Slide
Slide
Slide
previous arrow
next arrow

ಹವ್ಯಕ ಸೇವಾ ಪ್ರತಿಷ್ಠಾನ ವತಿಯಿಂದ ಸಾಧಕರಿಗೆ ಸನ್ಮಾನ

300x250 AD

ಕುಮಟಾ: ಹವ್ಯಕ ಸೇವಾ ಪ್ರತಿಷ್ಠಾನದ ವತಿಯಿಂದ ತಾಲೂಕಿನ ಬಡಗಣಿಯ ಗೋಗ್ರೀನ್ ಹೋಂಮ್ ಸ್ಟೇ ಯಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಐಎಫ್‌ಎಸ್ ಪರೀಕ್ಷೆಯಲ್ಲಿ 62 ನೇ ರ‍್ಯಾಂಕ್ ಪಡೆದ ಅಚವೆಯ ಎಸ್.ನವೀನಕುಮಾರ ಹೆಗಡೆ, ಹಾಗೂ ಚಂಡೀಗಡ ವಿಶ್ವವಿದ್ಯಾಲಯದಲ್ಲಿ ಗೋಲ್ಡ್ ಮೆಡಲ್ ಪಡೆದು ಅನಸ್ತೇಷಿಯಾ ಸ್ಪೆಷಲಿಸ್ಟ್ ಆಗಿರುವ ಧಾರೇಶ್ವರದ ಕಡೇಕೋಡಿಯ ಕವಿತಾ ಭಾಗವತ, ಸಿ.ಎ ಪರೀಕ್ಷೆಯಲ್ಲಿ ಸಾಧನೆಮಾಡಿದ ಕುಮಟಾದ ಹೆಗಡೆಯ ಪವನ ಹೆಗಡೆಯವರ ಪರವಾಗಿ ಅವರ ಅವರ ತಂದೆ ಡಾ.ಗೋಪಾಲಕೃಷ್ಣ ಹೆಗಡೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್.ನವೀನಕುಮಾರ ಹೆಗಡೆ, ಹವ್ಯಕ ಸಮುದಾಯದವರು ಬುದ್ಧಿವಂತರಾಗಿದ್ದರೂ ತಮ್ಮ ಊರನ್ನು ಬಿಡಲು ತಮ್ಮವರನ್ನು ಬಿಡಲು ಇಷ್ಟಪಡುವುದಿಲ್ಲ. ಹೀಗಾಗಿ ಸಾಧನೆ ಮಾಡಿದರೂ ಉನ್ನತ ಹುದ್ದೆಗೆ ಹೋಗುತ್ತಿಲ್ಲ. ಆದರೆ ಉನ್ನತ ಹುದ್ದೆಯಲ್ಲಿದ್ದು, ಸಮಾಜಕ್ಕೆ ದಾರಿ ತೋರುವ ಅಗತ್ಯತೆ ಇದೆ ಎಂಬ ಕಾರಣಕ್ಕೆ ನಾನು ಈ ದಿಶೆಯಲ್ಲಿ ಮುಖ ಮಾಡಿದೆ ಎಂದರು. ಸಾಧನೆಯ ಹಿಂದಿರುವ ಕುಟುಂಬದ ಸದಸ್ಯರನ್ನು ಅಭಿವಂದಿಸಿದರು.

ಡಾ.ಕವಿತಾ ಭಾಗವತ ಮಾತನಾಡಿ, ನಾನು ಬಡತನದಲ್ಲಿ ಕಲಿತು ಬಂದವಳು. ಜೀವನದ ಒಂದು ಘಟ್ಟದಲ್ಲಿ ಡಾಕ್ಟರ್ ಆಗಬೇಕೆಂದು ಕಲ್ಪಿಸಿಕೊಂಡು ಆ ಕಡೆಗೆ ಸಾಧನೆ ಮಾಡಿದೆ. ಬದುಕಿಗಾಗಿ ಸಾಲ ಸೂಲ ಮಾಡಿ ನನ್ನನ್ನು ಬೆಳೆಸಿದ ಪಾಲಕರು ನಿಜವಾಗಿಯೂ ನನ್ನ ಪಾಲಿಗೆ ಆದರ್ಶವಾದವರು. ಸಮಾಜದ ಜನರು ಇಷ್ಟು ಪ್ರೀತಿಯಿಂದ ನನ್ನನ್ನು ಕರೆದು ಗೌರವಿಸುವ ಮೂಲಕ ಮಾತೇ ಬರದಂತೆ ಮಾಡಿದ್ದೀರಿ. ಸಮಾಜಕ್ಕೆ ನನ್ನ ಕೊಡುಗೆ ಕಡಿಮೆಯೇ ಆದರೂ ನೀವೆಲ್ಲಾ ನೀಡಿದ ಪ್ರೀತಿ ಹೆಚ್ಚು ಎಂದು ಅವರು ಭಾವುಕರಾಗಿ ಮಾತನಾಡಿದರು.

ಡಾ.ಗೋಪಾಲಕೃಷ್ಣ ಹೆಗಡೆ ಮಾತನಾಡಿ, ಹವ್ಯಕ ಸಮಾಜ ಎಲ್ಲಾ ಅಳುಕುಗಳನ್ನೂ ಬಿಟ್ಟು ಮೇಲೇಳಬೇಕು. ಸಮಾಜದಲ್ಲಿ ಸಂಘಟನೆಗೆ ಒಂದು ಸ್ವರೂಪ ನೀಡಬೇಕು, ರಿಜಿಸ್ಟರ್ ಸಂಘಟನೆಗಳ ಮೂಲಕ ಎಲ್ಲವನ್ನೂ ಸಮರ್ಥವಾಗಿ ಎದುರಿಸುವ ಕಾರ್ಯ ಆಗಬೇಕು ಎಂದು ಅಭಿಪ್ರಾಯಪಟ್ಟರು, ಮಗನ ಸಾಧನೆ ಬಗ್ಗೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಶೀರ್ವಾದ ಸ್ಮರಿಸಿದ ಅವರು ಸಾಧನೆಯ ಮೂಲಕ ಪವನ್ ಕುಟುಂಬದ ನಮಗೆಲ್ಲಾ ಹೆಮ್ಮೆ ತಂದಿದ್ದಾನೆ ಎಂದರು.

300x250 AD

ಸಭೆಯ ಅತಿಥ್ಯ ವಹಿಸಿದ್ದ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಸಮಾಜದ ಸಾಧಕರನ್ನು ಸನ್ಮಾನಿಸುವ ಮೂಲಕ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿ, ಅವರ ಕರ್ತವ್ಯ ನೆನಪಿಸುವ ಕಾರ್ಯ ಇಂದು ಆಗಿರುವುದು ಅರ್ಥಪೂರ್ಣವಾಗಿದೆ. ಇತರರಿಗೆ ತೊಂದರೆ ಕೊಡದ ಹಾಗೂ ಇತರರಿಗಾಗಿ ದುಡಿಯುವ ಸಮಾಜ ಹವ್ಯಕ ಸಮಾಜವಾಗಿದೆ ಎಂದು ಅಭಿಪ್ರಾಯಪಟ್ಟರು. ಬ್ರಾಹ್ಮಣರಲ್ಲಿ ಜನಸಂಖ್ಯೆ ಇದೆಯಾದರೂ ಒಗ್ಗಟ್ಟಿನ ಕೊರತೆ ಇದೆ, ಒಗ್ಗಟ್ಟು ಸ್ಥಾಪಿಸಲು ಇಂತಹ ಸಂಘಟನೆಗಳು ಸಹಾಯಕ ಎಂದರು.

ವೇದಿಕೆಯಲ್ಲಿ ಯುವ ಮುಖಂಡ ಭುವನ್ ಭಾಗ್ವತ್ ಹಾಜರಿದ್ದು ಸಮಾಜದ ಒಗ್ಗಟ್ಟು ತೋರಿಸುವ ಕೆಲಸ ಆಗಬೇಕು ಎಂದರು. ಹವ್ಯಕ ಸೇವಾ ಪ್ರತಿಷ್ಟಾನದ ಗೌರವಾಧ್ಯಕ್ಷರಾದ ರವೀಂದ್ರ ಭಟ್ಟ ಸೂರಿ ಸರ್ವರನ್ನೂ ಸ್ವಾಗತಿಸಿ, ಹವ್ಯಕ ಸೇವಾ ಪ್ರತಿಷ್ಠಾನ ನಡೆದು ಬಂದ ರೀತಿ ಹಾಗೂ ಸಂಸ್ಥೆಯ ಕಾರ್ಯದ ಬಗ್ಗೆ ತಿಳಿಸಿ, ಅತೀ ಶೀಘ್ರದಲ್ಲಿ ಬ್ರಹತ್ ಹವ್ಯಕ ಸಮ್ಮೇಳನ ನಡೆಸುವ ಇಂಗಿತ ವ್ಯಕ್ತಪಡಿಸಿದರು. ಎಸ್.ಜಿ ಹೆಗಡೆ ನವಿಲಗೋಣ, ಸೀತಾರಾಮ ಭಾಗ್ವತ್ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯದರ್ಶಿ ಆರ್.ಎನ್ ಹೆಗಡೆ ಕಾರ್ಯಕ್ರಮ ನಿರೂಪಿಸಿದರು, ಖಜಾಂಚಿ ಕೃಷ್ಣ ಹೆಗಡೆ ಸಹಕರಿಸಿದರು.

ಕೋಟ್…

ಹವ್ಯಕ ಸೇವಾ ಪ್ರತಿಷ್ಠಾನ ಪ್ರಾರಂಭದಲ್ಲಿ ಸಮಾಜದ ಜನರನ್ನು ಮೇಲಕ್ಕೆ ಎತ್ತುವ ಕಾರ್ಯ ಮಾಡಿದೆ. ಅನೇಕ ಕ್ಲಷ್ಟಕರ ಸನ್ನಿವೇಶಗಳಲ್ಲಿ ಸಮಾಜದ ಜೊತೆಗೆ ಇದ್ದು ಪ್ರತಿಷ್ಠಾನ ಈಗಾಗಲೇ ಸಮಾಜಮುಖಿಯಾಗಿದೆ ಎಂಬುದು ನಮ್ಮ ಹೆಮ್ಮೆ.–· ಎಂ.ಜಿ.ಭಟ್ಟ, ಹವ್ಯಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ

Share This
300x250 AD
300x250 AD
300x250 AD
Back to top