• Slide
    Slide
    Slide
    previous arrow
    next arrow
  • ಕ್ರಿಮ್ಸ್’ನಲ್ಲಿ ನೌಕಾ ಬ್ಯಾಂಡ್ ಕಾರ್ಯಕ್ರಮ

    300x250 AD

    ಕಾರವಾರ: ಇಲ್ಲಿನ ಐಎನ್‌ಎಸ್ ಕದಂಬ ನೌಕಾನೆಲೆಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್)ಯ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ನೌಕಾ ಬ್ಯಾಂಡ್ ಕಾರ್ಯಕ್ರಮವು ಎಲ್ಲರ ಮನರಂಜಿಸಿತು.

    ಕ್ಯಾಪ್ಟನ್ ಬಿ.ಕೆ.ಬಾರಿಕ್ ಇವರ ಮುಂದಾಳತ್ವದಲ್ಲಿ ಬ್ಯಾಂಡ್ ಕಾರ್ಯಕ್ರಮ ನಡೆಯಿತು. ಸರ್ಜನ್ ಕಮಾಂಡರ್ ಪಾರ್ಥಾ ಬುಯಾನ್ ಉಪಸ್ಥಿತರಿದ್ದರು. ಕ್ರಿಮ್ಸ್ ಡೀನ್ ಹಾಗೂ ನಿರ್ದೇಶಕ ಡಾ.ಗಜಾನನ ನಾಯಕರವರು ಸ್ವಾಗತ ಕೋರಿದರು. ಪ್ರಾಂಶುಪಾಲರಾದ ಡಾ.ಶಿವಕುಮಾರ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ಉಸ್ತುವಾರಿಯನ್ನು ಅರವಳಿಕೆ ವಿಭಾಗದ ಪ್ರಾಧ್ಯಾಪಕ ಡಾ.ಮಂಜುನಾಥ ಭಟ್ ವಹಿಸಿದ್ದರು.

    300x250 AD

    ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲ ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ವೈದ್ಯ ವಿದ್ಯಾರ್ಥಿಗಳು, ಅರೆ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವೈದ್ಯ ವಿದ್ಯಾರ್ಥಿನಿ ನಿಧಿ ಕಾರ್ಯಕ್ರಮದ ನಿರೂಪಣೆ ಮಾಡಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top