ಕಾರವಾರ: ಕೇಂದ್ರ ಇಂಧನ ಇಲಾಖೆ ಹಾಗೂ ವಿದ್ಯುತ್ ಸಚಿವಾಲಯ, ಎನ್ ಟಿಪಿಸಿ ಮತ್ತು ರಾಜ್ಯ ಇಂಧನ ಇಲಾಖೆ, ಕೆಪಿಟಿಸಿಎಲ್, ಹೆಸ್ಕಾಂ ಕಾರವಾರ ವಿಭಾಗದ ಸಹಯೋಗದೊಂದಿಗೆ ಜು.29ರ ಶುಕ್ರವಾರ ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ಬೆಳಿಗ್ಗೆ 10.30ಕ್ಕೆ ವಿದ್ಯುತ್ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಉಜ್ವಲ ಭಾರತ- ಉಜ್ವಲ ಭವಿಷ್ಯ, ಇಂಧನ @2047 ಘೋಷಣೆಯಡಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಉದ್ಘಾಟಿಸಲಿದ್ದು, ಶಾಸಕಿ ರೂಪಾಲಿ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಅನೇಕ ಗಣ್ಯರು ಈ ವೇಳೆ ಉಪಸ್ಥಿತರಿರಲಿದ್ದಾರೆ.
ಈ ಸಂದರ್ಭದಲ್ಲಿ ಮನೆಗಳ ವಿದ್ಯುದ್ದೀಕರಣದ, ಒಂದೇ ರಾಷ್ಟ್ರ ಒಂದೇ ವಿದ್ಯುತ್ ಜಾಲ, ಗ್ರಾಹಕರ ಹಕ್ಕುಗಳ, ನವೀಕರಿಸಬಹುದಾದ ಇಂಧನಗಳ ಕುರಿತು, ಇಂಧನ ಸಾಮರ್ಥ್ಯ ವೃದ್ಧಿಸುವ ಕಿರುಚಿತ್ರ ಪ್ರದರ್ಶನ, ನುಕ್ಕಡ್ ನಾಟಕ ಪ್ರದರ್ಶನ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.