ಶಿರಸಿ: ಕಳೆದ 2015ರಿಂದ ಆರಂಭಗೊಂಡ ಬೆಂಗಳೂರಿನ ಕ್ರಿಯಾಶೀಲ ರಂಗಭೂಮಿ ತಂಡವೊಂದು ನಗರದ ನಯನ ಸಭಾಂಗಣದಲ್ಲಿ ಜು.23ರ ಸಂಜೆ 7ಕ್ಕೆ ‘ಕೋವಿಗೊಂದು ಕನ್ನಡಕ’ ನಾಟಕ ಪ್ರದರ್ಶಿಸಲಿದೆ.
ನಯನ ಫೌಂಡೇಶನ್, ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಬೆಂಗಳೂರು ಥಿಯೇಟರ್ ಕಲೆಕ್ಟೀವ್ ತಂಡ ಈ ನಾಟಕ ಪ್ರದರ್ಶನ ಮಾಡಲಿದೆ.
ಮೂಲ ಸ್ಕಾವೋಮೀರ್ ಮ್ರಾರ್ಜೆಕ್ ರ ಚಾರ್ಲಿಯ ರೂಪಾಂತರ ಹಾಗೂ ನಿರ್ದೇಶನವನ್ನು ವೆಂಕಟೇಶ ಪ್ರಸಾದ ಮಾಡಿದ್ದಾರೆ. ರಂಗದಲ್ಲಿ ವಿಜಯ ಕುಲಕರ್ಣಿ, ರಾಗ್ ಅರಸ್, ಫಣೇಶ ಪಿ ಕಾಣಿಸಲಿದ್ದಾರೆ. ರಂಗ ಶಾಸ್ತ್ರದಲ್ಲಿ ನಿಶಾ ಅಬ್ದುಲ್ಲಾ, ರಂಗ ವಿನ್ಯಾಸದಲ್ಲಿ ಶ್ರೀಧರ ಮೂರ್ತಿ, ರಂಗ ಪರಿಕರ ಸಹಾಯ ಜುಟ್ಟಿ ಮಾಡಲಿದ್ದಾರೆ. ಸಂಗೀತ ಸಂಯೋಜನೆ ಉತ್ಥಾನ ಭಾರೀಘಾಟ್ , ಬೆಳಕು ವಿನ್ಯಾಸ ವಿನಯ ಚಂದ್ರ ಪಿ, ರಂಗ ನಿರ್ವಹಣೆ ಅರುಣ ಡಿಟಿ, ರಷ್ಮಿ ಮಾಡಲಿದ್ದಾರೆ. ಭಿತ್ತಿ ಪತ್ರ ವಿನ್ಯಾಸ ಸತೀಶ ರಂಗಯ್ಯ ಮಾಡಿದ್ದಾರೆ.