ಅಂಕೋಲಾ: ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಆಶ್ರಯದಲ್ಲಿ ರಾಜ್ಯ ಜಾವೆಲಿನ್ ಎಸೆತದ ಸ್ಪರ್ಧೆಯನ್ನು ಆ.07ರಂದು ನಡೆಸಲು ತೀರ್ಮಾನಿಸಿದೆ.
ಈ ಸ್ಪರ್ಧೆಯನ್ನು ಯು-20, ಯು18, ಯು-16 ಬಾಲಕ- ಬಾಲಕಿಯರಿಗಾಗಿ ಹಾಗೂ ಪುರುಷ-ಮಹಿಳೆಯರ ವಿಭಾಗದಲ್ಲಿ ನಡೆಸಲಾಗುವುದು. ಅಲ್ಲದೇ ಕಿರಿಯ ವಿಭಾಗದಲ್ಲಿ ಯು-8, ಯು-10, ಯು-12 ಹಾಗೂ ಯು-14 ಬಾಲಕ- ಬಾಲಕಿಯರಿಗೂ ಸಹ ಕಿರಿಯರ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ.
ಭಾಗವಹಿಸಲಿಚ್ಛಿಸುವ ನಮ್ಮ ಜಿಲ್ಲೆಯ ಕ್ರೀಡಾಪಟುಗಳು ಜು.30ರೊಳಗೆ ತಮ್ಮ ಸಂಪೂರ್ಣ ವಿವರಗಳೊಂದಿಗೆ ಕೆ.ಆರ್.ನಾಯಕ, ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ, ಬೇಲೆಕೇರಿ (ಮೊಬೈಲ್ ಸಂಖ್ಯೆ: 98458 46351) ಇವರನ್ನು ಸಂಪರ್ಕಿಸಲು ಕೋರಲಾಗಿದೆ.