• Slide
  Slide
  Slide
  previous arrow
  next arrow
 • ಸಂಪೂರ್ಣ ಹೊಂಡಮಯ ರಸ್ತೆ: ಸೇತುವೆ ಇದ್ದರೂ ಕಾಲ್ನಡಿಗೆಯೇ ಗತಿ

  300x250 AD

  ಕಾರವಾರ: ತುರ್ತು ಸಂದರ್ಭದಲ್ಲಿ ಜಿಲ್ಲಾ ಕೇಂದ್ರವಾದ ಕಾರವಾರದಿಂದ ಕೈಗಾ ಅಣುವಿದ್ಯುತ್ ಸ್ಥಾವರಕ್ಕೆ ಸಂಪರ್ಕ ಕಲ್ಪಿಸಲು ಸಂಚಾರ ದೂರವನ್ನು ಕಡಿಮೆ ಮಾಡಬಹುದಾದ ಬಡಜೂಗ ಹಾಗೂ ಕಾತರ ನಡುವೆ ಸೇತುವೆ ನಿರ್ಮಾಣವಾಗಿದೆ. ಸೇತುವೆ ನಿರ್ಮಾಣವಾದರೂ ಸಕಲವಾಡಾದಿಂದ ಬಡಜೂಗದವರೆಗಿನ ರಸ್ತೆ ಸಂಪೂರ್ಣ ಹೊಂಡಮಯವಾಗಿರುವದರಿಂದ ನಿರ್ಮಾಣಗೊಂಡ ಸೇತುವೆಯ ಲಾಭ ಇಲ್ಲದಂತಾಗಿದೆ.

  ವೈಲವಾಡ ಗ್ರಾ. ಪಂ. ವ್ಯಾಪ್ತಿಯ ಬಡಜೂಗ ಹಾಗೂ ಕೆರವಡಿ ಗ್ರಾ. ಪಂ. ವ್ಯಾಪ್ತಿಯ ಕಾತರ ನಡುವೆ ಕಾಳಿನದಿ ಹಾಗೂ ಅದರ ಉಪನದಿಯಾದ ಕಾಣಿಕೆ ನದಿಯ ಸಂಗಮ ಪ್ರದೇಶದಲ್ಲಿ ಸೇತುವೆ ನಿರ್ಮಾಣಗೊಂಡು ವರ್ಷಗಳೆ ಕಳೆದಿವೆ. ಆದರೆ ವೈಲವಾಡಾ ಗ್ರಾ. ಪಂ. ವ್ಯಾಪ್ತಿಯ ಸಕಲವಾಡಾದಿಂದ ಬಡಜೂಗದವರೆಗೆ ಸುಮಾರು 2-3 ಕಿ. ಮಿ. ದೂರದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕೆಲ ನಾಯಕರು ಈ ರಸ್ತೆಗಾಗಿ 40 ಲಕ್ಷ ಅನುದಾನ ಮಂಜೂರಾಗಿದ್ದು, ಸದ್ಯದಲ್ಲೆ ಹೊಸದಾಗಿ ರಸ್ತೆ ನಿರ್ಮಾಣವಾಗಲಿದೆ. ಹೇಳಿಕೆ ನೀಡಿದ್ದರು ಹೊಸ ರಸ್ತೆ ನಿರ್ಮಾಣ ಹೋಗಲಿ, ಇರುವ ರಸ್ತೆಯಲ್ಲಿನ ದೊಡ್ಡ ದೊಡ್ಡ ಹೊಂಡಗಳನ್ನು ಮುಚ್ಚುವ ಕಾರ್ಯವೂ ನಡೆಯಲಿಲ್ಲ. ಇದರಿಂದಾಗಿ ಸದ್ಯ ಆ ರಸ್ತೆಯಲ್ಲಿ ಕೈಗಾಕ್ಕೆ ಕೆಲಸಕ್ಕೆ ಹೋಗುವ ದ್ವಿಚಕ್ರ, ಲಘುವಾಹನ ಹೊಂದಿದವರು ಸಂಚರಿಸುವುದನ್ನೆ ಬಿಡುವಂತಾಗಿದೆ. ಅದರಲ್ಲೂ ಬಡಜೂಗದ ನಿವಾಸಿಗರು ರಾತ್ರಿ-ಅಪರಾತ್ರಿಯಲ್ಲಿ ಸಂಚರಿಸಬೇಕಾದ ತುರ್ತು ಪರಿಸ್ಥಿತಿ ಬಂದರೆ ಕಾಲ್ನಡಿಗೆಯಲ್ಲಿ ಸಂಚರಿಸಬೇಕು. ಅದರಲ್ಲೂ ಕದ್ರಾ ಜಲಾಶಯದಿಂದ ನೀರು ಬಿಟ್ಟಾಗ ಮುಳುಗಡೆಯಾಗುವ ಪ್ರದೇಶಗಳಲ್ಲಿ ಕಾಳಿನದಿ ತಟದಲ್ಲಿರುವ ಬಡಜೂಗವೂ ಒಂದು, ಅಂತಹ ತುರ್ತು ಪರಿಸ್ಥಿತಿಯಲ್ಲಿ ಬಡಜೂಗದ ನಿವಾಸಿಗರು ಸುರಕ್ಷಿತ ಸ್ಥಳಕ್ಕೆ ಹೋಗಬೇಕಾದರೂ ಕಾಲ್ನಡಿಗೆಯಲ್ಲೆ ಹೋಗಬೇಕು. ಆದ್ದರಿಂದ ಸಂಬಂಧಪಟ್ಟವರು ಅಲ್ಲಿನ ಅವ್ಯವಸ್ಥೆಯನ್ನು ನೋಡಿ ತಾತ್ಕಾಲಿಕವಾದರೂ ರಸ್ತೆಯ ಮೇಲಿನ ದೊಡ್ಡ-ದೊಡ್ಡ ಹೊಂಡಗಳನ್ನು ಮುಚ್ಚುವ ಕಾರ್ಯವನ್ನು ತಕ್ಷಣ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top