Slide
Slide
Slide
previous arrow
next arrow

ಪರಿಹಾರ ನೀಡುವಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ: ಅನಂತ ಹೆಗಡೆ

300x250 AD

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಮ ಪಂಚಾಯತದ ಭಂಡಾರಕೇರಿ ಗ್ರಾಮದ ಕುಟುಂಬದವರಿಗೆ ಪರಿಹಾರ ನೀಡುವಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಅವರಿಗೆ ಮನೆಯನ್ನು ಮಂಜೂರಿ ಮಾಡಲಾಗಿದೆ ಎಂದು ಸ್ಥಳೀಯ ಗ್ರಾಮ ಪಂಚಾಯತ ಸದಸ್ಯ ಅನಂತ ಹೆಗಡೆ ಹೊಸಗದ್ದೆ ಹೇಳಿದರು.

ಈ ಕುರಿತು ಕಂಚಿಮನೆಯಲ್ಲಿ ಮಾಹಿತಿ ನೀಡಿದ ಅವರು, ಹಾರ್ಸಿಕಟ್ಟಾ ಭಂಡಾರಕೇರಿ ಗ್ರಾಮದ ನಾಗರಾಜ ಮಡಿವಾಳ ಕಂಚಿಮನೆ ಇವರ ಮಗಳು ಕಳೆದ ವರ್ಷ ಜು.24ರಲ್ಲಿ ಮನೆಯ ಗೋಡೆಗೆ ಚಾಚಿದ ಬಾಗಿಲ ಚೌಕಟ್ಟು ಬಿದ್ದು ಮೃತಪಟ್ಟಿದ್ದಳು. ನಾವು ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ಮಾನವೀಯತೆಯ ನೆಲೆಯಲ್ಲಿ ಮೃತಳ ಪರಿಹಾರಕ್ಕೆ ಸಂಬಂಧಪಟ್ಟ ಕಾಗದ ಪತ್ರ, ಪಂಚನಾಮೆ, ಪೋಸ್ಟ್ಮಾಟಂ ಮಾಡಿಸಲು ಮುಂದಾದಾಗ ಕುಟುಂಬದವರು ಆ ಹಣ ಬೇಡ ಅಂತಲೂ ಹೇಳಿದ್ದಿದೆ.ಇದರಿಂದ ಪರಿಹಾರ ಸಿಕ್ಕಿಲ್ಲ. ಆದರೆ ಈ ಮಾಹಿತಿ ಇಲ್ಲದೆ ಕೆಲವರು ಆರೋಪ ಮಾಡುತ್ತಿದ್ದಾರೆ ಎಂದರು.

ಇವರ ಮನೆ ಭಾಗಶಃ ಹಾನಿಯಾಗಿರುವುದರಿಂದ ಪಂಚನಾಮೆ ಮಾಡಿಸಿ ರೂ.50 ಸಾವಿರ ಪ್ರಕೃತಿ ವಿಕೋಪದಿಂದ ಪರಿಹಾರದ ಹಣ ಕೊಡಿಸಿದ್ದೇವೆ. ಗ್ರಾಮ ಪಂಚಾಯತದಿಂದ ಬಸವ ವಸತಿ ಯೋಜನೆಯಡಿಯಲ್ಲಿ ಮನೆಯನ್ನು ಫಲಾನುಭವಿಯಾದ ನಾಗವೇಣಿ ಗೋಪಾಲ ಮಡಿವಾಳ ಕಂಚಿಮನೆ ಇವರಿಗೆ ಈ ವರ್ಷ ಫೆ.14ರಂದು ಮಂಜೂರಿ ಮಾಡಲಾಗಿದೆ. ಸಭಾಧ್ಯಕ್ಷರು ಈ ಪ್ರಕರಣದಲ್ಲಿ ಯಾವುದೆ ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

300x250 AD

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ರಾಘವೇಂದ್ರ ಹೆಗಡೆ, ಮೈದೀನ ಸಾಬ್ ಮೊದಲಾದವರು ಇದ್ದರು.

Share This
300x250 AD
300x250 AD
300x250 AD
Back to top