• Slide
  Slide
  Slide
  previous arrow
  next arrow
 • ಪದವಿ ಜೊತೆ ಕೌಶಲ್ಯ ಶಿಕ್ಷಣದ ಅಗತ್ಯತೆ,ಇದಕ್ಕೆ ಪೂರಕವಾಗಿ ಸ್ಕಿಲ್ ಲ್ಯಾಬ್ ಉತ್ತಮ ಹೆಜ್ಜೆ: ಡಾ.ಈಶ್ವರ ಹೆಗಡೆ

  300x250 AD

  ಶಿರಸಿ: ಇಂದು ಕೈಗಾರಿಕೆಗಳಲ್ಲಿ, ವಾಣಿಜ್ಯ ಕ್ಷೇತ್ರದಲ್ಲಿ ಅನೇಕ ಉದ್ಯೋಗ ಅವಕಾಶಗಳಿದ್ದು, ಕೌಶಲ್ಯ ಹೊಂದಿದವರಿಗೆ ವಿಪುಲ ಅವಕಾಶಗಳಿವೆ. ಪದವಿಯ ಜೊತೆಗೆ ಕೌಶಲ್ಯ ಶಿಕ್ಷಣ ಇಂದಿನ ಅಗತ್ಯತೆ ಆಗಿದ್ದು ಈ ದಿಶೆಯಲ್ಲಿ ಎಂಇಎಸ್ ನ ಸ್ಕಿಲ್ ಲ್ಯಾಬ್ ಉತ್ತಮ ಹೆಜ್ಜೆ ಆಗಿದೆ ಎಂದು ಐಟಾಹಬ್ ಮುಖ್ಯಸ್ಥ ಡಾ.ಈಶ್ವರ ಹೆಗಡೆ ಬೆಂಗಳೂರು ಹೇಳಿದರು. 

   ಅವರು ಎಂಇಎಸ್ ನ ಎಮ್.ಕಾಮ್ ವಿಭಾಗದಲ್ಲಿ ಎಂಇಎಸ್ ಸ್ಕಿಲ್ ಲ್ಯಾಬ್ ಮತ್ತು ಐಟಾಹಬ್ ಬೆಂಗಳೂರು ಇವರುಗಳ ಸಹಯೋಗದಲ್ಲಿ ಆಯೋಜಿಸಿದ್ದ ಕರಿಯರ್ ಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

  ಇಂದಿನ ಮಾರುಕಟ್ಟೆ ವ್ಯವಸ್ಥಗಿಂತ ಶಿಕ್ಷಣ ಪದ್ದತಿ 10 ವರ್ಷ ಹಿಂದೆ ಇದೆ.  ರಾಷ್ಟ್ರೀಯ ಶಿಕ್ಷಣ ನೀತಿ ಉತ್ತಮ ವ್ಯವಸ್ಥೆ ಆಗಿದೆ. ಎಂಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಬುದ್ದಿವಂತ ವಿದ್ಯಾರ್ಥಿಗಳಿದ್ದು ಅವರಿಗೆ ಐಟಾ ಹಬ್ ನಿಂದ ಉದ್ಯೋಗಾವಕಾಶಕ್ಕಾಗಿ ಇನ್ನಷ್ಟು ತರಬೇತಿ ನೀಡಲಾಗುತ್ತದೆ. 10 ಕೋಟಿಗೂ ಹೆಚ್ಚು ಜನ ನಿರುದ್ಯೋಗಿಗಳು ನಮ್ಮ ದೇಶದಲ್ಲಿ ಇದ್ದಾರೆ. ಅವರು  ಇಂದಿನ ಮಾನಕ್ಕೆ ತಕ್ಕದಾಗಿ ಕೌಶಲ್ಯ ತರಬೇತಿ ಹೊಂದಿಲ್ಲ.ವ್ಯವಸ್ಥೆ ಬದಲಾದ ಹಾಗೆ ನಮ್ಮ ಕೌಶಲ್ಯ ವನ್ನು ವೃದ್ದಿಸಿಕೊಳ್ಳಬೇಕು.ಮಾಹಿತಿ ತಂತ್ರಜ್ಞಾನ ತೀವ್ರವಾಗಿ ಬೆಳೆಯುತ್ತಿದ್ದು  ಕೌಶಲ್ಯಯುತ ಅಭ್ಯರ್ಥಿಗಳಿಗೆ ಭಾರೀ ಬೇಡಿಕೆ ಬರಲಿದೆ ಎಂದರು.

     ಐಟಾ ಹಬ್ ನ ಡಾ.ರಾಘವೇಂದ್ರ ಹೆಗಡೆ ಮಾತನಾಡಿ ಬದಲಾವಣೆ ನಿರಂತರ ಪ್ರಕ್ರಿಯೆ ಆಗಿದ್ದು ವಿದ್ಯಾರ್ಥಿಗಳು ವ್ಯವಸ್ಥೆಗೆ ತಕ್ಕಂತೆ ತಮ್ಮನ್ನು ಬದಲಾಯಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಐಟಾಹಬ್ ಕಾರ್ಯ ನಿರ್ವಹಿಸುತ್ತದೆ. ವಿದ್ಯಾರ್ಥಿಗಳನ್ನು ಕೈಗಾರಿಕೆಗಳಿಗೆ ಭೇಟಿ ಮಾಡಿಸಿ ಉದ್ಯೋಗಕ್ಕೆ ಅವರನ್ನು ತರಬೇತಿ ಗೊಳಿಸುವ ಕಾರ್ಯ ಸ್ಕಿಲ್ ಲ್ಯಾಬ್ ಮೂಲಕ ಮಾಡುತ್ತಿದ್ದೇವೆ ಎಂದರು.

  300x250 AD

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಉಪಸಮಿತಿ ಅಧ್ಯಕ್ಷ ವರೀಂದ್ರ ಕಾಮತ್ ಮಾತನಾಡಿ ನಮ್ಮಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಥೆ ಬದ್ಧವಗಿದೆ. ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವ ಕಾರ್ಯ ಆಗಬೇಕು. ಇಂದು ಉದ್ಯೋಗ ಅರಸಿ ನಗರಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿದ್ದು ಹಳ್ಳಿ ಬರಿದಾಗುತ್ತಿದೆ. ಹಳ್ಳಿಗಳಲ್ಲೆ ಸ್ವ ಉದ್ಯೋಗ ಮಾಡುವ ಹಾಗೆ ಯೋಜನೆ ರೂಪಿಸಬೇಕು ಎಂದರು.

  ಕಾರ್ಯಕ್ರಮದಲ್ಲಿ ಕಾಲೇಜು ಉಪಸಮಿತಿ ಸದಸ್ಯ ಫ್ರಾನ್ಸಿಸ್ ರೊಡ್ರಿಗಸ್,ಎಂ ಎಂ ಕಾಲೇಜಿನ ಪ್ರಾಚಾರ್ಯ ಡಾ ಟಿ ಎಸ್ ಹಳೆಮನೆ, ಪ್ರೊ ಎಸ್ ಎಸ್ ಬಡಗಾವಕರ್, ಚೈತನ್ಯ ಕಾಲೇಜು ಪ್ರಾಚಾರ್ಯ ರಾಘವೇಂದ್ರ  ಹೆಗಡೆಕಟ್ಟೆ, ಪ್ರೊ ಹರ್ಷಾ ಪ್ರಭು ಉಪಸ್ಥಿತರಿದ್ದರು.

  ಎಂ ಇ ಎಸ್ ವಾಣಿಜ್ಯ ಕಾಲೇಜು ಪ್ರಾಚಾರ್ಯ ಎಸ್ ಕೆ ಹೆಗಡೆ ಸ್ವಾಗತಿಸಿದರು. ಕು ಶ್ರೀ ಲಕ್ಷ್ಮೀ ವಂದಿಸಿದರು. ಕು ಮಮ್ಮಾಯಿ ಪ್ರಭು ನಿರೂಪಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top