• Slide
    Slide
    Slide
    previous arrow
    next arrow
  • ದಿ.ಮೋಹನ ಶೆಟ್ಟಿ ಮೆಮೋರಿಯಲ್ ಈಜು ಸ್ಪರ್ಧೆ ಯಶಸ್ವಿ

    300x250 AD

    ಕುಮಟಾ: ಚಿತ್ರಿಗಿ ವಿಷ್ಣುತೀರ್ಥದ ಈಜುಕೊಳದಲ್ಲಿ ರೋಟರಿಯ ಸಹಯೋಗದಲ್ಲಿ ಮಾಜಿ ಶಾಸಕ ದಿ.ಮೋಹನ ಶೆಟ್ಟಿ ಮೆಮೋರಿಯಲ್ ತಾಲೂಕಾ ಮಟ್ಟದ ಈಜು ಸ್ಪರ್ಧೆಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ಪದಕ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನಗಳಿಂದ ವಿಜೇತರನ್ನು ಗೌರವಿಸಲಾಯಿತು.
    ಸಮಾರೋಪ ಸಮಾರಂಭದಲ್ಲಿ ಪ್ರಾಯೋಜಕರೂ, ಮೋಹನ ಕೆ.ಶೆಟ್ಟಿ ಮೆಮೋರಿಯಲ್ ಟ್ರಸ್ಟಿನ ಉಪಾಧ್ಯಕ್ಷರೂ ಆದ ರವಿಕುಮಾರ ಮೋಹನ ಶೆಟ್ಟಿ, ಕುಮಟಾ ರೋಟರಿ ಸಂಸ್ಥೆ ಈಜು ಸ್ಪರ್ಧೆ ಏರ್ಪಡಿಸುವ ಮೂಲಕ ತನ್ನ ತಂದೆಯ ನೆನಪನ್ನು ಶಾಶ್ವತವಾಗಿಡುವಲ್ಲಿ ನೆರವಾಗುತ್ತಿರುವುದಕ್ಕೆ ಶ್ಲಾಘಿಸಿದರು. ಹಿರಿಯ ರೋಟೇರಿಯನ್ ಡಾ.ದೀಪಕ ಡಿ.ನಾಯಕ ದಿ.ಮೋಹನ ಶೆಟ್ಟಿಯವರ ದೂರದೃಷ್ಠಿತ್ವದಿಂದ ಈ ಭಾಗದಲ್ಲಿ ಈಜುಪಟುಗಳು ಉದಯಿಸಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದಿರುವುದನ್ನು ಉದಾಹರಿಸಿದರು. ರೋಟರಿ ಕ್ಲಬ್ಬಿನ ಅಧ್ಯಕ್ಷ ಚೇತನ ಶೇಟ್ ಕುಮಟಾಕ್ಕೆ ಅಗತ್ಯವಾದ ಸುಸಜ್ಜಿತ ಈಜುಕೊಳದ ಅಗತ್ಯವನ್ನು ಪ್ರಸ್ತಾಪಿಸುತ್ತಾ, ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸಲು ರೋಟರಿ ಕ್ಲಬ್ ಉತ್ಸುಕವಾಗಿದೆ ಎಂದು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಅಭಿಪ್ರಾಯ ತಿಳಿಸಿದರು. ಹಿರೇಗುತ್ತಿ ವಲಯ ಅರಣ್ಯಾಧಿಕಾರಿ ಪ್ರವೀಣ ನಾಯಕ, ಸ್ಪರ್ಧೆಯ ತೀರ್ಪುಗಾರ ಜಿ.ಸಿ.ಪಟಗಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಕಾರ್ಯಕ್ರಮ ಸಂಯೋಜಕರಾದ ಗಣೇಶ್ ಕಾಮತ್ ಮತ್ತು ಕಿರಣ ನಾಯಕ, ಅನೇಕ ರೋಟೇರಿಯ ಸದಸ್ಯರು, ರೋರ‍್ಯಾಕ್ಟ್ ಕ್ಲಬ್ಬಿನ ಅಧ್ಯಕ್ಷ ವಿಕ್ರಮ ಪುರೋಹಿತ್ ಹಾಗೂ ಸದಸ್ಯರು ಸಹಕರಿಸಿದರು. ಕಾರ್ಯದರ್ಶಿ ಪವನ ಶೆಟ್ಟಿ ಹಾಗೂ ಕೋಶಾಧಿಕಾರಿ ಯೋಗೇಶ ಕೋಡ್ಕಣಿ ನಿರ್ವಹಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top