Slide
Slide
Slide
previous arrow
next arrow

ಚಿನ್ನಾಪುರ ಶಾಲೆಯಲ್ಲಿ ವನಮಹೋತ್ಸವ

300x250 AD

ಯಲ್ಲಾಪುರ: ತಾಲೂಕಿನ ಚಿನ್ನಾಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.ನಿವೃತ್ತ ವನಪಾಲಕ ನಾಗೇಶ ನಾಯಕ ಶಾಲಾ ಆವಾರದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಮನಮಹೋತ್ಸವ ನೆರವೇರಿಸಿದರು.

ನಂತರ ಮಾತನಾಡಿದ ಅವರು,”ಪ್ರಾಣವಾಯು ನೀಡುವ ಹಸಿರನ್ನು ಕಾಪಾಡುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ.ಪರಿಸರ ಕಾಯ್ದುಕೊಂಡರೆ ಮಾತ್ರ ಅದು ನಮ್ಮನ್ನು ಕಾಯುತ್ತದೆ” ಎಂದರು.

ಸಾಹಿತಿ ಸುಬ್ರಾಯ ಬಿದ್ರೆಮನೆ ಅಧ್ಯಕ್ಷತೆ ವಹಿಸಿ,”ಪರಿಸರದ ಪ್ರೀತಿ ಬಾಲ್ಯದಲ್ಲಿಯೇ ಬೆಳೆಯಬೇಕೆಂಬ ನೆಲೆಯಲ್ಲಿ ಶಾಲಾ ಆವಾರದಲ್ಲಿ ವನಮಹೋತ್ಸವ ಮಾಡಲಾಗಿದೆ.ನೆಟ್ಟಗಿಡ ಪೋಷಿಸುವ ಕಾಳಜಿ ಮಕ್ಕಳಲ್ಲಿ ಬಂದರೆ,ಸಾರ್ಥಕತೆ ಎನಿಸುತ್ತದೆ” ಎಂದರು.

300x250 AD

ಪ್ರಮುಖರಾದ ವಾಮನ ದೇವಳಕರ,ವಿಶ್ವನಾಥ ಭಟ್ಟ,ಶಿಕ್ಷಕರಾದ ಈಶ್ವರ ಪಟಗಾರ,ದಿನೇಶ ಭಟ್ಟ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಭಾರ್ಗವಿ ಸ್ವಾಗತಿಸಿದರು.ನಾಗಶ್ರೀ ವಂದಿಸಿದರು.

Share This
300x250 AD
300x250 AD
300x250 AD
Back to top