• Slide
    Slide
    Slide
    previous arrow
    next arrow
  • ಜನಶಕ್ತಿ ವೇದಿಕೆಯಿಂದ ವಿಶಿಷ್ಟವಾಗಿ ನಾಗರ ಪಂಚಮಿ ಆಚರಣೆ

    300x250 AD

    ಕಾರವಾರ: ನಾಗರಪಂಚಮಿ ಹಬ್ಬದ ನಿಮಿತ್ತ ಕಲ್ಲು ನಾಗರಕ್ಕೆ ಹಾಲೆರದು ವ್ಯರ್ಥ ಮಾಡದೆ, ಇಲ್ಲಿನ ಜನಶಕ್ತಿ ವೇದಿಕೆಯಿಂದ ವಿಶೇಷ ಚೇತನ ಮಕ್ಕಳಿಗೆ ಹಾಲು- ಬಿಸ್ಕತ್ ವಿತರಿಸುವ ಮೂಲಕ ನಾಗರ ಪಂಚಮಿಯನ್ನ ವಿಶೇಷವಾಗಿ ಆಚರಿಸಿತು.
    ನಾಡಿನಾದ್ಯಂತ ನಾಗರಪಂಚಮಿ ಹಬ್ಬದ ನಿಮಿತ್ತ ಜನರು ದೇವಸ್ಥಾನಗಳಿಗೆ ತೆರಳಿ ನಾಗರ ಕಲ್ಲಿಗೆ ಹಾಲನ್ನ ಎರೆಯುವ ಮೂಲಕ ಹಬ್ಬವನ್ನ ಆಚರಣೆ ಮಾಡಿದರು. ಆದರೆ ಜನಶಕ್ತಿ ವೇದಿಕೆ ಹಬ್ಬದ ಪ್ರಯುಕ್ತ ನಗರದ ಆಶಾನಿಕೇತನ ಕಿವುಡ ಮತ್ತು ಮೂಗ ಮಕ್ಕಳ ಶಾಲೆಗೆ ತೆರಳಿ, ಮಕ್ಕಳಿಗೆ ಹಾಲು, ಬಿಸ್ಕತ್ ಹಾಗೂ ಶೇಂಗಾ ಚಿಕ್ಕಿ ವಿತರಿಸುವ ಮೂಲಕ ನಾಗರಪಂಚಮಿ ಹಬ್ಬವನ್ನ ವಿಶಿಷ್ಟವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಿದರು.
    ಹಬ್ಬದ ಹೆಸರಿನಲ್ಲಿ ಜನರು ಹುತ್ತಗಳಿಗೆ, ನಾಗರಕಲ್ಲಿಗೆ ಹಾಲನ್ನ ಅರ್ಪಿಸಿ ವ್ಯರ್ಥವಾಗಿ ಪೋಲು ಮಾಡುತ್ತಿದ್ದಾರೆ. ಬದಲಿಗೆ ಊಟಕ್ಕೆ ಅನುಕೂಲ ಇಲ್ಲದ ನಿರ್ಗತಿಕರಿಗೆ ಅದನ್ನ ನೀಡಿದಲ್ಲಿ ಒಂದು ಜೀವವನ್ನ ಉಳಿಸಿದ ಪುಣ್ಯ ಸಿಗುವುದರ ಜೊತೆಗೆ ಅದರ ಸದ್ಬಳಕೆ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಜನಶಕ್ತಿ ವೇದಿಕೆ ವತಿಯಿಂದ ಹಬ್ಬದ ದಿನವನ್ನ ವಿಶಿಷ್ಟವಾಗಿ ಆಚರಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಮಾಧವ ನಾಯಕ ತಿಳಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top