Slide
Slide
Slide
previous arrow
next arrow

ಅವಕಾಶಗಳಿಂದ ಯಶಸ್ಸು ಬಯಸುವ ಬದಲು ಆಯ್ಕೆಯಿಂದ ಸಾಧನೆಗೈಯಬೇಕು:ಮಂಗಳಲಕ್ಷ್ಮಿ ಪಾಟೀಲ

300x250 AD

ಅಂಕೋಲಾ: ಸ್ಪರ್ಧಾತ್ಮಕ ಯುಗದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದದೆ ಅಪೇಕ್ಷಿಸಿದ ಯಶಸ್ಸನ್ನು ಸಾಧಿಸುವುದು ಕಷ್ಟಸಾಧ್ಯ. ಅವಕಾಶಗಳಿಂದ ಯಶಸ್ಸು ಬಯಸುವ ಬದಲು ಆಯ್ಕೆಯಿಂದ ಸಾಧನೆಗೈಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ ಹೇಳಿದರು.

ಪಟ್ಟಣದ ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯ ಮತ್ತು ಕಲ್ಪವೃಕ್ಷ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ 15 ದಿನಗಳ ಶಿಕ್ಷಕರ ಅರ್ಹತಾ ಪರೀಕ್ಷೆಯ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ವೃತ್ತಿ ಪವಿತ್ರವಾದದ್ದು. ಸಮಾಜದ ಎಲ್ಲಾ ವಲಯಗಳಲ್ಲಿಯೂ ಕಾರ್ಯನಿರ್ವಹಿಸುತ್ತಿರುವವರು ಶಿಕ್ಷಣ ವಲಯದಿಂದಲೇ ಕೌಶಲ್ಯ, ತರಬೇತಿ ಅನುಭವವನ್ನು ಪಡೆದುಕೊಂಡಿರುತ್ತಾರೆ ಹಾಗಾಗಿ ಎಲ್ಲಾ ವೃತ್ತಿಗಳಿಗೂ ಶಿಕ್ಷಕರು ಮೂಲ ಪ್ರೇರಕರಾಗಿದ್ದಾರೆ. ಕಾಲಕಾಲಕ್ಕೆ ಬದಲಾಗುವ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಹೊಂದಿಕೊಂಡು ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಇಂದು ಅಣಿಯಾಗಬೇಕಿದೆ. ಕೆ.ಎಲ್.ಇ. ಸಂಸ್ಥೆ ಉತ್ತಮ ಅವಕಾಶವನ್ನು ಪ್ರಶಿಕ್ಷಣಾರ್ಥಿಗಳಿಗೆ ಕಲ್ಪಿಸಿದೆ ಅದನ್ನು ಆಯ್ದುಕೊಳ್ಳುವ ಮೂಲಕ ಸದುಪಯೋಗಪಡಿಸಿಕೊಳ್ಳಲು ಮುಂದಾಗಿದ್ದು ಆಶಾದಾಯಕ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಹೆಗಡೆ ಮಾತನಾಡಿ, ಸಂಸ್ಥೆಯನ್ನು ನಂಬಿಕೊAಡು ಬಂದಿರುವ ವಿದ್ಯಾರ್ಥಿಗಳಿಗೆ ಭರವಸೆಗೆ ತಕ್ಕ ಪ್ರತಿಫಲವನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಕೆ. ಎಲ್. ಇ. ಶಿಕ್ಷಣ ಮಹಾವಿದ್ಯಾಲಯ ಹಲವು ವಿನೂತನ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಮಾದರಿಯಾಗಿದ್ದು, ಶಿಕ್ಷಕರ ಅರ್ಹತಾ ಪರೀಕ್ಷೆಯ ತರಬೇತಿ ಕಾಲೇಜು ಶಿಕ್ಷಣದೊಂದಿಗೆ ನೀಡುತ್ತಿರುವುದು ವಿಶೇಷವಾಗಿದೆ. ಗುರಿಯೆಡೆಗೆ ತಲುಪಲು ಅಗತ್ಯವಾದ ಪ್ರಯತ್ನ ಮಾಡಲೇಬೇಕು. ಕಠಿಣ ಪರಿಶ್ರಮದಿಂದ ಯಶಸ್ಸು ಸುಲಭವಾಗಿ ದೊರೆಯುತ್ತದೆ ಎಂದರು.

300x250 AD

ಕಲ್ಪವೃಕ್ಷ ಸಂಸ್ಥೆಯ ನಿರ್ದೇಶಕ ಮಾರುತಿ ಹರಿಕಂತ್ರ ಮಾತನಾಡಿ, ವಿದ್ಯಾರ್ಥಿಗಳ ಅಪೇಕ್ಷೆಗೆ ತಕ್ಕಂತೆ ತರಬೇತಿ ನೀಡುವುದು ನಮ್ಮ ಆದ್ಯತೆಯಾಗಿದೆ ಎಂದರು. ಕಲ್ಪವೃಕ್ಷ ಸಂಸ್ಥೆಯ ಮಾರ್ಗದರ್ಶಕ ಸುಧಾಕರ ಕಟ್ಟೆಮನೆ, ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಪುಷ್ಪಾ ನಾಯ್ಕ ವೇದಿಕೆಯಲ್ಲಿದ್ದರು.

ನೀಹಾ ಸಂಗಡಿಗರು ಪ್ರಾರ್ಥಿಸಿದರು. ಗ್ಲೋರಿಯಾ ಸ್ವಾಗತಿಸಿದರು. ಶೃತಿ ಭಂಡಾರಿ ನಿರೂಪಿಸಿದರು. ಶ್ರದ್ಧಾ ನಾಯಕ ವಂದಿಸಿದರು. ಉಪನ್ಯಾಸಕರಾದ ಮಂಜುನಾಥ ಇಟಗಿ, ರಾಘವೇಂದ್ರ ಅಂಕೋಲೆಕರ, ಪ್ರವೀಣಾ ನಾಯಕ, ಪೂರ್ವಿ ಹಳ್ಗೇಕರ ಇದ್ದರು.

Share This
300x250 AD
300x250 AD
300x250 AD
Back to top