• Slide
    Slide
    Slide
    previous arrow
    next arrow
  • ಮಾರಿ ಜಾತ್ರೆ; ಗದ್ದುಗೆಯಲ್ಲಿ ವಿರಾಜಿಸುತ್ತ ಹರಕೆ ಸ್ವೀಕರಿಸುತ್ತಿರುವ ಮಾರಿಯಮ್ಮ

    300x250 AD

    ಭಟ್ಕಳ: ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಪಟ್ಟಣದಾದ್ಯಂತ ಹಬ್ಬದ ಸಂಭ್ರಮ- ಸಡಗರ ಕಳೆಗಟ್ಟಿದೆ. ಸಾಂಕ್ರಾಮಿಕ ರೋಗ- ರುಜಿನಗಳನ್ನ ನಿವಾರಿಸುವ ಪ್ರತೀತಿ ಹೊಂದಿರುವ ಮಾರಿಯಮ್ಮ ಜಾತ್ರಾ ಗದ್ದುಗೆಯಲ್ಲಿ ವಿರಾಜಮಾನಳಾಗಿ ಭಕ್ತರ ಪೂಜೆ- ಹರಕೆಗಳನ್ನ ಸ್ವೀಕರಿಸುತ್ತಿದ್ದಾಳೆ.

    ಜುಲೈ 19ರಂದು ಮಾರಿ ದೇವಿಯ ಮೂರ್ತಿ ಕೆತ್ತನೆಗೆ ಮರ ಗುರುತಿಸುವ ಕಾರ್ಯದಿಂದ ಮಾರಿ ಜಾತ್ರಾ ಮಹೋತ್ಸವದ ವಿಧಿ- ವಿಧಾನಗಳು ಆರಂಭಗೊಂಡಿದ್ದವು. ರಘುನಾಥ ನಾಯಕ ಸ್ಟ್ರೀಟ್‌ನಲ್ಲಿರುವ ಪಡಿಯಾರ ಮನೆಯ ಎದುರು ಭಾಗದ ಓಣಿಯಲ್ಲಿರುವ ಹುಳಿ ಆಮಟೆ ಮರವನ್ನು ಆಯ್ಕೆ ಮಾಡಿ, ಮರಕ್ಕೆ ದೇವಸ್ಥಾನದ ಆಡಳಿತ ಕಮಿಟಿ ಮುಖ್ಯಸ್ಥರನ್ನೊಳಗೊಂಡಂತೆ ಸ್ಥಳೀಯರು, ಹರಕೆಯಲ್ಲಿ ಮರ ನೀಡಿದ ಕುಟುಂಬದವರು ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಊರಿನ ಮುತ್ತೈದೆಯರು ಮೂರ್ತಿಗೆ ಉಡಿ ತುಂಬಿ ಸಂಪ್ರದಾಯಬದ್ಧವಾಗಿ ಮಾರಿ ಮೂರ್ತಿ ತಯಾರಿಗೆ ಚಾಲನೆ ನೀಡಿದ್ದರು.

    ಮಾರಿ ದೇವಿಯ ಮೂರ್ತಿಯನ್ನು ತಲತಲಾಂತರದಿಂದ ಇಲ್ಲಿನ ವಿಶ್ವಕರ್ಮ ಸಮಾಜದ ಕುಟುಂಬದವರು ತಯಾರಿಸುತ್ತಾ ಬರುತ್ತಿದ್ದು, ವಿಶ್ವಕರ್ಮ ಸಮಾಜದ ಮೂರನೇ ತಲೆಮಾರಿನ ಮಣ್ಕುಳಿಯ ಮಾರುತಿ ಆಚಾರಿ ಅವರ ಮನೆಯಲ್ಲಿ ಸಂಪ್ರಯದಾಯದoತೆ ಮೂರ್ತಿ ಕೆತ್ತನೆ ಕಾರ್ಯ ಆರಂಭಗೊoಡು, ಮಂಗಳವಾರದoದು ಕೆತ್ತನೆ ಕೆಲಸ ಮುಗಿಸಿ ಬಣ್ಣ ಬಳಿಯುವ ಕಾರ್ಯ ಪೂರ್ಣಗೊಂಡಿದೆ. ಮಾರಿಗುಡಿ ಸಮಿತಿ ಅಧ್ಯಕ್ಷ ಪರಮೇಶ್ವರ ಎಚ್.ನಾಯ್ಕ ಕೋಣೆಮನೆ, ಶ್ರೀಪಾದ ಕಂಚುಗಾರ, ರಘುವೀರ ಬಾಳಗಿ, ನರೇಂದ್ರ ನಾಯಕ, ಶ್ರೀಧರ ನಾಯ್ಕ ಹಾಗೂ ಪದಾಧಿಕಾರಿಗಳ ಮುಂದಾಳತ್ವದಲ್ಲಿ ಮಾರುತಿ ಆಚಾರ್ಯ ಅವರ ನೇತೃತ್ವದ ತಂಡದ ಶ್ರಮದಿಂದ ಸುಂದರ ಮೂರ್ತಿ ಈಗ ತಯಾರಾಗಿದ್ದು, ದೇವಸ್ಥಾನದ ಜಾತ್ರಾ ಮಂಟಪದಲ್ಲಿ ತಾಯಿ ವಿರಾಜಮಾನಳಾಗಿದ್ದಾಳೆ.

    ಮಂಗಳವಾರದoದು ತಡರಾತ್ರಿ ಮಣ್ಕುಳಿಯ ತವರು ಮನೆಯಲ್ಲಿ (ಮಾರಿ ಮೂರ್ತಿ ತಯಾರಕರು) ವಿಶ್ವಕರ್ಮ ಸಮಾಜದವರು ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಮೂರ್ತಿಗೆ ವಿಶ್ವಕರ್ಮ ಮಹಿಳೆಯರಿಂದ ಸುಹಾಸಿನಿ ಪೂಜೆ, ಷೋಡಶೋಪಚಾರ ಪೂಜೆಯೂ ಸಹ ನಡೆಯಿತು. ಈ ವೇಳೆ ಸಮಾಜದ ಮಹಿಳೆಯರೊಬ್ಬರ ಮೇಲೆ ಮಾರಿ ದೇವಿ ಮೈ ದರ್ಶನ ನೀಡಿದಳು. ಇದು ನೆರೆದವರ ಮೈ ರೋಮಾಂಚನಗೊಳಿಸಿತು. ಇಂದು ಮುಂಜಾನೆ ಸೂರ್ಯೋದಯಕ್ಕೂ ಪೂರ್ವ ವಿಶ್ವಕರ್ಮ ಸಮಾಜದವರ ಮೆರವಣಿಗೆಯಲ್ಲಿ ಪೇಟೆ ರಸ್ತೆಯಲಿರುವ ಮಾರಿಕಾಂಬಾ ದೇವಾಲಯಕ್ಕೆ ಬಂದ ಮಾರಿಯಮ್ಮ, ಗದ್ದುಗೆ ಏರಿ ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ. ನಾಳೆ ಸಂಜೆಯವರೆಗೆ ಕುಳಿತು ಭಕ್ತರ ಇಷ್ಟಾರ್ಥಗಳನ್ನ ಕೇಳಿ, ಹರಕೆ- ಪೂಜೆಗಳನ್ನ ಸ್ವೀಕರಿಸುವ ತಾಯಿ, ಗುರುವಾರ ಸಂಜೆ ಗದ್ದುಗೆಯಲ್ಲಿ ವಿಸರ್ಜನಾ ಪೂಜೆ ಪಡೆದು, ಮತ್ತೆ ಮೆರವಣಿಗೆಯಲ್ಲಿ ಜಾಲಿಕೋಡಿ ಸಮುದ್ರಕ್ಕೆ ತೆರಳಲಿದ್ದಾಳೆ. ಅಲ್ಲಿ ಮಾರಿಯಮ್ಮನನ್ನ ವಿಸರ್ಜಿಸುವ ಮೂಲಕ ಮಾರಿ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ.

    ಕೋಟ್…

    300x250 AD

    ಮಾರಿ ದೇವಿ ಜಾತ್ರೆಯು ಬೇರೆ ಜಾತ್ರೆಯಂತಲ್ಲ. ಸಂಪ್ರದಾಯದoತೆ ನಿಗದಿತ ವಿಧಿವಿಧಾನಗಳ ಪೂಜಾ ಕೈಂಕರ್ಯಗಳು ನಡೆಸಲೇಬೇಕಿದೆ. ಹಿರಿಯರು ಮಾಡಿಕೊಂಡು ಬಂದ ಸೇವೆಯನ್ನು ಮುಂದುವರೆಸಿಕೊoಡು ಸೇವೆ ರೂಪದಲ್ಲಿ ಮಾಡುತ್ತಿದ್ದೇವೆ.–· ಮಾರುತಿ ಆಚಾರಿ, ಮಾರಿದೇವಿ ಮೂರ್ತಿ ತಯಾರಕರು

    ಕೊರೋನಾ ಬಳಿಕ ಈ ವರ್ಷ ವಿಜೃಂಭಣೆಯಿoದ ಹಬ್ಬವನ್ನು ಆಚರಿಸುತ್ತಿದ್ದೇವೆ. ಈ ಬಾರಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರಲಿದ್ದು, ಅವರ ನಡುವೆ ಜಾತ್ರೆ ಸಾಂಗವಾಗಿ ನೆರವೇರಲು ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದ್ದೇವೆ. ಭಕ್ತರಿಗೆ ಎಲ್ಲಾ ಸೇವೆ ನಡೆಸಲು ಅವಕಾಶವಿದೆ.-· ಪರಮೇಶ್ವರ ನಾಯ್ಕ, ಮಾರಿಕಾಂಬಾ ದೇವಸ್ಥಾನ ಕಮಿಟಿ ಅಧ್ಯಕ್ಷರು

    ಭಟ್ಕಳದಲ್ಲಿ ಮಾರಿಕಾಂಬಾ ದೇವಿ ಜಾತ್ರೆಯು ಜು.26ರಿಂದ 28ರವರೆಗೆ ಆಚರಿಸುತ್ತಿದ್ದು, ಜಾತ್ರೆಯ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಭಟ್ಕಳ ತಾಲೂಕಿನಾದ್ಯಂತ ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಜು.27ರ ಸಂಜೆ 6 ಗಂಟೆಯಿoದ 28ರ ರಾತ್ರಿ 12 ಗಂಟೆಯವರೆಗೆ ಭಟ್ಕಳ ತಾಲೂಕಿನಲ್ಲಿ ಬರುವ ಎಲ್ಲಾ ಮದ್ಯದಂಗಡಿ, ವೈನ್ ಶಾಪ್ ಮತ್ತು ಬಾರ್‌ಗಳನ್ನು ಬಂದ್ ಮಾಡುವಂತೆ ಸೂಚಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top