Slide
Slide
Slide
previous arrow
next arrow

ಸಮಾಜದ ತಪ್ಪು-ಒಪ್ಪು ತೆರೆದಿಡುವ ಕೆಲಸ ಪತ್ರಕರ್ತರದ್ದು:ಸಚಿವ ಹೆಬ್ಬಾರ್

300x250 AD

ಯಲ್ಲಾಪುರ : ಮಾಧ್ಯಮ ಕ್ಷೇತ್ರ ಅಪಮೌಲ್ಯಕ್ಕೊಳಗಾಗಬಾರದು. ನಿರ್ಭಿಡಯದಿಂದ ಸಮಾಜದಲ್ಲಿನ ತಪ್ಪು ಒಪ್ಪುಗಳನ್ನು ಜನರೆದುರು ತೆರೆದಿಡುವ ಕಾರ್ಯ ಪತ್ರಕರ್ತರಿಂದ ಆಗಬೇಕು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

   ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಯಲ್ಲಾಪುರ ಘಟಕ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಲಾ ರಂಗಗಳೂ ಮೌಲ್ಯ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಇದಕ್ಕೆ ಕಾರಣ ಯಾರು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದನ್ನು ತಿದ್ದಬೇಕಾದ ಜವಾಬ್ದಾರಿ ಪತ್ರಿಕಾ ರಂಗದ ಮೇಲಿದೆ ಎಂದರು.

   ಆದರ್ಶ ಸಮಾಜದ ಬಗೆಗೆ ಮಾತನಾಡುವ ನಾವು, ಅದರ ಆದರ್ಶಗಳ ಮೌಲ್ಯ ಕುಸಿತವಾಗುತ್ತಿರುವವ ಬಗ್ಗೆ ಮಾತನಾಡುತ್ತಿಲ್ಲ. ನಮ್ಮ ತಪ್ಪುಗಳನ್ನೇ ನಾವು ಸಮರ್ಥನೆ ಮಾಡಿಕೊಳ್ಳುತ್ತಿದ್ದೇವೆ. ಈ ಮನಸ್ಥಿತಿಯಿಂದ ಹೊರಬರಬೇಕಾದದ್ದು ಅಗತ್ಯ ಎಂದ ಅವರು, ಈ ವಿಷಯಗಳ ಕುರಿತು ಗಂಭೀರ ಚರ್ಚೆ, ಸಂವಾದಗಳು ಆಗಾಗ ನಡೆದರೆ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಬಹುದು ಎಂದರು.

   ವಿಜಯವಾಣಿ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ಮುಖ್ಯ ಉಪಸಂಪಾದಕ ಜಿ.ಟಿ.ಹೆಗಡೆ ದಿಕ್ಸೂಚಿ ಭಾಷಣ ಮಾಡಿ, ಪತ್ರಿಕೆಗಳನ್ನು ಓದುವುದರಿಂದ ಸಮಾಜದಲ್ಲಿ ಯಾವುದು ಒಳ್ಳೆಯದು, ಕೆಟ್ಟದ್ದು ಎಂಬ ಅರಿವು ಬರುತ್ತದೆ. ಅದು ನಮ್ಮ ಬದುಕು, ವ್ಯಕ್ತಿತ್ವವನ್ನು ಒಳ್ಳೆಯದಾಗಿಸಿಕೊಳ್ಳಲು ನೆರವಾಗುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆಗೆ ಮುಂದಾಗಲು ಉತ್ತಮ ಮಾರ್ಗ ಪತ್ರಿಕೆಯನ್ನು ಓದುವುದು. ಅದರಿಂದ ಯಾವುದು ನಮ್ಮನ್ನು ದಾರಿ ತಪ್ಪಿಸುತ್ತದೆ ಎಂಬ ವಿಷಯವನ್ನು ಅರಿತು, ನಾವು ದಾರಿ ತಪ್ಪದಂತೆ ಎಚ್ಚರ ವಹಿಸಲು ಸಾಧ್ಯ. ಪತ್ರಿಕೆಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

     ವಾ. ಕ. ರ. ಸಾ. ನಿಗಮದ ಅಧ್ಯಕ್ಷ ವಿ ಎಸ್ ಪಾಟೀಲ ಮಾತನಾಡಿ, ಸಾರ್ವಜನಿಕ ಜೀವನದಲ್ಲಿರುವ ನಮ್ಮ ತಪ್ಪುಗಳ ಕುರಿತು ಮಾಧ್ಯಮಗಳು ಬೆಳಕು ಚೆಲ್ಲಿದಾಗ ಪತ್ರಕರ್ತರನ್ನು ದೂಷಿಸದೇ ತಪ್ಪುಗಳನ್ನು ತಿದ್ದಿಕೊಳ್ಳುವ ಮನಸ್ಸು ಹೊಂದಿರಬೇಕು ಎಂದರು. 

300x250 AD

   ರಾಜ್ಯ ಸರ್ಕಾರದಿಂದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾದ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ, ಒಂಬತ್ತು ಬಾರಿ ಗ್ರಾ.ಪಂ ಸದಸ್ಯರಾಗಿ ಆಯ್ಕೆಯಾದ ಹಿರಿಯರಾದ ಶ್ರೀಕಾಂತ ಶೆಟ್ಟಿ, ಸಾಹಿತ್ಯ, ರಾಜಕೀಯ, ಪತ್ರಿಕೆ, ಸಾಮಾಜಿಕ ಕ್ಷೇತ್ರದಲ್ಲಿಯ ಸೇವೆಗೆ ಗ. ರಾ. ಭಟ್ , 50 ವರ್ಷಗಳಿಂದ ಮಣ್ಣಿನ ಮೂರ್ತಿ ನಿರ್ಮಾಣ ಮಾಡುತ್ತಿರುವ ಕಲಾವಿದ ವಿನಾಯಕ ಗುನಗಾ, ಯಲ್ಲಾಪುರದ ಪ್ರಥಮ ಆಟೋ ಚಾಲಕಿ ಗೋದಾವರಿ ಭಟ್ಟ ಇವರನ್ನು ಸನ್ಮಾನಿಸಲಾಯಿತು.

   ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಯಲ್ಲಾಪುರ ಘಟಕದ ಅಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ.ಪಂ ಅಧ್ಯಕ್ಷೆ ಸುನಂದಾ ದಾಸ್ ಮಾತನಾಡಿದರು. 

  ವಿದ್ಯಾರ್ಥಿನಿ ಆಶಾ ಬೆಳ್ಳನ್ನವರ್, ಕಾಲೇಜಿನ ಪ್ರಾಂಶುಪಾಲ ಡಿ.ಎಸ್.ಭಟ್ಟ, ಕರ್ನಾಟಕ ಜರ್ನಲಿಸ್ಟ್ ಯುನಿಯನ್ ಕಾರ್ಯದರ್ಶಿ ಕೇಬಲ್ ನಾಗೇಶ, ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗರಾಜ ಮದ್ಗುಣಿ, ತಾಲೂಕು ಘಟಕದ ಉಪಾಧ್ಯಕ್ಷ ವಿ.ಜಿ.ಗಾಂವ್ಕಾರ, ಸದಸ್ಯರಾದ ಜಗದೀಶ ನಾಯಕ, ವೇಣುಗೋಪಾಲ ಮದ್ಗುಣಿ, ಅಚ್ಯುತಕುಮಾರ, ಅಕ್ಷಯ ಶೆಟ್ಟಿ ನಿರ್ವಹಿಸಿದರು. ಖಜಾಂಚಿ ಸತೀಶ ನಾಯ್ಕ, ಸದಸ್ಯ ಸಿ.ಆರ್.ಶ್ರೀಪತಿ ಸಹಕರಿಸಿದರು. ನಂತರ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪತ್ರಿಕೆ ಹಾಗೂ ವರದಿಗಾರಿಕೆಗೆ ಸಂಬಂಧಿಸಿದಂತೆ ಜಿ.ಟಿ.ಹೆಗಡೆ ಸಂವಾದ ನಡೆಸಿದರು.

Share This
300x250 AD
300x250 AD
300x250 AD
Back to top