• Slide
  Slide
  Slide
  previous arrow
  next arrow
 • ಓಸಿ- ಮಟಕಾ ಅಡ್ಡೆ ಮೇಲೆ ಪೊಲೀಸ್ ದಾಳಿ: ಆರೋಪಿಗಳ ಬಂಧನ

  300x250 AD

  ಹಳಿಯಾಳ :ಪಟ್ಟಣದ ಫಿಶ್ ಮಾರ್ಕೇಟ್ ಸರ್ಕಲ್ ಬಳಿ ತಮ್ಮ ಅಕ್ರಮ ಲಾಭಕ್ಕೋಸ್ಕರ ಓಸಿ- ಮಟಕಾ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಹಳಿಯಾಳ ನೂತನ ಪಿಎಸ್ ಐ ವಿನೋದ ರೆಡ್ಡಿ ನೇತೃತ್ವದಲ್ಲಿ ಪೊಲಿಸ್ ತಂಡ ಕಾರ್ಯಾಚರಣೆ ನಡೆಸಿ ಆರೊಪಿ ಪರಶುರಾಮ ಬೈಲಪ್ಪಗೋಳ ಎಂಬಾತನನ್ನು ಬಂಧಿಸಿ ಆತನಿಂದ ಓಸಿ, ಜೂಜಾಟದ ಸಾಮಾಗ್ರಿ ಹಾಗೂ ಹಣವನ್ನು ವಶಕ್ಕೆ ಪಡೆದಿದ್ದಾರೆ.

  ದಾಳಿ ವೇಳೆ ಬಂಧಿತ ಆರೋಪಿ ಪರಶುರಾಮನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಓಸಿ- ಮಟಕಾ ಜೂಜಾಟದ ಪ್ರಮುಖ ವ್ಯಕ್ತಿ ಪಟ್ಟಣದ ಮೇದಾರಗಲ್ಲಿಯ ಚಂದ್ರಕಾಂತ ಸಿದ್ದಪ್ಪ ಗೊಂಧಳಿ ಇತನಿಗೆ ತಾವು ಓಸಿ ಚೀಟಿ ನೀಡುತ್ತಿದ್ದು ಇತನೇ ತಮ್ಮ ಬುಕ್ಕಿ ಆಗಿದ್ದಾನೆ ಎಂದು ಬಾಯಿ ಬಿಟ್ಟಿದ್ದಾನೆ. ಎರಡನೇ ದಾಳಿಯು ಇದೇ ಪ್ರದೇಶದಲ್ಲಿ ನಡೆದಿದ್ದು ಪ್ರಕಾಶ ಡಿಸೋಜಾ ಎಂಬ ಎರಡನೇ ಆರೋಪಿಯನ್ನು ಬಂಧಿಸಲಾಗಿದ್ದು ಇತನ ವಿಚಾರಣೆ ವೇಳೆ ಕೂಡ ಚಂದ್ರಕಾಂತ ಗೋಂಧಳಿಯೇ ಬುಕ್ಕಿ ಆತನ ಬಳಿಯೇ ತಮ್ಮ ವ್ಯವಹಾರ ಎಂದು ಪೊಲಿಸರಿಗೆ ಹೇಳಿದ್ದಾನೆ.

  300x250 AD

  ಹಳಿಯಾಳ ಪೊಲಿಸ್ ಠಾಣೆಯಲ್ಲಿ ಆರೋಪಿ ಪರಶುರಾಮ ಮತ್ತು ಪ್ರಮುಖ ಓಸಿ ಬುಕ್ಕಿ ಚಂದ್ರಕಾಂತ ಸಿದ್ದಪ್ಪ ಗೋಂಧಳಿ ವಿರುದ್ಧ ಪ್ರಕರಣ ದಾಖಲಾಗಿದೆ.ಓಸಿ ಬುಕ್ಕಿ ಚಂದ್ರಕಾಂತ ಪರಾರಿಯಾಗಿದ್ದು ಪೊಲಿಸರು ಇತನನ್ನು ಬಂಧಿಸಲು ಶೋಧ ಕಾರ್ಯ ಆರಂಭಿಸಿದ್ದು, ತನಿಖೆ ನಡೆಸಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಕ್ರೈಂ ಪಿಎಸ್ ಐ ಉಮಾ ಬಸರಕೋಡ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top