Slide
Slide
Slide
previous arrow
next arrow

ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಧನಶ್ರೀ ಪ್ರಥಮ ಸ್ಥಾನ

300x250 AD

ಹೊನ್ನಾವರ: ಪಟ್ಟಣದ ತುಳಸಿನಗರದ ಧನಶ್ರೀ ಆರ್.ಬಾನಾವಳಿಕರ್ ಗದಗದಲ್ಲಿ ಲಕ್ಷ್ಮೇಶ್ವರ ಶೈನ್ ಸ್ಪೋರ್ಟ್ಸ್ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ಇವರು ರೇಷ್ಮಾ ಮತ್ತು ರಮಾಕಾಂತ ಬಾನವಾಳಿಕರ್ ಇವರ ಪುತ್ರಿಯಾಗಿದ್ದು, ಸೇಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 4ನೇ ತರಗತಿ ಅಧ್ಯಯನ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಪ್ರಜ್ವಲ ಶೆಟ್ಟಿ ಇವರಿಂದ ತರಬೇತಿ ಪಡೆಯುತ್ತಿದ್ದು, ಆರಂಭದಲ್ಲಿಯೇ ಈ ಸಾಧನೆ ಮಾಡಿದ್ದಾರೆ. ಇವರ ಈ ಸಾಧನೆಗೆ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಜಯಕರ್ನಾಟಕ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರದೀಪ ಶೆಟ್ಟಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top