Slide
Slide
Slide
previous arrow
next arrow

ಸ್ಪಷ್ಟ ಗುರಿಯಿಟ್ಟು ಅದೆರೆಡೆಗಿನ ಒಳ್ಳೆಯ ವಿಚಾರ ಮಾಡಿದರೆ ಯಶಸ್ಸು ನಿಶ್ಚಿತ:ಶ್ರೀನಿವಾಸ ಭಟ್ ಧಾತ್ರಿ

300x250 AD

ಮುಂಡಗೋಡ: ಶಾಲಾ ಮಕ್ಕಳು ವಿದ್ಯಾರ್ಥಿ ದಿಶೆಯಲ್ಲಿ ಸ್ಪಷ್ಟವಾಗಿ ಗುರಿಯನ್ನು ಇಟ್ಟುಕೊಂಡು ಒಳ್ಳೆಯ ವಿಚಾರ ಮಾಡಿ ಅಳವಡಿಸಿಕೊಂಡರೆ ಅದು ಜೀವನ ಕೊನೆಯವರಿಗೆ ಇರುತ್ತದೆ ಎಂದು ಧಾತ್ರಿ ಫೌಂಡೇಶನ್ ಮುಖ್ಯಸ್ಥ ಶ್ರೀನಿವಾಸ ಭಟ್ಟ ಮಕ್ಕಳಿಗೆ ಕಿವಿಮಾತು ಹೇಳಿದರು.

ಅವರು ಶುಕ್ರವಾರ ತಾಲೂಕಿನ ಕಾತೂರ ಪಂಚಾಯತ್ ವ್ಯಾಪ್ತಿಯ ಕಾತೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾತೂರ ಸರಕಾರಿ ಪ್ರೌಢಶಾಲೆ, ಸರಕಾರಿ ಪ್ರಾಥಮಿಕ ಶಾಲೆ ಸಿಂಗ್ನಳ್ಳಿ, ಮರಗಡಿ ಗ್ರಾಮದ ಸರಕಾರಿ ಉರ್ದು ಹಾಗೂ ಕನ್ನಡ ಪ್ರಾಥಮಿಕ ಶಾಲೆ, ಸರಕಾರಿ ಪ್ರಾಥಮಿಕ ಶಾಲೆ ಗೌಳಿದಡ್ಡಿ, ಸರಕಾರಿ ಪ್ರಾಥಮಿಕ ಹುಲಿಹೊಂಡ ದಡ್ಡಿ, ಸರಕಾರಿ ಪ್ರಾಥಮಿಕ ಶಾಲೆ ಮರಗಡಿ ಗೌಳಿದಡ್ಡಿ ಸರಕಾರಿ ಪ್ರಾಥಮಿಕ ಶಾಲೆ ಮುಡಸಾಲಿ,ಸರಕಾರಿ ಪ್ರಾಥಮಿಕ ಶಾಲೆ ಆಲಳ್ಳಿ ವಿದ್ಯಾರ್ಥಿಗಳಿ ಉಚಿತವಾಗಿ ನೋಟ್‌ಬುಕ್‌ಗಳನ್ನು ವಿತರಣೆ ಮಾಡಿ ಕಾತೂರ ಸರಕಾರಿ ಪ್ರೌಢಶಾಲೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಏನು ಪಡೆಯಬೇಕೆಂಬುದನ್ನು ಶ್ರದ್ಧೆ ತಾಳ್ಮೆಯಿಂದ ಮಾಡಿದರೆ ಸಾಧಿಸಿಯೇ ಸಾಧಿಸುತ್ತಾರೆ. ನೀವು ಏನು ಪಡೆಯಬೇಕೆನ್ನುತ್ತಿರಿ ಅದನ್ನು ಪಡೆದೆ ಪಡೆಯುತ್ತಿರಿ. ಈಗನಿಂದಲೇ ಒಳ್ಳೆ ಫೌಂಡೇಶನ್ ಹಾಕಿಕೊಳ್ಳಬೇಕು ಎಂದರು.

300x250 AD

ಸಮಾಜ ಸೇವೆಗೆ 1 ರೂ ದಾನಮಾಡಿದರೆ ಅದು 4 ರೂ.ಗಳಾಗಿ ವಾಪಸ್ಸ್ ಬರುತ್ತದೆ ಗೋಡೆಗೆ ಹೊಡೆದ ಚೆಂಡು ತಿರುಗಿ ಅದೇ ವೇಗದಲ್ಲಿ ನಮ್ಮಕಡೆ ಬರುತ್ತದೆ ಇದು ನನ್ನ ಅನುಭವದ ಮಾತು ಈ ವಿಚಾರವನ್ನು ಇಟ್ಟುಕೊಂಡು ತಮ್ಮ ಉದ್ಯಮದ ಒಂದಷ್ಟು ಭಾಗವನ್ನು ಸಮಾಜ ಸೇವೆಗಾಗಿ ಇಟ್ಟು ಉತ್ತರಕನ್ನಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿ, ಶಿಕ್ಷಣ ಹಾಗೂ ಆರೋಗ್ಯ ಈ ಮೂರು ಕ್ಷೇತ್ರಗಳನ್ನು ಆಯ್ಕೆಮಾಡಿಕೊಂಡು ಈ ಕ್ಷೇತ್ರದಲ್ಲಿ ಸಮಾಜ ಸೇವೆಯನ್ನು 10-15 ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ ಎಂದರು. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ದೊಡ್ಡ ಪ್ರಮಾಣದಲ್ಲದಿದ್ದರೂ ಸಣ್ಣಪ್ರಮಾಣದಲ್ಲಾದರೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಜಿಲ್ಲೆಯ ಮುಂಡಗೋಡ, ಯಲ್ಲಾಪುರ ಹಾಗೂ ಶಿರಸಿ ಭಾಗದಲ್ಲಿ ಸುಮಾರು 35 ಸಾವಿರ ಕ್ಕಿಂತ ಹೆಚ್ಚು ನೋಟ್‌ಬುಕ್‌ಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದೇವೆ ಎಂದರು.

ಬಿಜೆಪಿ ಮುಖಂಡ ಹಾಗೂ ಪಟ್ಟಣ ಪಂಚಾಯತ್ ಸದಸ್ಯ ಫಣಿರಾಜ ಹದಳಗಿ, ನಾಗನೂರ ಗ್ರಾ.ಪಂ ಅಧ್ಯಕ್ಷ ಸಳಕೆ, ಎಸ್.ಡಿ.ಎಂ.ಸಿ ಸದಸ್ಯ ಅಶ್ವಥಾಮ, ಗಿರೀಶ ಕಾತೂರ ಕಾತೂರ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯ ಪ್ರಕಾಶ ಅಜ್ಜಂನವರ ಮುಂತಾದವರು ಇದ್ದರು. ಕಾರ್ಯಕ್ರಮದ ಸ್ವಾಗತವನ್ನು ಕಾತೂರ ಪ್ರೌಢಶಾಲೆಯ ಮುಖ್ಯಶಿಕ್ಷಕ ಅಶೋಕ ಸಂಕ್ರಿಕೊಪ್ಪ ಮಾಡಿದರು ನಿರೂಪಣೆಯನ್ನು ಶಿಕ್ಷಕ ಸಿ.ಟಿ ಮಡಿವಾಳ ಮಾಡಿದರು.

Share This
300x250 AD
300x250 AD
300x250 AD
Back to top