ಕಾರವಾರ: ತಾಲೂಕಿನ ಕಿನ್ನರದ ಜನ್ಮದೇವ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇತ್ತೀಚಿಗೆ ಎಸ್.ಎಸ್. ಎಲ್.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿ ರಾಜ್ಯದಲ್ಲಿ ಸ್ಥಾನ ಪಡೆದ ಕಿನ್ನರದ ನ್ಯೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಶಾಲೆಯ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಆಯೋಜಿಸಿದ ಟ್ರಸ್ಟ್‌ನ ಅಧ್ಯಕ್ಷರು, ಅದೇ ಶಾಲೆಯ ನಿವೃತ್ತ ಮುಖ್ಯಾಧ್ಯಾಪಕರು ಹಾಗೂ ಹಾಲಿ ನ್ಯಾಯವಾದಿಯಾಗಿರುವ ಎಸ್. ಆರ್. ನಾಯ್ಕ ಇವರು ರಾಜ್ಯಕ್ಕೆ 7 ನೇ ಬ್ಯಾಂಕ್ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿ ವೈಶಾಲಿ ಮಂಜುನಾಥ ಚಿಂಚೇಕರ (99.04%) ಮತ್ತು ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾದ ಸ್ನೇಹಾ ಸುಧಾಕರ ಗುನಗಿ (96. 64%), ಹರ್ಷಾ ಕೃಷ್ಣಾನಂದ ಶೆಟ್ಟಿ(92. 96%), ದಿಶಾ ಗಣಪತಿ ನಾಗೇಕರ(91, 52%) ಪುಷ್ಪಾಂಜಲಿ ರವಿಕಾಂತ ಕೋಠಾರಕರ(91.04%), ಪ್ರವಲ ಪ್ರಕಾಶ ಕೋಠಾರಕರ(90.88%) ಹಾಗೂ ಶಿವಾನಂದ ಹನುಮಂತಪ್ಪ ಲಮಾಣಿ(90. 00%) ಈ ಎಲ್ಲಾ ಸಾಧಕರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆಯ ಜೊತೆಗೆ ಪ್ರಶಂಸಾ ಪತ್ರವನು ನೀಡಿ ಗೌರವಿಸಿದರು. ನಿವೃತ್ತ ಶಿಕ್ಷಕ ಜಿ.ಡಿ. ಕೋಠಾರಕರ ಅತಿಥಿಯಾಗಿ ಆಗಮಿಸಿದ್ದರು.ಶಾಲೆಯ ಮುಖ್ಯಾಧ್ಯಾಪಕ ಸಂದೀಪ ವಿ, ರಾಣೆ ಅಧ್ಯಕ್ಷತೆ ವಹಿಸಿ ಜನ್ಮದೇವ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಸದಸ್ಯರು ಇಲ್ಲಿಗೆ ಬಂದು ವಿಧ್ಯಾರ್ಥಿಗಳನ್ನು ಗೌರವಿಸಿದ್ದು ಶ್ಲಾಘನೀಯ ಎಂದರು. ವೇದಿಕೆಯ ಮೇಲೆ ಟ್ರಸ್ಟ್‌ನ ಕಾರ್ಯದರ್ಶಿಮನೋಹರ ನಾಯ್ಕ ಹಾಗೂ ಸದಸ್ಯರಾದ ಗಿರೀಶ ಎಸ್. ನಾಯ್ಕ ಉಪಸ್ಥಿತರಿದ್ದರು. ಎಸ್.ಟಿ. ಲಮಾಣಿ ನಿರೂಪಿಸಿದರು. ವರ್ಷಾದೇವಿ ಇಡೂರಕರ ಪರಿಚಯಿಸಿದರು,ಎಚ್.ಕೆ. ಪ್ರವೀಣ ವಂದಿಸಿದರು. ಪರಾಗ ಕೊಚೇಕರ ಸಹಕರಿಸಿದರು.