ಜೊಯಿಡಾ: ತಾಲೂಕಿನ ಪ್ರಮುಖ ರಾಜ್ಯ ಹೆದ್ದಾರಿ ಅಣಶಿಘಟ್ಟ ರಸ್ತೆ ಬಂದ್ ಮಾಡಬೇಕೆಂಬ ಉದ್ದೇಶ ಜಿಲ್ಲಾಡಳಿತಕ್ಕೆ ಇಲ್ಲ. ಭಾರಿ ವಾಹನ ಅಣಶಿ ರಸ್ತೆ ಮುಖಾಂತರ ಮಳೆಗಾಲದಲ್ಲಿ ಸಂಚರಿಸಿದರೆ ವೈಬ್ರೇಟ್ ಆಗಿ ಮಣ್ಣು ಕುಸಿಯುವ ಸಾಧ್ಯತೆ ಇರುವುದರಿಂದ ತಾತ್ಕಾಲಿಕ ಭಾರಿ ವಾಹನ ಸಂಚಾರ ನಿಷೇಧ ಮಾಡಲಾಗಿದೆ. ಒಂದೆರಡು ವಾರದಲ್ಲಿ ಯಥಾಸ್ಥಿತಿ ಸಂಚಾರ ಪ್ರಾರಂಭವಾಗಲಿದೆ ಎಂದು ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ ಹೇಳಿದರು.
ಅವರು ಗುರುವಾರ ತಹಶೀಲ್ದಾರ ಕಛೇರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಅಣಶಿ ರಾಜ್ಯ ಹೆದ್ದಾರಿ ಮೂಲಕ ಬಸ್ ಸಂಚಾರ ಪ್ರಾರಂಭಿಸಬೇಕೆಂದು ಕೇಳಿದಾಗ ಮಾತನಾಡಿದ ಅವರು, ಈಗ ಮಳೆ ಇರುವುದರಿಂದ ಈ ಮಾರ್ಗದ ಮೂಲಕ ಸಂಚಾರ ಅಪಾಯವಿದೆ. ಮಳೆ ಎಲ್ಲಿ ಹೆಚ್ಚು, ಕಡಿಮೆ ಬೀಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈಗ ಬಸ್ ಪ್ರಾರಂಭಿಸಿದರೆ ಟ್ರಕ್‌ನವರು ಕೇಳುತ್ತಾರೆ. ಇನ್ನೂ ಎರಡು ವಾರದಲ್ಲಿ ಮಳೆ ಕಡಿಮೆಯಾಗಲಿದೆ ಆಗ ಎಂದಿನಂತೆ ಬಸ್ ಸಂಚಾರ ಪ್ರಾರಂಭಿಸಲಾಗುವುದು. ಕದ್ರಾ, ಮಲ್ಲಾಪುರ, ಕೈಗಾ ಈ ಪ್ರದೇಶದಲ್ಲಿ ಕೂಲಿ ಕೆಲಸಕ್ಕೆ ಹೋಗುವ ಜನರಿದ್ದಾರೆ. ಜೊಯಿಡಾ, ದಾಂಡೇಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲಾ- ಕಾಲೇಜಿಗೆ ಹೋಗುತ್ತಿರುವ ವಿಷಯ ಗಮನಕ್ಕಿದೆ. ಕಾರವಾರ ಹಾಗೂ ದಾಂಡೇಲಿ ಘಟಕದೊಂದಿಗೆ ಮಾತನಾಡಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗಲೆಂದು ಹೆಚ್ಚುವರಿ ಮಿನಿ ಬಸ್ ಅಗತ್ಯ ವೇಳೆಯಲ್ಲಿ ಬಿಡುವಂತೆ ಕ್ರಮ ಜರುಗಿಸುತ್ತೇವೆ ಎಂದರು.
ವೋಟರ್ ಐಡಿಗೆ ಆಧಾರ್ ಜೋಡಿಸಿ. ವೋಟರ್ ಐಡಿಯೊಂದಿಗೆ ಆಧಾರ್ ಜೋಡಣೆ ಕುರಿತು ಸಾರ್ವಜನಿಕರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಮತಗಟ್ಚೆ ಅಧಿಕಾರಿ (ಬಿಎಲ್‌ಓ) ಅಥವಾ ವೋಟರ್ ಹೆಲ್ಪ್ಲೈನ್ ಆ್ಯಪ್ ಮೂಲಕ ನ್ಯಾಶನಲ್ ವೋಟರ್ ಸರ್ವಿಸ್ ಪೋರ್ಟಲ್ (ಎನ್‌ವಿಎಸ್‌ಪಿ) ಮೂಲಕ ಸ್ವಂತ ಮಾಡಬಹುದು. ಮೂಲ ದಾಖಲೆ ಯಾರು ಕೊಡಬಾರದು. ಬ್ಯಾಂಕ್ ಖಾತೆಗಳು ಹ್ಯಾಕ್ ಆಗುವ ಸಾಧ್ಯತೆ ಇದೆ. ಸಂಪರ್ಕ ಇಲ್ಲದ ಪ್ರದೇಶದಲ್ಲಿ ಬಿಎಲ್‌ಓ ಸ್ಥಳಕ್ಕೆ ಹೋಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಸಂತೋಷ ಮಂಥೆರೋ, ಕಸಾಪ ಅಧ್ಯಕ್ಷ ಪಾಂಡುರAಗ ಪಟಗಾರ, ಪ್ರಮುಖರಾದ ಶ್ಯಾಮ ಪೊಕಳೆ, ಸುಭಾಷ ಗಾವಡಾ ಇತರರು ಇದ್ದರು.