ಶಿರಸಿ: ಸಾಂಸ್ಕೃತಿಕ, ಕ್ರೀಡೆ ಕ್ಷೇತ್ರವು ನಮ್ಮ ಬದುಕಿಗೆ ವಾಸ್ತವಿಕತೆಯನ್ನು ಕಲಿಸುತ್ತವೆ ಎಂದು ನಿವೃತ್ತ ವಿಂಗ್ ಕಮಾಂಡರ್ ಮುರಾರಿ ಭಟ್ಟ ಹೇಳಿದರು.
ಮಂಗಳವಾರ ಅವರು ತಾಲೂಕಿನ ಯಡಹಳ್ಳಿಯಲ್ಲಿ ವಿದ್ಯೋದಯ ಪಿಯು ಕಾಲೇಜಿನಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿ, ಇಂಡಿಯಾ ಬುಕ್ ಆಪ್ ರೆಕಾರ್ಡನಲ್ಲಿ ದಾಖಲಾದ ವಿಶ್ವಶಾಂತಿ ಸರಣಿಯ ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಸಮ್ಮಾನಿಸಿ ಮಾತನಾಡಿದರು.
ನಾವು ನಮ್ಮ ತಪ್ಪುಗಳು ಆಗದಂತೆ ನೋಡಿಕೊಳ್ಳಬೇಕು. ಯಾವತ್ತೂ ಪ್ರಾಯೋಗಿಕ ಆಗಿ ಆಲೋಚಿಸಬೇಕು. ಪ್ರಾಯೋಗಿಕ ಆಲೋಚನೆಗಳಿಗೆ ಪಠ್ಯೇತರ ಸಂಗತಿ ನೆರವಾಗುತ್ತದೆ ಎಂದ ಅವರು, ಪ್ರಯತ್ನ ಪಟ್ಟರೆ ಫಲ ಇದೆ. ಅದರೆ ಕಷ್ಟದ ಪ್ರಯತ್ನ ಇಲ್ಲದೇ ಫಲ ಬರುವದಿಲ್ಲ. ಯಾವುದಕ್ಕೂ ಚಲತಾ ಹೈ ಎಂದು ಆಲೋಚಿಸಬಾರದು ಎಂದರು.
ಅತಿಥಿಗಳಾಗಿ ಪಾಲ್ಗೊಂಡ ಎಂಎಸ್ಪಿ ಸಮಿತಿಯ ಕಾರ್ಯದರ್ಶಿ ಎಂ.ವಿ.ಹೆಗಡೆ ಕಾನಗೋಡ, ವಿದ್ಯಾರ್ಥಿ ಸಂಸತ್ತು ಪ್ರಜಾಪ್ರಭುತ್ವದ ವಿಧಾನ ಕಲಿಸುತ್ತದೆ. ಮೊಬೈಲ್ ಬಿಟ್ಟು ಓದಬೇಕು. ಶೈಕ್ಷಣಿಕ ಜೊತೆ ಕ್ರೀಡೆ, ಸಾಂಸ್ಕೃತಿಕ ಸಾಧನೆ ಮಾಡಬೇಕು ಎಂದರು.
ಸಮ್ಮಾನಿತೆ ತುಳಸಿ ಹೆಗಡೆ, ಊರಲ್ಲಿ ಆಗುವ ಸಮ್ಮಾನ ಖುಷಿಯಾಗಿದೆ. ಅಜ್ಜ ಸೇವೆ ಸಲ್ಲಿಸಿದ ಸಂಸ್ಥೆಯ ಆವರಣದಲ್ಲಿ ಸಮ್ಮಾನ ಆಗಿದ್ದು ಪ್ರಸಾದ ಎಂದು ಸ್ವೀಕರಿಸುತ್ತೇನೆ ಎಂದರು.ಪ್ರಾಚಾರ್ಯ ಆರ್.ಟಿ.ಭಟ್ಟ ಅಧ್ಯಕ್ಷತೆ ವಹಿಸಿ ಸಾಧನೆಗೆ ಶ್ರಮ ಬೇಕು. ಶ್ರಮದ ಫಲಕ್ಕೆ ಕುಟುಂಬದ ಸಹಕಾರವೂ ಬೇಕು ಎಂದರು.ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ನಿರಂಜನ ಹೆಗಡೆ ಯಡಹಳ್ಳಿ, ಸಾಂಸ್ಕೃತಿಕ ಪ್ರತಿನಿಧಿ ದರ್ಶನ ಗೌಡ, ಕ್ರೀಡಾ ಪ್ರತಿನಿಧಿ ಭೂಮಿಕಾ ಭಟ್ಟ ಕರಸುಳ್ಳಿ ಇತರರು ಇದ್ದರು.
ವಿದ್ಯಾರ್ಥಿನೀಯರು ಪ್ರಾರ್ಥಿಸಿದರು. ಉಪನ್ಯಾಸಕ ಹರೀಶ ನಾಯ್ಕ ಪರಿಚಯಿಸಿದರು. ಉಪನ್ಯಾಸಕ ಪಿ.ವೈ. ಗಡಾದ ಸ್ವಾಗತಿಸಿದರು. ಉಪನ್ಯಾಸಕ ಶಂಭು ಭಟ್ಟ ಸನ್ಮಾನ ಪತ್ರ ವಾಚಿಸಿದರು. ಕು. ಸ್ಮಿತಾ ಹೆಗಡೆ ನಿರ್ವಹಿಸಿದರು. ಇದೇ ವೇಳೆ ಕಳೆದ ಪಿಯುಸಿಯಲ್ಲಿ ಜಿಲ್ಲೆಗೆ ಮೂರನೇ ಸ್ಥಾನ ಪಡೆದ ಅರ್ಪಿತಾ ಹೆಗಡೆ ಅವಳನ್ನು ಅಭಿನಂದಿಸಲಾಯಿತು.