾಲ್ಗೊಂಡ ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ, ಕಜೆ ಅವರು ಆಯುರ್ವೇದ ವಿಸ್ತಾರಕ್ಕೆ ಕೆಲಸ‌ ಮಾಡುತ್ತಿದ್ದಾರೆ. ಯಾವುದೆ ಕಾರಣಕ್ಕೂ ಅಯುರ್ವೇದ ಮೂಲಕಕ್ಕೆ ತೊಂದರೆ ಆಗದಂತೆ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ವಹಿಸಿದ್ದರು.
ವಿಶ್ವಶಾಂತಿ ಸೇವಾ ಟ್ರಸ್ಟ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಇದ್ದರು‌.
ಕು. ತುಳಸಿ ಹೆಗಡೆ ಪ್ರಾರ್ಥಿಸಿದರು‌. ರಾಘವೇಂದ್ರ ಬೆಟ್ಟಕೊಪ್ಪ ಸ್ವಾಗತಿಸಿದರು‌. ಮಂಜುನಾಥ ಭಾಗವತ್ ನಿರ್ವಹಿಸಿದರು. ಸುಬ್ರಾಯ ಹೆಗಡೆ ವಂದಿಸಿದರು. ಸಿದ್ದಾಪುರದ ಆಯುರ್ವೇದ‌ ಕಾಲೇಜು, ವಿಶ್ವಶಾಂತಿ ಸೇವಾ ಟ್ರಸ್ಟ ಕರ್ನಾಟಕ, ಸೆಲ್ಕೋ ಇಂಡಿಯಾ ಸಹಕಾರ ನೀಡಿದರು.


ಆಯುರ್ವೇದ ದರ್ಶನ, ವಿಜ್ಞಾನ, ಅದೊಂದು ಯೋಗ. ಆಯುರ್ವೇದ ಗುರಿ ಸ್ವಾಸ್ಥ್ಯ, ಅಲೋಪತಿ ಗುರಿ ಆರೋಗ್ಯ. ಇವೆರಡೂ ಒಂದೇ ಅಲ್ಲ.
-ವಿದ್ಯಾವಾಚಸ್ಪತಿ ವಿ. ಕೆರೇಕೈ

300x250 AD

ಪೀಳಿಗೆಯಿಂದ ಪೀಳಿಗೆಗೆ ದೈಹಿಕ ಆರೋಗ್ಯ ಸಾಮಥ್ಯ೯ ಕಡಿಮೆ ಆಗುತ್ತಿದೆ. ಪ್ರಾಣಿ ಕಾಯಿಲೆ ಮನುಷ್ಯರಿಗೆ ಬರುತ್ತಿದೆ. ಮನುಷ್ಯರ ಕಾಯಿಲೆ ಪ್ರಾಣಿಗಳಿಗೆ ಬರುತ್ತಿಲ್ಲ. ಏಕೆಂದರೆ ಪ್ರಾಣಿಗಳು ಆಹಾರ ಬದಲಿಸಲಿಲ್ಲ. ಆಯುರ್ವೇದದಲ್ಲಿ ಒಂದೇ ಒಂದು ಮೆಡಿಸಿನ್ ಬ್ಯಾನ್ ಆಗಿಲ್ಲ. ಆಯುರ್ವೇದ ಔಷಧ ನೇಟಿವ್ ಸಿಸ್ಟಂ ಔಷಧ.
ಡಾ. ಗಿರಿಧರ ಕಜೆ, ಪ್ರಸಿದ್ದ ವೈದ್ಯರು

ಆಹಾರವನ್ನು ಪೂಜ್ಯ ಭಾವನೆಯಿಂದ ಸೇವಿಸದೇ ಹೋದರೆ ಅಜೀರ್ಣ ಆಗುತ್ತದೆ.

  • ಮೋಹನ ಭಾಸ್ಕರ ಹೆಗಡೆ, ಹೆರವಟ್ಟ ಸೆಲ್ಕೋ ಸಿಇಓ
Share This
300x250 AD
300x250 AD
300x250 AD
Back to top