ಶಿರಸಿ: ಆರೋಗ್ಯವಂತ ಮಕ್ಕಳು ಈ ದೇಶದ ಆಸ್ತಿ. ಮನುಷ್ಯನಿಗೆ ಆರೋಗ್ಯ ಒಂದಿದ್ದರೆ ಯಾವ ಕ್ಷೇತ್ರದಲ್ಲೂ ಏನನ್ನೂ ಸಾಧಿಸಬಹುದು. ಮಕ್ಕಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಸದೃಢ ಆರೋಗ್ಯ ಕಾಯ್ದುಕೊಳ್ಳಬೇಕು ಎಂದು ಮಳಲಗಾಂವ ಮಾರಿಕಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ಎಪಿಎಮ್‌ಸಿ ಸದಸ್ಯ ಸುನಿಲ್ ನಾಯ್ಕ ಹೇಳಿದರು.
ಅವರು ಮಳಲಗಾಂವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರಕ ಪೌಷ್ಠಿಕ ಅಭಿಯಾನದಡಿ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾಚಿಕ್ಕಿ ವಿತರಿಸಿ ಮಾತಾನಾಡಿ, ಶಾಲೆ ಎಂಬುದು ಸರಸ್ವತಿ ದೇವಾಲಯವಿದ್ದಂತೆ. ಇಲ್ಲಿ ಅನ್ಯರ ಹಸ್ತಕ್ಷೇಪ ರಾಜಕೀಯ ಗೋಜುಗಳಿಗೆ ಆಸ್ಪದ ಆಗಬಾರದು ಎಂದರು.
ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷರು, ಪತ್ರಕರ್ತರೂ ಆದ ವಿಶ್ವ ಮಳಲಗಾಂವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಶಾಲೆಗಳು ಎಂದರೆ ಕೇವಲವಾಗಿ ನೋಡುವ ದಿನಮಾನ ಹಿಂದಿತ್ತು. ಆದರೆ ಪರೀಕ್ಷಾ ಫಲಿತಾಂಶಗಳನ್ನ ನೋಡಿದಾಗ ಲಕ್ಷಾಂತರ ಡೊನೇಶನ್ ಕೊಟ್ಟು ಕಲಿಯುವ ಶಾಲೆಗಳಿಗಿಂತ ನಮ್ಮ ಸರ್ಕಾರಿ ಶಾಲೆಗಳು ಮುಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಆರೋಗ್ಯವೇ ಭಾಗ್ಯ ಎನ್ನುವ ಗಾದೆ ನಿಜಕ್ಕೂ ಸತ್ಯ. ಆದ್ದರಿಂದ ಎಲ್ಲರೂ ಮೊದಲು ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದರು.
ಮುಖ್ಯೋಪಾಧ್ಯಾಯರಾದ ಪ್ರೇಮಾ ನಾಯ್ಕ ಸ್ವಾಗತಿಸಿದರು. ಶಿಕ್ಷಕಿ ಆಶಾ ಮಳಲಗಾಂವ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಮೀನಾಕ್ಷಿ ಗೌಡ ವಂದಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ತಾರಕೇಶ್ವರ ಸ್ವಾಮಿ, ಓಮೇಶ್ ಮಡಿವಾಳ, ಕೃಷ್ಣ ಎನ್.ಮಡಿವಾಳ, ಎಸ್‌ಡಿಎಮ್‌ಸಿ ಉಪಾಧ್ಯಕ್ಷೆ ವನಿತಾ ನಾಯ್ಕ, ಗುತ್ತಿಗೆದಾರ ಸುಭಾಷ ಎಮ್.ಮಡಿವಾಳ, ಆಶಾ ಕಾರ್ಯಕರ್ತೆ ಗೀತಾ ನಾಯ್ಕ, ಎಸ್‌ಡಿಎಮ್‌ಸಿ ಸದಸ್ಯರಾದ ಹನೀಫ್ ಮುಲ್ಲಾ, ಸಂತೋಷ ಸ್ವಾಮಿ, ಮಂಜುನಾಥ ಮಡಿವಾಳ, ಗಂಗಮ್ಮ ಮೇತ್ರಿ, ಅನುಪಮ ಚಂದ್ರಶೇಖರ, ನಾಗರತ್ನ ಇದ್ದರು.