Slide
Slide
Slide
previous arrow
next arrow

ಪ್ರೌಢಶಾಲಾ ಸಹಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳಿಗೆ ನೌಕರ ಸಂಘದ ವತಿಯಿಂದ ಅಭಿನಂದನೆ

300x250 AD

ಯಲ್ಲಾಪುರ: ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಅಜೇಯ ನಾಯಕ ಹಾಗೂ ಪದಾಧಿಕಾರಿಗಳನ್ನು ಗುರುವಾರ ಪಟ್ಟಣದ ನೌಕರ ಭವನದಲ್ಲಿ ನೌಕರ ಸಂಘದ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.

ಫ್ರೌಢಶಾಲೆ ಸಹ ಶಿಕ್ಷಕ ಸಂಘದ ಪದಾಧಿಕಾರಿಗಳಾದ  ವೆಂಕಟೇಶ್ ಪಾಲನಕರ್,ಚಂದ್ರಶೇಖರ ಎಸ್.ಸಿ,ಕೆ.ಸಿ ಮಾಳ್ಕರ್ ಅವರನ್ನು ನೌಕರ ಸಂಘದ ತಾಲೂಕಾ ಅಧ್ಯಕ್ಷ ಪ್ರಕಾಶ ನಾಯಕ ಅಭಿನಂದಿಸಿದರು.ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಎಚ್ ನಾಯಕ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಆರ್.ನಾಯಕ,ನೌಕರ ಸಂಘದ ರಾಜ್ಯ ಪರಿಷತ್ತಿನ ಸದಸ್ಯ ಸಂಜೀವಕುಮಾರ ಹೊಸ್ಕೇರಿ,ತಾಲೂಕಾ ನೌಕರ ಸಂಘದ ಖಜಾಂಚಿ ಸುಭಾಸ್ ನಾಯಕ ಇದ್ದರು.

300x250 AD

ನೌಕರ ಸಂಘದ ಕಾರ್ಯದರ್ಶಿ ಶರಣಪ್ಪ ಸ್ವಾಗತಿಸಿದರು.ಶಿಕ್ಷಕ ಎಂ.ರಾಜಶೇಖರ ಪ್ರಸ್ತಾಪಿಸಿದರು.ಫ್ರೌಢಶಾಲಾ ಸಹಶಿಕ್ಷಕ ಸಂಘದ ನಿಕಟಪೂರ್ವ ಅಧ್ಯಕ್ಷ ನಿತೀಶ ತೋರ್ಕೆ,ಮಾಧ್ಯಮಿಕ ಶಾಲಾ ನೌಕರ ಸಂಘದ ತಾಲೂಕಾ  ಅಧ್ಯಕ್ಷ ಎಂ.ಕೆ.ಭಟ್ಟ ವಜ್ರಳ್ಳಿ,ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top