• Slide
    Slide
    Slide
    previous arrow
    next arrow
  • ಆಶಾ ಕಾರ್ಯಕರ್ತೆಯರಿಗೆ ಸೀರೆ, ಛತ್ರಿ ವಿತರಿಸಿದ ಶಾಸಕಿ ರೂಪಾಲಿ

    300x250 AD

    ಕಾರವಾರ: ಆಶಾ ಕಾರ್ಯಕರ್ತೆಯರು ಮಾಡುತ್ತಿರುವ ಕೆಲಸಕ್ಕೆ ಏನು ಕೊಟ್ಟರೂ ಕಡಿಮೆ. ಅವರ ಸೇವೆ ಗಮನಿಸಿ ನನ್ನಿಂದಾದ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.

    ನಗರದ ತಾ.ಪಂ ಸಭಾಭವನದಲ್ಲಿ ಬುಧವಾರ ತಾಲ್ಲೂಕಿನ ಆಶಾ ಕಾರ್ಯಕರ್ತೆಯರಿಗೆ ತಮ್ಮ ಸ್ವಂತ ವೆಚ್ಚದಲ್ಲಿ ಸೀರೆ, ಛತ್ರಿ ಕೊಡುಗೆಯಾಗಿ ನೀಡಿ, ಅವರು ಮಾತನಾಡುತ್ತಿದ್ದರು. ಆಶಾ ಕಾರ್ಯಕರ್ತೆಯರು ಕುಟುಂಬದಲ್ಲಿ ಬಡತನ, ಏನೆಲ್ಲ ಸಮಸ್ಯೆಗಳಿದ್ದರೂ ಅವೆಲ್ಲವನ್ನೂ ನುಂಗಿಕೊಂಡು ಸಮಾಜ ಸೇವೆ ಮಾಡುತ್ತಾರೆ. ಸರ್ಕಾರದ ಯಾವುದೇ ಯೋಜನೆ ಬಂದರೂ ನೆರವಾಗುತ್ತಾರೆ. ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಸರ್ಕಾರದ ಯೋಜನೆಯನ್ನು ಜನರಿಗೆ ತಲುಪಿಸುತ್ತಾರೆ. ಇವರು ಮಾಡುವ ಕೆಲಸಕ್ಕೆ ಏನು ಕೊಟ್ಟರೂ ಕಡಿಮೆ. ಆದರೆ ನಾನು ಅಳಿಲು ಸೇವೆಯನ್ನು ಮಾಡಿದ್ದೇನೆ. ಇವರಿಗೆ ಇನ್ನೂ ಹೆಚ್ಚಿನ ಸಹಾಯ, ಸೌಲಭ್ಯ ಕಲ್ಪಿಸುವ ಅಗತ್ಯತೆ ಇದೆ. ನೊಂದವರಿಗೆ ದೇವರ ಸ್ಥಾನದಲ್ಲಿದ್ದು ಆಶಾ ಕಾರ್ಯಕರ್ತೆಯರು ನೆರವಾಗುತ್ತಿದ್ದಾರೆ ಎಂದರು.

    ಆಶಾ ಕಾರ್ಯಕರ್ತರನ್ನು ಕಾಯಂ ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎನ್ನುವುದು ಇವರೆಲ್ಲರ ಬೇಡಿಕೆಯಷ್ಟೇ ಅಲ್ಲ. ನನ್ನ ಬೇಡಿಕೆಯೂ ಹೌದು. ಆ ನಿಟ್ಟಿನಲ್ಲಿ ನಾನೂ ಪ್ರಯತ್ನಿಸುತ್ತೇನೆ. ಒಂದಲ್ಲ ಒಂದು ಇದು ದಿನ ಆಗೇ ಆಗುತ್ತದೆ ಎನ್ನುವ ವಿಶ್ವಾಸ ಇದೆ ಎಂದು ತಿಳಿಸಿದರು.

    300x250 AD

    ಈ ಸಂದರ್ಭದಲ್ಲಿ ತಹಶೀಲ್ದಾರ ಎನ್.ಎಫ್.ನರೋನಾ, ತಾಲೂಕು ಆರೋಗ್ಯ ಅಧಿಕಾರಿ ಸೂರಜಾ ನಾಯ್ಕ, ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷ ಸುಭಾಷ ಗುನಗಿ ಮತ್ತಿತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top