Slide
Slide
Slide
previous arrow
next arrow

ಕಾರವಾರದಲ್ಲಿ ಗೋಚರಿಸಿದ ‘ಸನ್ ಹ್ಯಾಲೋ’

300x250 AD

ಕಾರವಾರ: ನಗರದ ಜನತೆ ಗುರುವಾರ ಬಾಹ್ಯಾಕಾಶದಲ್ಲಿ ನಡೆದ ವಿಸ್ಮಯವೊಂದನ್ನು ಕಂಡು ಕೌತುಕಗೊಂಡರು. ಮಧ್ಯಾಹ್ನದ ವೇಳೆ ಆಗಸದಲ್ಲಿ ಸೂರ್ಯನ ಸುತ್ತ ಉಂಗುರದಾಕೃತಿಯೊಂದು ಕಾಣಿಸಿಕೊಂಡು ಅಚ್ಚರಿ ಮೂಡಿಸಿತು.

ಗುರುವಾರ ಸುಮಾರು ಮಧ್ಯಾಹ್ನ 1ರಿಂದ ಆಗಸದಲ್ಲಿ ಕಾಣಿಸಲ್ಪಟ್ಟ ಈ ಕೌತುಕ, ಮಧ್ಯಾಹ್ನ 2.30 ಗಂಟೆಯವರೆಗೂ ಜನರ ವೀಕ್ಷಣೆಗೆ ಸಿಕ್ಕಿತು. ಅಷ್ಟಕ್ಕೂ ಈ ಕೌತುಕ ವಿದ್ಯಮಾನವನ್ನ ಸನ್ ಹ್ಯಾಲೋ ಎಂದು ಕರೆಯಲಾಗುತ್ತದೆ. ಇಲ್ಲಿನ ವಿಜ್ಞಾನ ಕೇಂದ್ರದ ಶಿಕ್ಷಣ ಸಹಾಯಕಿ ಕವಿತಾ ಮೇಸ್ತ ಹೇಳುವಂತೆ, ಭೂಮಿಯಿಂದ 20 ಸಾವಿರ ಅಡಿ ಎತ್ತರದಲ್ಲಿರುವ ಸೀರಸ್ ಮೋಡಗಳಲ್ಲಿರುವ ಐಸ್ ಕ್ರಿಸ್ಟಲ್‌ಗಳ ಮೇಲೆ ಸೂರ್ಯನ ಕಿರಣಗಳು ಬಿದ್ದು ಅವು ವಕ್ರೀಭವನಗೊಳ್ಳುವುದರಿಂದ ಈ ರೀತಿ ಸೂರ್ಯನ ಸುತ್ತ ಉಂಗುರವನ್ನಿಟ್ಟಂತೆ ಕಂಡುಬರುತ್ತದೆ.

300x250 AD

22 ಡಿಗ್ರಿ ಹ್ಯಾಲೋ ಎಂದೂ ಕೂಡ ಕರೆಯಲಾಗುವ ಈ ವಿದ್ಯಮಾನ ಹೆಚ್ಚಾಗಿ ಮಳೆಗಾಲದಲ್ಲಿ ಮೋಡ ಕವಿದ ವಾತಾವರಣವಿದ್ದಾಗ ಕಂಡುಬರುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಇದು ವಿಭಿನ್ನ ಸಮಯದಲ್ಲಿ ವಿಭಿನ್ನ ಸ್ಥಳಗಳಲ್ಲಿ ಗೋಚರಿಸಿಕೊಳ್ಳಲಿದ್ದು, ಕಾರವಾರ ವ್ಯಾಪ್ತಿಯಲ್ಲಿ ಕಾಣ ಸಿಕ್ಕಿದೆ. ಜನ ಆಗಸದಲ್ಲಿನ ಈ ಕೌತುಕವನ್ನ ಕಣ್ತುಂಬಿಕೊಳ್ಳುವುದರ ಜೊತೆಗೆ, ಮೊಬೈಲ್‌ಗಳಲ್ಲಿ ಫೊಟೊ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂತಸಪಟ್ಟರು.

Share This
300x250 AD
300x250 AD
300x250 AD
Back to top