ಕುಮಟಾ: ದಿ.ಡಾ.ಬಿ.ಎಂ.ಪೈ ಅವರ 30ನೇ ಪುಣ್ಯತಿಥಿ ನಿಮಿತ್ತ ಪಟ್ಟಣದ ಹೆಡ್ ಬಂದರ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಭಾರತ ಸೇವಾದಳದ ಸಹಕಾರದೊಂದಿಗೆ ಪಟ್ಟಣದ ಹೆಡ್ ಬಂದರ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಗೆ ಅಗತ್ಯವಾದ ಗ್ರೀನ್ ಬೋರ್ಡ್ ಮತ್ತು ಕಲಿಕಾ ಸಾಮಗ್ರಿಗಳನ್ನು ಕೃಷ್ಣ ಬಾಬಾ ಪೈ ಅವರು ವಿತರಿಸಿದರು.
ಡಾ.ಡಿ.ಡಿ.ನಾಯಕ್ ಅವರು, ದಂತ ರಕ್ಷಣೆಯ ಮಹತ್ವವನ್ನು ತಿಳಿಸುವ ಜೊತೆಗೆ ಮಕ್ಕಳ ದಂತ ತಪಾಸಣೆ ನಡೆಸಿದರು. ಟ್ರಸ್ಟಿನ ಹಿರಿಯ ಸದಸ್ಯ ತಿವಿಕ್ರಂ ಪೈ, ದಿ.ಡಾ.ಬಿ.ಎಂ.ಪೈ ಅವರ ಆದರ್ಶ ಮತ್ತು ಟ್ರಸ್ಟ್ ನಡೆಸುತ್ತಿರುವ ಕಾರ್ಯ ಚಟುವಟಿಕೆಯನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮ್ಯಾನೇಜಿಂಗ್ ಇಂಟೆರೆಸ್ಟಿಂಗ್ ಎಂ.ಬಿ.ಪೈ ವಹಿಸಿದ್ದರು. ಈ ಸಂದರ್ಭದಲ್ಲಿ ಸೇವಾದಳದ ಪ್ರಮುಖ ಹಾಗೂ ಮುಖ್ಯೋಪಾಧ್ಯಾಪಕ ಕಿರಣ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಿಆರ್‌ಸಿ ರೇಖಾ ನಾಯ್ಕ, ಶ್ರೀಕಾಂತ್ ಭಟ್, ಭಾರತ ಸೇವಾದಳದ ತಾಲೂಕ ಅಧ್ಯಕ್ಷರಾದ ಸಂತೋಷ್ ನಾಯಕ, ರೊಟೇರಿಯನ್ ಸುರೇಶ್ ಭಟ್ ಉಪಸ್ಥಿತರಿದ್ದರು.