ಸಿದ್ದಾಪುರ; ಅನೇಕ ಸಾಧಕರ ಅನುಭವ, ಜೀವನ ದರ್ಶನಗಳನ್ನು ಅರಿಯುವ ಮೂಲಕ ಸಮಾಜಮುಖಿಯಾಗಿ ಸಮಾಜಕ್ಕೆ ಸ್ವತ್ತಾಗಬಹುದು. ಗ್ರಾಮೀಣ ವಿದ್ಯಾರ್ಥಿಗಳು ಕೀಳರಿಮೆಯಿಂದ ಮುಕ್ತರಾಗುವ ಮೂಲಕ ಅದ್ಭುತಗಳನ್ನು ಸಾಧಿಸುವ ಅವಕಾಶವಿದೆ ಎಂದು ಪತ್ರಕರ್ತ ಕನ್ನೇಶ್ ನಾಯ್ಕ ಕೋಲಶಿರ್ಸಿ ಹೇಳಿದರು.
ಅವರು ಪಟ್ಟಣದ ಹಾಳದಕಟ್ಟಾ ಪ್ರೌಢಶಾಲೆಯ ಶಾಲಾ ಸಂಸತ್ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಾಳದಕಟ್ಟಾ ಸರ್ಕಾರಿ ಪ್ರೌಢಶಾಲೆಯ ಉಪಾಧ್ಯಕ್ಷ ಮತ್ತು ಪ.ಪಂ. ಉಪಾಧ್ಯಕ್ಷ ರವಿ ನಾಯ್ಕ ಮಾತನಾಡಿ ಆಧುನಿಕ ಅನುಕೂಲಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಶ್ರಮಪಟ್ಟರೆ ಉತ್ತಮ ಭವಿಷ್ಯ ಸಿಗಲು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಧ್ಯಾಪಕ ಜಿ.ಆಯ್.ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ಸಾಧಕರಾಗಲು ಶ್ರಮ,ಶೃದ್ಧೆ ಅವಶ್ಯ ಸ್ಪಷ್ಟಗುರಿಯೊಂದಿಗೆ ಪ್ರಯತ್ನಿಸಿದರೆ ಸಾಧನೆ ಸಾಧ್ಯ ಎಂದರು.
ವಿದ್ಯಾರ್ಥಿ ಪ್ರತಿನಿಧಿಗಳು ಪ್ರಮಾಣ ವಚನ ಮಾಡಿದರು. ಜಯಲಕ್ಷ್ಮೀ ಹೆಗಡೆ ವರದಿ ವಾಚಿಸಿದರು. ಶಿಕ್ಷಕಿ ಲಲಿತಾ ನಾಯ್ಕ ನಿರೂಪಿಸಿದರು. ಶಿಕ್ಷಕ ಎನ್.ಜಿ.ಹೆಗಡೆ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಸುಷ್ಮಾ ಹೆಗಡೆ ವಂದಿಸಿದರು.