Slide
Slide
Slide
previous arrow
next arrow

ಪಶ್ಚಿಮ ಘಟ್ಟಗಳ ಸಂರಕ್ಷಣೆಯಾಗಬೇಕು: ವಸಂತ ರೆಡ್ಡಿ

300x250 AD

ಕುಮಟಾ: ವಿಶಿಷ್ಟವಾದ ಜೀವವೈವಿಧ್ಯತೆ ಮತ್ತು ಸದಾ ಹಸಿರು ಕಂಗೊಳಿಸುವ ಪರಿಸರ ಹೊಂದಿರುವ ಪಶ್ಚಿಮ ಘಟ್ಟಗಳ ಸಂರಕ್ಷಣೆಯಾಗಬೇಕೆಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಪ್ರತಿಪಾದಿಸಿದರು.
ಪಟ್ಟಣದ ಡಾ.ಎ.ವಿ.ಬಾಳಿಗಾ ಮಹಾವಿದ್ಯಾಲಯದ ಆವಾರದಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್, ರೋವರ್, ಸ್ಕೌಟ ಘಟಕ ರೆಡ್ ಕ್ರಾಸ್ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವದಲ್ಲಿ ಗಿಡ ನೆಟ್ಟು ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅರಣ್ಯಗಳ ಸ್ವರೂಪ ಬದಲಾಗುತ್ತಿದೆ. ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ಅರಣ್ಯಗಳನ್ನು ರಕ್ಷಿಸಬಹುದು. ಸಹಸ್ರಾರು ಸಂಖ್ಯೆಯಲ್ಲಿ ಅರಣ್ಯವಾಸಿಗಳು ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ. ವಾಸ್ತವ್ಯದ ಜೊತೆ ಇವರು ಅರಣ್ಯವನ್ನು ರಕ್ಷಿಸಿಕೊಂಡು ಬಂದಿದ್ದಾರೆ. ಜಿಲ್ಲೆಯ ಮಹತ್ವದ ದಟ್ಟವಾದ ಅರಣ್ಯ ಪ್ರದೇಶಗಳು ಅರಣ್ಯದ ಇತಿಹಾಸವನ್ನು ಒತ್ತಿ ಹೇಳುತ್ತಿವೆ. ಮಾತು ಬಾರದ ಸುಂದರ ಪ್ರಾಣಿ ಪಕ್ಷಿಗಳನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಫಲವತ್ತಾದ ನೈಸರ್ಗಿಕ ಸಂಪನ್ಮೂಲಗಲನ್ನು ಮುಂದಿನ ಪೀಳಿಗೆಗಾಗಿ ರಕ್ಷಿಸಬೇಕಾಗಿದೆ. ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಸಂರಕ್ಷಿಸಿ ಪರಿಸರಕ್ಕೆ ಸೌಂದರ್ಯ ನೀಡುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ ಮಾತನಾಡಿ, ಜಿಲ್ಲೆಯಲ್ಲಿ ದಟ್ಟ ಅರಣ್ಯಗಳ ಮಧ್ಯೆ ಸೇವೆ ಮಾಡುವದು ಒಂದು ವಿಶೇಷ ಅನುಭವ. ಸಮುದಾಯಗಳು, ಜನರು ಕೈ ಜೋಡಿಸಿದರೆ ಅರಣ್ಯಗಳ ರಕ್ಷಣೆ ಸಾಧ್ಯ. ವನ್ಯ ಜೀವಿಗಳ ಸಂರಕ್ಷಣೆ ನಮ್ಮ ಕರ್ತವ್ಯ. ಅರಣ್ಯ ಸಂರಕ್ಷಣೆಯಲ್ಲಿ ಸಂವಿಧಾನ ನಮಗೆ ಮಹತ್ತರವಾದ ಜವಾಬ್ದಾರಿ ನೀಡಿದೆ. ನಿಯಮ ಕಾನೂನು ಸಹ ರಚಿಸಿ ಕೊಟ್ಟಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಸೋಮಶೇಖರ ಗಾಂವಕರ ಮಾತನಾಡಿ, ಪ್ರತಿಯೊಬ್ಬರು ತಮ್ಮ ಜನ್ಮ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಒಂದೊಂದು ಗಿಡ ನೆಡಿ ಎಂದು ಕರೆ ನೀಡಿದರು.
ಕೆನರಾ ಕಾಲೇಜು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದಿನಕರ ಕಾಮತ, ಕಾರ್ಯದರ್ಶಿ ಎಚ್.ಕೆ.ಶಾನಭಾಗ ಮಾತನಾಡಿದರು. ಪಲ್ಲವಿ ಸಂಗಡಿಗರು ಪರಿಸರ ಗೀತೆ ಹಾಡಿದರು. ಉಪನ್ಯಾಸಕಿ ಸುರೇಖಾ ಜಿ.ನಾಯ್ಕ ಪರಿಚಯಿಸಿ ಸ್ವಾಗತಿಸಿದರು. ಉಪನ್ಯಾಸಕ ವಿನಾಯಕ ಭಟ್ಟ ವಂದಿಸಿದರು. ಎಸಿಎಫ್ ಜಿ.ಕೆ.ಶೇಟ್ ವೇದಿಕೆಯಲ್ಲಿದ್ದರು. ಪ್ರೊ.ಪ್ರಕಾಶ ಪಂಡಿತ ಸಹಕರಿಸಿದರು. ಆರ್‌ಎಫ್‌ಓಗಳಾದ ಎಸ್.ಟಿ.ಪಟಗಾರ, ದೀಪಕ ನಾಯ್ಕ, ಪ್ರವೀಣ ನಾಯಕ ಇದ್ದರು. ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ವತಿಯಿಂದ ಮುಖ್ಯ ಆರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top